У нас вы можете посмотреть бесплатно Kajjikayalu / Karanji / Karjikayi / Traditional recipe / ಕರ್ಜಿಕಾಯಿ / ಕರಿಗಡುಬು / ಸಾಂಪ್ರದಾಯಿಕ ರೆಸಿಪಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Karjikayi Recipe is a traditional recipe for almost all the festivals like Sankranthi, Diwali, Ganesh Chatruthi etc. ಹಬ್ಬದ ವಿಶೇಷ ಸಿಹಿ ತಿಂಡಿಗಳಲ್ಲಿ ಇದು ಒಂದು. ಬೇಕಾಗುವ ಸಾಮಗ್ರಿಗಳು: ಕಣಕಕ್ಕೆ. ಮೈದಾ 1 ಕಪ್. ಚಿರೋಟಿ ರವೆ 1/4 ಕಪ್ ಉಪ್ಪು ಚಿಟಿಕೆ ತುಪ್ಪ 2 ಚಮಚ ನೀರು ಸ್ವಲ್ಪ. ಹೂರಣಕ್ಕೆ, ಹುರಿಗಡಲೆ 1 ಕಪ್ ಸಕ್ಕರೆ 3/4 ಕಪ್ ಗಸಗಸೆ 1 ಟೀ ಚಮಚ ಕೊಬ್ಬರಿ ತುರಿ 1/2 ಕಪ್ ಗೋಡಂಬಿ 20 ಬಾದಾಮಿ 20 ಪಿಸ್ತಾ 20 ಏಲಕ್ಕಿ ಪುಡಿ 1/2 ಟೀ ಚಮಚ. ತಯಾರಿಸುವ ವಿಧಾನ: ಬೌಲಿನಲ್ಲಿ ಮೈದಾಹಿಟ್ಟು,ಚಿರೋಟಿ ರವೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಎರಡು ಚಮಚ ತುಪ್ಪವನ್ನು ಬಿಸಿ ಮಾಡಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಷ್ಟು ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿ ಕೊಳ್ಳಿ. ಇದನ್ನು ಒದ್ದೆ ಬಟ್ಟೆಯಿಂದ 20 ನಿಮಿಷಗಳ ಕಾಲ ಮುಚ್ಚಿಡಿ. ಹುರಿಗಡಲೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಸಕ್ಕರೆಯನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಒಣಕೊಬ್ಬರಿ ತುರಿಯನ್ನು ಒಂದು ನಿಮಿಷಗಳ ಕಾಲ ಸಣ್ಣ ಉರಿಯಲಿ ಹುರಿಯಿರಿ. ಗಸಗಸೆಯನ್ನು ಒಣಕೊಬ್ಬರಿಯೊಂದಿಗೆ ಕೆಲವು ಸೆಕೆಂಡುಗಳ ಕಾಲ ಸೇರಿಸಿ ಹುರಿಯಿರಿ. ಹುರಿದ ಪದಾರ್ಥವನ್ನು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾದಾಮಿ, ಗೋಡಂಬಿ, ಪಿಸ್ತಾ ಇವುಗಳನ್ನು ಒಂದು ಬಾಣಲೆಯಲ್ಲಿ ಎರಡು ನಿಮಿಷ ಹುರಿಯಿರಿ. ಇವುಗಳನ್ನು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇವುಗಳನ್ನು ಬೌಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಣಕದ ಹಿಟ್ಟುನ್ನು ಚೆನ್ನಾಗಿ ನಾದಿಕೊಳ್ಳಿ. ಗೋಲಿ ಗಾತ್ರದ ಉಂಡೆಗಳನ್ನು ಮಾಡಿ. ಒಂದೊಂದು ಉಂಡೆಗಳನ್ನು ತೆಳ್ಳಗೆ ಮತ್ತು ದುಂಡಗೆ ಲಟ್ಟಿಸಿಕೊಳ್ಳಿ. ನಂತರ ಇದರಲ್ಲಿ ಒಂದರಿಂದ ಎರಡು ಚಮಚ ಹೂರಣವನ್ನು ಹಾಕಿ. ಅಂಚಿಗೆ ನೀರು ಸವರಿ ಗಟ್ಟಿಯಾಗಿ ಅಂಟಿಸಿ. ಒಂದು Fork ನಲ್ಲಿ ಅಂಚಿನ ಕೊನೆಯನ್ನು ನಿಧಾನವಾಗಿ ಒತ್ತಿ. ಇದನ್ನು ಶೇಪ್ ಮಾಡಲು ಮೌಡ್ ಬರುತ್ತದೆ.ಅದನ್ನು ಉಪಯೋಗಿಸಿ ಕೊಳ್ಳಬಹುದು. ನಂತರ ಹೂರಣ ತುಂಬಿದ ಕರ್ಜಿಕಾಯಿಯನ್ನು ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಬೇಯಿಸಿ. ಹೊಂಬಣ್ಣ ಬರುವವರೆಗೆ ಚೆನ್ನಾಗಿ ಕರಿಯಿರಿ. #MANEADUGEWITHVEDA #kajjikayalurecipe #karanjirecipe #karjikayirecipe For more recipes visit my website- https://maneadigewithveda.wordpress.com/ Facebook- / maneadugewithveda