У нас вы можете посмотреть бесплатно ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ | ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳರು| ಕೋಣದ ಮರಿ| ಅವ್ವಕ್ಕ ... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#AKSHARATVKANNADA #ಅಕ್ಷರಟಿವಿಕನ್ನಡ ೧) ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪವರ್ ಟಿವಿ ಮೇಲೆ ಸರಕಾರದ ನಿರ್ಭಂದವನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಎಂ. ಸಾಧಿಕ ಅಲಿ, ರಾಜ್ಯ ಸಮಿತಿ ಸದಸ್ಯ ಜಿ.ಎಸ್. ಗೋನಾಳ, ಹರೀಶ್ ಹೆಚ್. ಎಸ್., ನಿಂಗಪ್ಪ ದೊಡ್ಡಮನಿ, ರಾಜು ಬಿ. ಆರ್., ಸಿರಾಜ್ ಬಿಸರಳ್ಳಿ, ಶಿವರಾಜ ನುಗಡೋಣಿ, ವೀರಣ್ಣ ಕಳ್ಳಿಮನಿ ಇತರರು ಇದ್ದರು. ೨) ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದ ಶ್ರೀ ಶಿವರಾಯ ದೇವಸ್ಥಾನದ ಲಕ್ಷಾಂತರ ರುಪಾಯಿ ಮೌಲ್ಯದ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳರು. ಬಂಗಾರ, ಬೆಳ್ಳಿ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ಕದ್ದ ಕಾರಣಕ್ಕೆ ಪೋಲಿಸರು ಶ್ವಾನದಳವನ್ನು ತಂದು ಕಳ್ಳರ ಪತ್ತೆಗೆ ಶ್ರಮಿಸಿದರು. ೩) ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ೩೭ ಕೋಣದ ಮರಿಗಳನ್ನು ರಕ್ಷಿಸಿದ ಘಟನೆ ಕುಮಟಾ ನಗರದಲ್ಲಿ ನಡೆದಿದ್ದು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಉತ್ತರ ಪ್ರದೇಶದ ಅರ್ಷದ್ ನಿಸಾರ್, ಹರಿಯಾಣದ ಇರ್ಷಾದ್ ಖಾನ್ ಇತರ ೩ ಆರೋಪಿಗಳನ್ನು ಗೋಕರ್ಣದಿಂದ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ಕಚಿತ ಮಾಹಿತಿ ಆಧಾರದ ಮೇರೆಗೆ ಗೋಕರ್ಣ ಪೋಲಿಸ್ ಇನ್ಸಪೆಕ್ಟರ್ ನವೀನ್ ನಾಯಕ್ ಅವರ ತಂಡ ಐವರು ಆರೋಪಿಗಳನ್ನು ಬಂಧಿಸಿ ಮೂರು ಲಕ್ಷ ಮೌಲ್ಯದ ೩೭ ಕೋಣದ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ. ೪) ಬಾಗಲಕೋಟ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಗ್ರಾಮದ ಅವ್ವಕ್ಕನ ಕೊಳ್ಳದ ರಮ್ಯ ಜಲಧಾರೆ ನೋಡಲು ಜನ ತಂಡೋಪ ತಂಡವಾಗಿ ಬಂದು ವೀಕ್ಷಣೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕೊಳ್ಳ ಪ್ರೇಕ್ಷಣಿಯ ಸ್ಥಳವಾಗಿದೆ. ಇಲ್ಲಿನ ಸ್ಥಳಿಯ ಆಡಳಿತ ಮಂಡಳಿ ಇತ್ತ ಗಮನಹರಿಸಿ ಮೂಲಭೂತ ಸೌಕರ್ಯ ಒದಗಿಸಿ, ಜನರು ಅವಘಡಕ್ಕೆ ಒಳಗಾಗದಂತೆ ನೋಡಿಕೊಂಡು ಇಲ್ಲಿನ ಸ್ಥಳದ ಅಭಿವೃದ್ಧಿ ಮಾಡಬೇಕು ಎಂದು ಪ್ರವಾಸಿಗರು ಆಗ್ರಹಿಸುತ್ತಿದ್ದಾರೆ. ೫) ಕೊಪ್ಪಳ ಜಿಲಾಧಿಕಾರಿ ಕಛೇರಿ ಎದುರಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪರವಾಗಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ಮಾಡಿತು. ಕರೋನಾ ಸಂದರ್ಭದಲ್ಲಿ ಶಾಲೆ ನಡೆಸುವದು ಕಷ್ಟವಾಗಿದೆ. ಖಾಸಗಿ ಶಾಲಾ ಶಿಕ್ಷಕರ ಗೋಳನ್ನು ಸರಕಾರ ಆಲಿಸಿ ಅವರಿಗೆ ವಿಶೇಷ ಪರಿಹಾರ ಒದಗಿಸಬೇಕು ಎಂದು ಸುಭಾನ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಕ್ಷರ ಟಿವಿ ಕನ್ನಡ ಶೀಘ್ರ ರಾಜ್ಯಾದ್ಯಂತ ಆರಂಭಗೊಳ್ಳುತ್ತಿದೆ. ಎಲ್ಲಾ ಕೇಬಲ್ ಟಿವಿ ಮತ್ತು ಸಾಮಾಜಿಕ ಜಾಲ ತಾಣಗಳಾದ ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್ ಮುಂತಾದವುಗಳ ಜೊತೆಗೆ ಆಪ್ ಮತ್ತು ವೆಬ್‌ನಲ್ಲಿ ಬರುತ್ತದೆ. ರಾಜ್ಯಾದ್ಯಂತ ತಾಲೂಕ, ಹೋಬಳಿ ಮತ್ತು ಜಿಲ್ಲಾ ವರದಿಗಾರರಾಗಲು ಸಂಪರ್ಕಿಸಿರಿ. ಮಂಜುನಾಥ ಜಿ. ಗೊಂಡಬಾಳ ಪ್ರಧಾನ ಸಂಪಾದಕರು ಮತ್ತು ಮುಖ್ಯಸ್ಥರು ಮೊ : ೯೪೪೮೩೦೦೦೭೦, ೯೪೮೩೪೬೮೩೩೩. ನೇರ ಪ್ರಸಾರ ಕಾರ್ಯಕ್ರಮಗಳಿಗೆ ಹಾಗೂ ವಿಡಿಯೋ ಮತು ಫೋಟೋಗ್ರಫಿಗಾಗಿ ಸಹ ಸಂಪರ್ಕಿಸಿರಿ. ವರದಿಗಾರರು : ರಾಜಲಿಂಗಪ್ಪ ಸಜ್ಜನ್ ಯಾದಗಿರಿ ಗುರುಮಿಟಕಲ್ ಮೊ : ೯೯೦೨೪೮೬೨೦೭, ಧರ್ಮಣ್ಣ ಹಟ್ಟಿ ಬಂಡಿಹರ್ಲಾಪೂರ ಕೊಪ್ಪಳ ಗ್ರಾಮೀಣ ಮೊ : ೯೯೧೬೫೫೪೮೦೯, ಪ್ರಭು ಜಹಗಿರದಾರ್ ಕುಷ್ಟಗಿ ಮೊ : ೯೬೬೩೬೯೭೮೪೮, ಮಹಾಂತೇಶ ನಾಗಡದಿನ್ನಿಮಠ ಸಿರವಾರ ಮೊ : ೯೯೦೧೦೧೫೧೫೬, ಅಡಿವೆಪ್ಪ ಕನ್ನೂರ ಮುದ್ದೆಬಿಹಾಳ ಮೊ : ೭೦೧೯೩೭೭೪೮೫೦ ತಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿರಿ. ಚಾನಲ್ ಸಬ್ಸ್ಕ್ರೈಬ್ ಆಗಲು ಮರೆಯದಿರಿ. ನಿಮ್ಮ ಸಹಕಾರವೇ ನಮಗೆ ಶಕ್ತಿ. ಮಾನ್ಯರೆ, ನಮ್ಮ ಚಾನಲ್ ಹೊಸ ಹೆಜ್ಜೆಯನ್ನು ಇಟ್ಟಿದೆ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ನಿಮ್ಮ ನಿರೀಕ್ಷೆಯನ್ನು ತಲುಪಲು, ಆದರೆ ಖಂಡಿತ ನಿಮ್ಮ ಆಕಾಂಕ್ಷೆ ಮತ್ತು ನಿರೀಕ್ಷೆ ಹುಸಿಗೊಳಿಸುವದಿಲ್ಲ. ದಯಮಾಡಿ ಚಾನಲ್ ಸಬ್ಸ್ಕ್ರೈಬ್ ಆಗಿರಿ ಮತ್ತು ಸ್ನೇಹಿತ, ಬಂಧು ಮತ್ತು ಬಳಗಕ್ಕೂ ಆಗಲು ತಿಳಿಸಿರಿ. ರಾಜ್ಯದ ಯಾವುದೇ ಚಾನಲ್ ಮಾಡದಂಥಹ ವಿನೂತನ ಪ್ರಯೋಗ ಮತ್ತು ಉತ್ತಮ ಗುಣಮಟ್ಟದ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ನಿರೀಕ್ಷಿಸಿರಿ... ಆರಂಭದ ಕಲಿಕೆಯಲ್ಲಿ ಆಗುತ್ತಿರುವ ಸಣ್ಣಪುಟ್ಟ ದೋಷಗಳಿಗೆ ಕ್ಷಮೆ ಇರಲಿ. ವಿವಿಧ ವಿಶ್ವ ದಾಖಲೆಯ ಕಾರ್ಯಕ್ರಮವೊಂದನ್ನು ಚಾನಲ್ ಮಾಢಲು ಸಿದ್ಧತೆ ನಡೆಸಿದ್ದು, ಕನ್ನಡ, ಹಿಂದಿ ಮತ್ತು ಕರ್ನಾಟಕದ ಪ್ರಾದೇಶಿಕ ಭಾಷೆಯ ಹಾಡುಗಾರರು, ಕರೋಕೆ ಸಿಂಗರ್ಸ್, ಸುಗಮ ಸಂಗೀತ ಕಲಾವಿದರು, ಶಾಸ್ತ್ರೀಯ ಸಂಗೀತಗಾರರು, ಶಾಸ್ತ್ರೀಯ ನೃತ್ಯ ಮತ್ತು ಜನಪದ ನೃತ್ಯಪಟುಗಳು ಮತ್ತು ಭಜನಾ ಸಂಗೀ ಕಲಾವಿದರು ತಮ್ಮ ಹೆಸರು, ಊರು ಮತ್ತು ಪೂರ್ಣ ವಿಳಾಸದೊಂದಿಗೆ ಒಂದು ಭಾವಚಿತ್ರವನ್ನು ನಮ್ಮ ಮೊ : ೯೪೪೮೩೦೦೦೭೦ ವಾಟ್ಸಾಪ್ ಮಾಡಿರಿ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ, ಪ್ರಶಸ್ತಿಯೊಂದಿಗೆ ಸನ್ಮಾನ ಮಾಡಲಾಗುವದು, ವಿಶ್ವ ದಾಖಲೆಯಲ್ಲಿ ತಾವೂ ಇದ್ದಿರಿ ಎಂಬ ಹೆಮ್ಮೆ ಹಾಗೂ ಟಿವಿ ಹಾಗೂ ಬದಲಾವಣೆ ದಿನಪತ್ರಿಕೆಯ ಮೂಲಕ ಮತ್ತಷ್ಟು ಜನರಿಗೆ ತಲುಪುವ ಸದಾವಕಾಶ ನಿಮ್ಮದಾಗಲಿದೆ. This is purely social concern so promote us by viewing and subscribing the channel from karanataka in kannada language. manjunath g. gondbal editor in chief akshara tv kannada a digital version of registered daily paper badalavane kannada daily koppal. cell : 9448300070, 9483468333