У нас вы можете посмотреть бесплатно ಸಾವಿರಾರು ನದಿಗಳು - ಡಾ. ಸಿದ್ದಲಿಂಗಯ್ಯನವರು или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕವಿ ಸಿದ್ಧಲಿಂಗಯ್ಯನವರ ಎರಡನೆಯ ಕವನ ಸಂಕಲನ ೧೯೭೯ ರಲ್ಲಿ ಪ್ರಕಟವಾಯಿತು. ಮೊದಲ ಸಂಕಲನ 'ಹೊಲೆಮಾದಿಗರ ಹಾಡು' ರಚನೆಗಳಿಗಿಂತ ಇದರ ಕವಿತೆಗಳು ಕವಿಯ ಪ್ರಬುದ್ಧ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. 'ಸಾವಿರಾರು ನದಿಗಳು' ಸಂಕಲನದಲ್ಲಿ ಕ್ರಮವಾಗಿ ಹದಿನಾರು ಕವಿತೆಗಳಿವೆ. ಅವುಗಳು ಯಾವುವು ಎಂದರೆ; ಸಾವಿರಾರು ನದಿಗಳು, ಬೆಲ್ಚಿಯಹಾಡು, ಕೆಂಪುಸೂರ್ಯ, ದಲಿತರು ಬರುವರು, ಬಿದ್ದಾವು ಮನೆಗಳು, ಕರಳ ರಾಣಿಯ ಕಥೆ, ಕತ್ತೆ ಮತ್ತು ಧರ್ಮ, ಈ ದೇಶದ ಸೆರಮನೆ, ಕಂಡೆ ನನ್ನವಳ ಒಂದು ದಿವಸ, ಹೋರಾಟದ ದಾರಿ, ನಿನ್ನ ಮಗನ ಕೊಂದರು, ಚೋಮನ ಮಕ್ಕಳ ಹಾಡು, ಮಾತಾಡಬೇಕು, ಮೆರವಣಿಗೆ, ಬಂದಿರುವರು ಹುಲಿಗಳಾಗಿ, ಅಲ್ಲೆ ಕುಂತವರೆ- ಇವುಗಳನ್ನು ಎರಡು ರೀತಿಯ ರಚನೆಗಳೆಂದು ಇಲ್ಲಿ ಗುರುತಿಸಲಾಗಿದೆ. ಸಾವಿರಾರು ನದಿಗಳು - ಕವನ ಸಂಕಲನವು, ಸಿದ್ದಲಿಂಗಯ್ಯನವರು ದಲಿತರ ಮೇಲೆ ಇದ್ದ ಅಭಿಮಾನವನ್ನು ಕಾಣಬಹುದು. ಅವರು ಕನ್ನಡದ ಕವಿ ಹಾಗೂ ದಲಿತ ಸಂಘರ್ಷ ಸಮಿತಿಯ ಸಹ ಸಂಸ್ಥಾಪಕರಾಗಿದ್ದು, ದಲಿತರಿಗೆ ಮತ್ತು ದಲಿತ ಕುಟುಂಬದವರಿಗೆ ಸಹಕರಿಸಿದ್ದಾರೆ. ಈ ಕವನ ಸಂಕಲನದಲ್ಲಿ, ಅವರು ದಲಿತರ ಸಹಕಾರಕ್ಕೆ ಪಟ್ಟ ಶ್ರಮದ ಹಾದಿಯನ್ನು ಹೇಳಿದ್ದಾರೆ. ಈ ಕವನ ಸಂಕಲನದ ಒಂದು ಸಾಲು ಸಂಕಲನದ ಬಗ್ಗೆ ಹೇಳುತ್ತದೆ - "To the ocean of struggle, flow of thousand rivers". ಇದರ ಅನುವಾದ - ಸಾವಿರಾರು ನದಿಗಳು ಹರಿಯುತ್ತಿವೆ, ಹೋರಾಟದ ಹಾದಿಯಲಿ. ಸಾವಿರಾರು ನದಿಗಳು ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ ಇರುವೆಯಂತೆ ಹರಿದಸಾಲು ಹುಲಿಸಿಂಹದ ದನಿಗಳು ಧಿಕ್ಕಾರ ಧಿಕ್ಕಾರ ಅಸಮಾನತೆಗೆ ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ ಲಕ್ಶಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ ಊರತುಂಬ ಹರಿದರು ಪಾತಾಳಕೆ ಇಳಿದರು ಆಕಾಶಕೆ ನೆಗೆದರು ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮೆಳೆಯ ಮರೆಗಳಲ್ಲಿ ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು ಇವರು ಬಾಯಿ ಬಿಟ್ಟೊಡನೆ ಅವರ ಬಾಯಿ ಕಟ್ಟಿತು ಇವರ ಕಂಠ ಕೇಳಿದೊಡನೆ ಅವರ ದನಿ ಇಂಗಿತು ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತ್ತಿಗೆಗಳ ಹಿಡಿದರು. ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು ವೇದಶಾಸ್ತ್ರಪುರಾಣ ಬಂದೂಕದ ಗುಡಾಣ ತರೆಗೆಲೆ ಕಸಕಡ್ಡಿಯಾಗಿ ತೇಲಿತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು - ಸಿದ್ಧಲಿಂಗಯ್ಯ