У нас вы можете посмотреть бесплатно ಮನ್ ಕೀ ಬಾತ್ ನ 130ನೇ ಸಂಚಿಕೆ ; ಪ್ರಧಾನಿ ನರೇಂದ್ರ ಮೋದಿ ಮನದ ಮಾತು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಂದ ನಿರೀಕ್ಷಿಸುವ ಕರ್ತವ್ಯ ಪ್ರಜ್ಞೆಯನ್ನು ಮತದಾನ ಪೂರೈಸುತ್ತದೆ. ಅಲ್ಲದೆ, ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಯುತವಾಗಲು ಇದು ಪ್ರಮುಖ ಅಸ್ತ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇಂದು ಅವರು ತಮ್ಮ ಮನ್ ಕೀ ಬಾತ್ ನ 130ನೇ ಸಂಚಿಕೆಯಲ್ಲಿ ದೇಶವಾಸಿಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ದೇಶದ ಉತ್ಪಾದನಾ ವಲಯದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿರುವ ಪ್ರಧಾನಿ, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಕುರಿತು ಒಂದು ವರದಿ... ಇಂದು ರಾಷ್ಟ್ರೀಯ ಮತದಾರರ ದಿನವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವ ಮೂಲಕ ತಮ್ಮ ಮಾಸಿಕ ಮನ್ ಕೀ ಬಾತ್ ಕಾರ್ಯಕ್ರಮವನ್ನು ಆರಂಭಿಸಿದರು. ಮತದಾನವು ನಾಗರಿಕರಿಗೆ ಸಂವಿಧಾನದತ್ತವಾಗಿ ಬಂದಿರುವ ಪ್ರಮುಖ ಕರ್ತವ್ಯವಾಗಿದೆ. ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಯುತವಾಗಲು ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ 18 ವರ್ಷವಾಗಿರುವ ಪ್ರತಿಯೊಬ್ಬರೂ ಸಹ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ದೇಶವಾಸಿಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ರೀತಿಯಲ್ಲೇ ತಾವು ಮತದಾರರಾಗುವ ಸಂದರ್ಭವನ್ನು ಆಚರಿಸುವುದು ಅಗತ್ಯ. ಇದರಿಂದ ಮತದಾನದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಮತದಾರರಾಗಿರುವುದು ಎಷ್ಟು ಮುಖ್ಯ ಎಂಬ ಭಾವನೆಗೂ ಪುಷ್ಟಿ ನೀಡುತ್ತದೆ ಎಂದು ಹೇಳಿದ್ದಾರೆ. ನವೋದ್ಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಇಂದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆ ಸಿದ್ಧಗೊಂಡಿದೆ. 10 ವರ್ಷಗಳ ಹಿಂದೆ 2016ರ ಜನವರಿ ಆರಂಭಗೊಂಡ ಸ್ಟಾರ್ಟ್ ಅಪ್ ಇಂಡಿಯಾ, ಇಂದು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಭಾರತದ ಆರ್ಥಿಕತೆ ವೇಗವಾಗಿ ಮುಂದುವರಿಯುತ್ತಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಇಂತಹ ಸಮಯದಲ್ಲಿ ಉದ್ಯಮಗಳು ಗುಣಮಟ್ಟಕ್ಕೆ ಆದ್ಯತೆ ನೀಡುವ ಅಗತ್ಯವಿದೆ. ಉತ್ಕೃಷ್ಟ ಗುಣಮಟ್ಟದ ವಸ್ತುಗಳನ್ನೇ ಉತ್ಪಾದಿಸುವುದಾಗಿ ಎಲ್ಲ ಉದ್ಯಮಿಗಳು ಸಂಕಲ್ಪ ಕೈಗೊಳ್ಳುವ ಅಗತ್ಯವಿದೆ. ಹಾಗೆ ಮಾಡುವುದರಿಂದ ಮಾತ್ರ ಭಾರತದ ಅಭಿವೃದ್ಧಿಗೆ ವೇಗ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದಾಳದ ಮಾತಿನಲ್ಲಿ ಭಜನ್ ಕ್ಲಬ್ಬಿಂಗ್ ಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜನ್ ಝೀಗಳಲ್ಲಿ ಭಜನ್ ಕ್ಲಬ್ಬಿಂಗ್ ಜನಪ್ರಿಯವಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಭಜನೆಗಳ ಘನತೆ ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಭಕ್ತಿಯನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಶಬ್ದಗಳ ಪಾವಿತ್ರ್ಯತೆ ಅಥವಾ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಈ ಚಿಂತನೆಯೂ ಹೊಸ ಸಾಂಸ್ಕೃತಿಕ ಆಯಾಮಕ್ಕೆ ನಾಂದಿ ಹಾಡಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಮಲೇಷ್ಯಾದ ಭಾರತೀಯ ಮೂಲ ನಿವಾಸಿಗಳು ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ಪ್ರಧಾನಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಮಲೇಷ್ಯಾದಲ್ಲಿ 500ಕ್ಕೂ ಹೆಚ್ಚು ತಮಿಳು ಶಾಲೆಗಳಿವೆ. ಅವುಗಳಲ್ಲಿ ತಮಿಳಿನ ಜೊತೆಗೆ ತೆಲುಗು ಮತ್ತು ಪಂಜಾಬಿಯನ್ನು ಸಹ ಕಲಿಸಲಾಗುತ್ತಿದೆ. ಮಲೇಷ್ಯಾ - ಇಂಡಿಯಾ ಸಾಂಸ್ಕೃತಿಕ ಸಂಘವು ವಿವಿಧ ಕಾರ್ಯಕ್ರಮಗಳ ಜೊತೆಗೆ ಆಗಿದ್ದಾಗೆ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಕಳೆದ ತಿಂಗಳು ಐಕಾನಿಕ್ ಲಾಲ್ ಪಾಡ್ ಸಾಡಿ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ಬಂಗಾಳಿ ಸೀರೆಯನ್ನು ಧರಿಸಿ, ಮಲೇಷ್ಯನ್ನರು ಹೊಸ ದಾಖಲೆಯನ್ನೇ ನಿರ್ಮಿಸಿದರು . ಇದರ ಬಗ್ಗೆ ತಮಗೆ ಹೆಮ್ಮೆ ಎನಿಸುತ್ತಿದೆ ಎಂದರು. ಸಾಮೂಹಿಕ ಅಡುಗೆ ಮನೆಯ ಮೂಲಕ ದೇಶದ ಗಮನ ಸೆಳೆಯುತ್ತಿರುವ ಗುಜರಾತ್ ನ ಚಂದನ್ ಕೀ ಗ್ರಾಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಗ್ರಾಮದಲ್ಲಿ ಭವ್ಯವಾದ ಸಾಮುದಾಯಿಕ ಅಡುಗೆ ಮನೆ ನಿರ್ಮಿಸಲಾಗಿದ್ದು, ಇಡೀ ಗ್ರಾಮದ ಎಲ್ಲ ಜನರು ಇಲ್ಲಿ ಸಾಮೂಹಿಕ ಭೋಜನ ಸವಿಯುತ್ತಾರೆ. ಕಳೆದ 15 ವರ್ಷಗಳಿಂದ ಇಡೀ ಗ್ರಾಮದಲ್ಲಿ ಯಾರೂ ತಮ್ಮ ಅಡುಗೆ ಮನೆಗಳಲ್ಲಿ ಒಲೆಯನ್ನೇ ಹೊತ್ತಿಸಿಲ್ಲ. ಈ ಸಾಮೂಹಿಕ ಭೋಜನ ಉಪಕ್ರಮವು ಕೇವಲ ಜನರನ್ನು ಸಂಪರ್ಕಿಸುವುದು ಮಾತ್ರವಲ್ಲದೆ, ಇಡೀ ಗ್ರಾಮವೇ ಒಂದು ಕುಟುಂಬ ಎಂಬ ಭಾವನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತಕ್ಕೆ ಆಗಮಿಸಿರುವ ಅರಬ್ ಸಂಯುಕ್ತ ಗಣರಾಜ್ಯದ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯಾದ್ ಅಲ್ ನಹ್ಯಾನ್ ಅವರ ಬಗ್ಗೆ ಪ್ರಧಾನಿ ತಮ್ಮ ಮನದ ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ಯುಎಇಯಲ್ಲಿ ಪ್ರಸಕ್ತ ವರ್ಷವನ್ನು ಕೌಟುಂಬಿಕ ವರ್ಷ ಎಂದು ಆಚರಿಸಲಾಗುತ್ತಿದೆ. ಇದು ಅಲ್ಲಿನ ಜನರಲ್ಲಿ ಸಾಮರಸ್ಯ ಮತ್ತು ಸಮುದಾಯ ಮನೋಭಾವವನ್ನು ಬಲಪಡಿಸುತ್ತದೆ. ಕುಟುಂಬ ಮತ್ತು ಸಮಾಜದ ಶಕ್ತಿ ಒಂದುಗೂಡಿದಾಗ ನಾವು ಅತ್ಯಂತ ಕಠಿಣ ಸವಾಲುಗಳನ್ನು ಸಹ ಸುಲಭವಾಗಿ ಜಯಿಸಬಹುದು ಎಂದು ತಿಳಿಸಿದ್ದಾರೆ. ದೇಶಾದ್ಯಂತ ಕೈಗೊಳ್ಳಲಾಗಿರುವ ಸ್ವಚ್ಛತಾ ಅಭಿಯಾನದ ಮುಂದುವರಿದ ರೂಪಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಅರುಣಾಚಲ ಪ್ರದೇಶದ ಇಟಾ ನಗರ , ನೆಹರ್ ಲಾಗೂನ್, ದೋಯಿ ಮುಖ್ , ಸೇಪ್ಪಾ ಪಾಲಿನ್ ಮತ್ತು ಪಾಸಿಘಾಟ್ ನಲ್ಲಿ ಯುವಜನರು ಒಗ್ಗೂಡಿ 11 ಲಕ್ಷ ಕೆಜಿಯಷ್ಟು ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಫಾ ಪೀಠೋಪಕರಣ ಘನತ್ಯಾಜ್ಯವು ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಇಲ್ಲಿನ ಹಲವು ವೃತ್ತಿಪರರು ಒಗ್ಗೂಡಿ, ತಮ್ಮದೇ ಆದ ರೀತಿಯಲ್ಲಿ ಬಗೆಹರಿಸಿದ್ದಾರೆ. ಅಸ್ಸಾಂನ ನಾಗಾವ್ ನಲ್ಲಿ ಜನರೇ ತಮ್ಮ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಚೆನ್ನೈನಲ್ಲಿ ಭೂ ಪೂರಣ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತಿದೆ. ಈ ಉದಾಹರಣೆಗಳಿಂದ ದೇಶದ ನಾಗರಿಕರು ಉತ್ತೇಜಿತರಾಗಿ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ನಮ್ಮ ದೇಶದ ನಗರಗಳು ಮತ್ತಷ್ಟು ಸ್ವಚ್ಛಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರಧಾನಿ, ತಮ್ಮ ಮನದ ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ತಾವು ಆರಂಭಿಸಿದ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನ ಯಶಸ್ವಿಯಾಗಿದ್ದು, ದೇಶಾದ್ಯಂತ ಜನತೆ ತಾಯಿಯ ಹೆಸರಿನಲ್ಲಿ ಒಂದು ಸಸಿಯಂತೆ ಇದುವರೆಗೆ 200 ಕೋಟಿಗೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಇದು ದೇಶದ ಜನತೆಯಲ್ಲಿ ಪರಿಸರ ಜಾಗೃತಿ ಹೆಚ್ಚುತ್ತಿರುವ ದ್ಯೋತಕವಾಗಿದೆ ಎಂದಿದ್ದಾರೆ. ಅಲ್ಲದೆ, ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. #LiveDDChandanaNews #DDChandanaNews #DDChandana #DDKannada