У нас вы можете посмотреть бесплатно ವೀರ ನಾಯಕರ ನೂರಾರು ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಕಸದ ಕೊಂಪೆಯಲ್ಲಿ! ೫೦೦ ವರ್ಷಗಳ ಹಳೆಯ ಪರಂಪರೆ Veeranagere или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
500 years old rich tradition! 100s of Hero Stones & Memorial Stones in Veeranagere, Mysuru. ವೀರನ ಗೆರೆಯ ವೀರಗಲ್ಲುಗಳಿಗೆ ಪುಷ್ಪ ನಮನ ಇಂದು ಮಹಾಲಯ ಪಕ್ಷದ ೧೪ ನೇ ದಿನ. ಅಂದರೆ ಚತುರ್ದಶೀ ತಿಥಿ. ಈ ಮಹಾಲಯ ಪಕ್ಷದಲ್ಲಿ ಪ್ರಥಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಗತಿಸಿಹೋದ ತಮ್ಮ ಪೂರ್ವಜರಿಗಾಗಿ ಪಿಂಡಪ್ರದಾನ, ತರ್ಪಣ, ಎಳ್ಳುನೀರು, ಎಡೆ ಇಡುವುದು ವಾಡಿಕೆ. ಆದರೆ ನಮಗಾಗಿ, ನಮ್ಮ ರಾಜ್ಯ, ದೇಶಕ್ಕಾಗಿ ಗತಿಸಿ ಹೋದ ವೀರರ ನೆನಪು ಮಾಡಿಕೊಂಡು ಅವರ ತ್ಯಾಗ, ಶೌರ್ಯಗಳಿಗೆ ಕೃತಜ್ಞತೆ ಸಲ್ಲಿಸುವುದು ಅಪರೂಪ. ಆದರೆ ಮೈಸೂರಿನ ನಾಯಕರ ಪಡೆ ಅಧ್ಯಕ್ಷರಾದ ಪಡುವಾರಹಳ್ಳಿಯ ಎಂ. ರಾಮಕೃಷ್ಣ ಅವರು ಇಂತಹ ವಿಶಿಷ್ಟ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ವೀರನಗೆರೆ ಮೈಸೂರಿನ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಐತಿಹಾಸಿಕ ಪ್ರದೇಶ. ಇಲ್ಲಿ ನೂರಾರು ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳಿವೆ. ಇವು ಮೈಸೂರಿನ ವೀರ ನಾಯಕರ ಸ್ಮರಣೆಗಾಗಿ ಇರುವ ಕಲ್ಲುಗಳು. ಮೈಸೂರಿನ ಅರಸರಿಗಾಗಿ, ರಾಜ್ಯಕ್ಕಾಗಿ, ಸಮುದಾಯಕ್ಕಾಗಿ ಪ್ರಾಣತ್ಯಾಗ ಮಾಡಿ ವೀರಸ್ವರ್ಗವನ್ನು ಪಡೆದ ಮಹಾನುಭಾವರ ತ್ಯಾಗವನ್ನು ನೆನಪಿಸುವ, ಅವರ ಶೌರ್ಯವನ್ನು ಜಗತ್ತಿಗೆ ಸಾರುತ್ತಿರುವ ವೀರ ಪ್ರತೀಕಗಳು. ಇಂತಹ ನೂರಾರು ವೀರರಿಗೆ ಇಂದು ಪುಷ್ಪನಮನ ಸಲ್ಲಿಸಿ ಘಾತ ಚತುರ್ಶಿಯನ್ನು ಅಂದರೆ ಆಯುಧದಿಂದ ಹತರಾದವರಿಗೆ ಮೋಕ್ಷಸಿಗಲು ಶ್ರಾದ್ಧ ಮಾಡಬೇಕಾದ ದಿನದಂದೇ ಆ ವೀರರಿಗೆ ಕೃತಜ್ಞತೆಯ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಈ ವೀರ ಪುರುಷರ ಇತಿಹಾಸದ ಬಗ್ಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಅವರು ಸೇರಿದ್ದ ಜನರಿಗೆ ಮನಮುಟ್ಟುವಂತೆ ವಿವರಿಸಿದರು. ಹಾಗೂ ವೀರ ಹಾಗೂ ಮಾಸ್ತಿ ಕಲ್ಲುಗಳಿಗೆ ಪುಷ್ಪನಮನ ಸಲ್ಲಿಸಿ ಈ ಐತಿಹಾಸಿಕ ಪ್ರದೇಶ ಸಂರಕ್ಷಿಸಲು ಸರ್ಕಾರಕ್ಕೆ ಮನವಿ ಮಾಡಿದರು. ವೀರರು ನೆಲೆಸಿದ್ದರಿಂದ ಈ ಗ್ರಾಮಕ್ಕೆ ವೀರನ ಗೆರೆ ಎಂಬ ಹೆಸರಿದ್ದು, ಜನ ಸಾಮಾನ್ಯರು ಈರನ ಗೆರೆ ಎಂದೂ ಸಹ ಕರೆಯುತ್ತಾರೆ. ವೀರನ ಗೆರೆಯಲ್ಲಿ ಬಹುಪಾಲು ಇರುವುದು ನಾಯಕರು. ಇವರಿಗೆ ಹಿಂದೆ ಅರಮನೆಯ ರಕ್ಷಣೆಯ ಕರ್ತವ್ಯ ಇದ್ದುದರಿಂದ ಇವರಿಗೆ ಪರಿವಾರದ ನಾಯಕರು ಎಂದು ಕರೆಯುತ್ತಾರೆ. ಈ ನಾಯಕ ಜನಾಂಗ ನಂಬಿದ ಅರಸರಿಗೆ ಪ್ರಾಣವನ್ನೇ ಪಣವಾಗಿಟ್ಟು ರಕ್ಷಿಸುತ್ತಿದ್ದರು. ಈ ಗ್ರಾಮದಲ್ಲಿ ಮೈಸೂರು ಮಲ್ಲಿಗೆ, ವೀರನಗೆರೆ ಬದನೆಕಾಯಿ ಎರಡೂ ಸಹ ಪ್ರಸಿದ್ಧವಾಗಿದ್ದವು. ಇಲ್ಲಿ ಮೈಸೂರು ಸೂಜಿಮಲ್ಲಿಗೆ ಜಗತ್ತಿನ ಎಲ್ಲರನ್ನು ಸೆಳೆಯುತ್ತಿತ್ತು. ಹಾಗೆಯೇ ರುಚಿಯಾದ ಬದನೆಕಾಯಿ ಸಹ. ಇವರೆಲ್ಲರೂ ಯುದ್ಧ ರಹಿತ ಕಾಲದಲ್ಲಿ ಕೃಷಿಯನ್ನು ಮಾಡುತ್ತಿದ್ದರು. ಯುದ್ಧದ ಸಮಯದಲ್ಲಿ ಮೈಸೂರು ಮಹಾರಾಜರಿಗೆ ನಿಷ್ಠರಾಗಿದ್ದರು. ಇಂದಿಗೂ ಈ ವೀರನಗೆರೆಯ ರಸ್ತೆಗಳಲ್ಲಿ, ಮನೆಗಳಲ್ಲಿ ಮಲ್ಲಿಗೆ ಹೂವು ಕಟ್ಟುತ್ತಿರುವ ನೂರಾರು ಮಹಿಳೆಯರನ್ನು ನೋಡಬಹುದು. ಇಂತಹ ವೀರನ ಗೆರೆಯ ವೀರ ನಾಯಕರು ಯುದ್ಧಗಳಲ್ಲಿ ಹೋರಾಡಿ ತಮ್ಮ ಪ್ರಾಣತ್ಯಾಗವನ್ನು ಮಾಡಿರುವ ದ್ಯೋತಕವಾಗಿ ಈ ವೀರಗಲ್ಲುಗಳು ಮತ್ತು ಅವರ ಜೊತೆಯಲ್ಲಿ ಹೋರಾಡಿದ ವೀರ ವನಿತೆಯರು ಮತ್ತು ಸಹಗಮನ ಮಾಡಿದ ಪತಿವ್ರತೆಯರಿಗಾಗಿ ಮಹಾಸತಿಗಲ್ಲುಗಳನ್ನು ಇಲ್ಲಿ ನಿಲ್ಲಿಸಲಾಗಿದೆ. ಆದರೆ ಈಗ ಆಗುತ್ತಿರುವುದೇನು ? ಮೈಸೂರು ನಾಯಕರ ಪಡೆ ವತಿಯಿಂದ ವೀರನಗೆರೆಯ ಶ್ರೀ ಮಹದೇವಮ್ಮ ದೇವಸ್ಥಾನ ಆವರಣದಲ್ಲಿ ಪಾಳೆಯಗಾರರ ಪುಷ್ಪನಮನದ ಈ ಕಾರ್ಯಕ್ರಮದಲ್ಲಿ ಜಿ. ಶಂಕರ್,ಮೈಸೂರು ನಾಯಕರ ಪಡೆ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ KAS ಅಧಿಕಾರಿ ಕೆ.ಜೆ.ಶ್ರೀಧರ್ ನಾಯಕ,ಶ್ರೀನಿವಾಸ್ ,ಎಂ. ಸ್ವಾಮಿ, ನಗರ ST ಮೋರ್ಚಾ ಅದ್ಯಕ್ಷರಾದ ಲಕ್ಷಣ್, KSRTC ರಾಜು,ವಿಜಿಲಿನ್ಸ್ ಕಮಿಟಿಯ ಸದಸ್ಯ M.ಶಿವಪ್ರಕಾಶ್, ಅಯರಹಳ್ಳಿ ಪ್ರವೀಣ್, ದೇವಣ್ಣ, ಸಂಜೀವಣ್ಣ,ಈರಣ್ಣ, Ask Mysuru ನ ಶ್ರೀ ಪ್ರಶಾಂತ್, ಶ್ರೀಮತಿ ಶೋಭಾ ಮುಂತಾದವರಿದ್ದರು. ಪೋಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡಲಾಗಿತ್ತು. ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ Follow us on: / askmysuru / askmysuru Join us on: / askmysuru Email: lets(at)askmysuru.com Website: https://askmysuru.com Subscribe us on: / askmysuru #veeranagere #veeragallu #masthikallu #mysuru #ಇತಿಹಾಸ #ಮೈಸೂರು #ಶಲ್ವಾಧೀಕ್ಷಣ #ವೀರನಗೆರೆ #ವೀರಗಲ್ಲು #ಮಾಸ್ತಿಗಲ್ಲು #ಮಹಾರಾಜರು #ದಸರಾ #history #historical #askmysuru #askmysurumediahouse #archeological #forgottenhistory #karnataka #karnatakahistory #mysuruhistory #mysoredasara #mysurudasara #dasara #documentary #kannada #kannadadocumentary