У нас вы можете посмотреть бесплатно ದೇಶಿ ಮಲೆನಾಡ ಗಿಡ್ಡ ಹಸುಗಳ ರಾಜ ಇವರು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದೇಶಿ ಮಲೆನಾಡ ಗಿಡ್ಡ ಹಸುಗಳ ರಾಜ ಇವರು. He is the king of cows ಇಷ್ಟೊಂದು ಮಲೆನಾಡ ಗಿಡ್ಡ ಹಸುಗಳನ್ನು ನೋಡಿರಲು ಸಾಧ್ಯವೇ ಇಲ್ಲ! - ಖುಷಿಗಾಗಿ ಗಿಡ್ಡಗಳ ಸಾಕುತ್ತಿರುವ ಮಲೆನಾಡಿನ ಕೃಷ್ಣಪ್ಪ ಮಲೆನಾಡು ಅಂದಾಕ್ಷಣ ತಟ್ಟನೆ ಕಣ್ಣ ಮುಂದೆ ಬರುವುದು ಜೋಗದ ಜಲಪಾತ ಹಾಗೂ ದಟ್ಟ ಕಾಡು. ಕಾಡಿನ ಬುಡದಲ್ಲಿ ಅಲ್ಲಲ್ಲಿ ಹಸಿರು ಹೊದ್ದುಕೊಂಡ ನೆಲ, ಅಡಿಕೆ ತೋಟಗಳು. ಇನ್ನೂ ಮನಸ್ಸಿಗೆ ಬಂದಂತೆ ಓಡಾಡಿಕೊಂಡಿರುವ ಮಲೆನಾಡಿನ ಗಿಡ್ಡ ತಳಿಯ ಹಸುಗಳು. ನಿಜವಾಗಿಯೂ ಈ ಹಸುಗಳು ವಿಶೇಷ ಎನಿಸುತ್ತವೆ. ಕಾಡಿನ ನಡುವೆಯೇ ಇರುವ ಗಿಡ್ಡ ಹಸುಗಳ ಕೊರಳಿನ ಗಂಟೆಗಳ ಸದ್ದು ಬಹಳ ವಿಭಿನ್ನವಾದ ಸಂಗೀತದಂತೆ ಇರುತ್ತದೆ. ಅ ಶಬ್ಧವನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ಕುಳ್ಳಗೆ ಇರುವುದು ಮಲೆನಾಡ ಗಿಡ್ಡ ಹಸುಗಳ ವಿಶೇಷ ಕೂಡ. ಕಂದು, ಕಪ್ಪು, ಬಿಳಿ ಬಣ್ಣ ಹಾಗೂ ಕಪ್ಪು ಮಿಶ್ರಿತ ಕಂದು ಬಣ್ಣವನ್ನು ಗಿಡ್ಡ ತಳಿಯ ಹಸುಗಳು ಇವೆ. ಮಲೆನಾಡು ಪ್ರದೇಶದಲ್ಲಿ ಮತ್ತು ಮಲೆನಾಡಿಗೆ ಹೊಂದಿಕೊಂಡಿರುವ ಕರಾವಳಿ ಪ್ರದೇಶದಲ್ಲಿಯೂ ಸಹ ಈ ಹಸುಗಳು ಇವೆ. ಬಯಲು ಬ್ಯಾಣದ ಪ್ರದೇಶದಲ್ಲಿ ಹಾಗೂ ಕಾಡಿನ ಅಂಚಿನಲ್ಲಿ ಹಾಯಾಗಿ ಮೆಯ್ದುಕೊಂಡು ಇರುತ್ತವೆ. ಬಹುತೇಕ ರೈತರು ಇವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಸಾಕುವುದಿಲ್ಲ. ಮಲೆನಾಡಿನ ಕಾಡಿನಲ್ಲಿ ಮನಸ್ಸಿಗೆ ಬಂದಂತೆ ಹುಲ್ಲು, ಕುರುಚಲು ಗಿಡಗಂಟಿಗಳ ಹಸಿರೆಲೆ ಸೊಪ್ಪುಗಳನ್ನು ತಿನ್ನುವ ಗಿಡ್ಡ ಹಸುಗಳು ಬಹಳ ಗಟ್ಟಿಮುಟ್ಟಾಗಿರುತ್ತವೆ. ಹಾಗೆಯೇ ಗಿಡ್ಡ ಹಸುಗಳು ಕೊಡುವ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ ಎನ್ನುವುದಂತು ಸತ್ಯ. ಒಮ್ಮೆ ಮಲೆನಾಡಿನ ಗಿಡ್ಡ ಹಸುಗಳ ಹಾಲನ್ನು ಕುಡಿದವರು ಮತ್ತೆ ಜರ್ಸಿ ಹಸುಗಳ ಹಾಲನ್ನು ಕುಡಿಯಲು ಮನಸ್ಸು ಮಾಡುವುದಿಲ್ಲ. ಅಷ್ಟೊಂದು ರುಚಿಕರವಾದ ಹಾಲನ್ನು ಗಿಡ್ಡ ಹಸುಗಳು ಕೊಡುತ್ತವೆ. ಶಿವಮೊಗ್ಗದ ಮದ್ಲೆಸರ ಗ್ರಾಮದ ಕೃಷ್ಣಪ್ಪ ಚಿಕ್ಕಂದಿನಿಂದಲೂ ಮಲೆನಾಡ ಗಿಡ್ಡ ಹಸುಗಳನ್ನು ಸಾಕುತ್ತ ಜೀವನ ನಡೆಸುತ್ತಿದ್ದಾರೆ. ಇದೀಗ ಅವರಿಗೆ 66ರ ಇಳಿ ವಯಸ್ಸು. ಆದರೂ ಸಹ ನೂರಾರು ಗಿಡ್ಡ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ದಿನ ಬೆಳಗಾಗುತ್ತಲೇ ಎಲ್ಲಾ ಗಿಡ್ಡ ಹಸುಗಳ ಜೊತೆಗೆ ಕಾಡಿನ ಕಡೆಗೆ ಹುಲ್ಲು ಮೆಯಿಸಲು ಹೋಗುತ್ತಾರೆ. ಸಂಜೆ ಆರು ಗಂಟೆಯಾಗುತ್ತಲೇ ಎಲ್ಲಾ ಹಸುಗಳ ಜೊತೆಗೆ ಕಾಡಿನ ಮಧ್ಯದಲ್ಲಿರುವ ತಮ್ಮ ಪುಟ್ಟ ಮನೆಯನ್ನು ಸೇರಿಕೊಳ್ಳುತ್ತಾರೆ. ಅಕ್ಷರ ಕಲಿಯದ ಕೃಷ್ಣಪ್ಪನವರು ತಮಗೆ ತಿಳುವಳಿಕೆ ಬಂದಾಗಿನಿಂದ ಅಂದರೆ ಚಿಕ್ಕಂದಿನಿಂದಲೇ ತಮ್ಮ ತಂದೆಯವರ ಜೊತೆಗೆ ಹಸುಗಳನ್ನು ಮೆಯಿಸಲು ಕಾಡಿನ ಕಡೆಗೆ ಹೋಗುತ್ತಿದ್ದರು. ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಸ್ವತಂತ್ರ್ಯವಾಗಿ ತಮ್ಮ ಮನೆಯ ಹಾಗೂ ಅಕ್ಕಪಕ್ಕದ ಮನೆಯವರ ಹಸುಗಳನ್ನು ಮೆಯಿಸಲು ಕಾಡಿಗೆ ಹೋಗಲು ಆರಂಭಿಸಿದರು. ಹಾಗಾಗಿ ಎಲ್ಲಾ ಹಸುಗಳು ತಾವು ಹೇಳಿದಂತೆ ಕೇಳುತ್ತವೆ. ಯಾವುದೇ ತರಲೆ ಮಾಡುವುದಿಲ್ಲ ಎಂದು ನಗುತ್ತಾರೆ. ಆದರೆ ಮಲೆನಾಡಿನಲ್ಲಿ ಬಹುತೇಕ ಮಂದಿ ಗಿಡ್ಡ ತಳಿಯ ಹಸುಗಳು ಬಹಳ ತರಲೆ ಸ್ವಭಾವದ ಹಸುಗಳಾಗಿವೆ ಎನ್ನುತ್ತಾರೆ. ಬೇಲಿ ಹಾರಿಕೊಂಡು ಗದ್ದೆ, ಕೈತೋಟಕ್ಕೆ ನುಗ್ಗುತ್ತವೆ. ಭತ್ತದ ಪೈರು, ತರಕಾರಿಗಳನ್ನು ತಿನ್ನುತ್ತವೆ ಎನ್ನುವ ಆರೋಪವೂ ಇದೆ. ಕೃಷ್ಣಪ್ಪನವರು ಹೇಳುವಂತೆ, ಪ್ರೀತಿಯಿಂದ ಗಿಡ್ಡ ಹಸುಗಳನ್ನು ನೋಡಿಕೊಂಡರೆ ಅವು ತರಲೆ ಮಾಡುವುದಿಲ್ಲ. ಬೆಳಿಗ್ಗೆ ಕಾಡಿನಲ್ಲಿ ಸರಿಯಾಗಿ ಮೆಯಿಸಿಕೊಂಡು ಮನೆಗೆ ಬಂದರೆ ಅವರು ಕೈತೋಟಕ್ಕೆ ಬಾಯಿ ಹಾಕುವುದಿಲ್ಲ. ಗಿಡ್ಡಗಳು ಒಳ್ಳೆಯ ಹಸುಗಳು ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಜರ್ಸಿ ಹಸುಗಳ ಹಾಲು ರುಚಿಕರವಾಗಿಲ್ಲ. ಹಾಗಾಗಿ ನಾವು ಆ ಹಸುಗಳನ್ನು ಸಾಕುವುದಿಲ್ಲ. ಕಡಿಮೆ ಹಾಲನ್ನು ಕೊಟ್ಟರೂ ಸಹ ರುಚಿಕರವಾದಂತಹ ಹಾಲನ್ನು ನಮ್ಮ ಮಲೆನಾಡ ಗಿಡ್ಡ ಹಸುಗಳು ಕೊಡುತ್ತವೆ. ಹಾಗಾಗಿ ನಾವು ತಲತಲಾಂತರದಿಂದ ಗಿಡ್ಡ ತಳಿಯ ಹಸುಗಳನ್ನು ಸಾಕುತ್ತಿದ್ದೇವೆ. ತಮ್ಮ ಊರಿನಲ್ಲಿ ಪ್ರತಿ ಮನೆಯಲ್ಲಿಯೂ ಹತ್ತು ಹದಿನೈದು ಮಲೆನಾಡು ಗಿಡ್ಡ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ ಎಂದು ಕೃಷ್ಣಪ್ಪ ಹೇಳುತ್ತಾರೆ. ನೂರು ಹಸುಗಳನ್ನು ಮೆಯಿಸಲು ಕಾಡಿಗೆ ಹೋಗಲು ತಮ್ಮ ಬಾವನವರು ಕೂಡ ಜೊತೆಯಾಗುತ್ತಾರೆ. ಒಂದೊಂದು ಸಲ ಒಬ್ಬನೇ ಕಾಡಿಗೆ ಬರತೀನಿ. ಗಿಡ್ಡ ತಳಿಯ ಹಸುಗಳನ್ನು ಸಾಕುವುದು ತಮಗೆ ಹೆಮ್ಮೆ, ಖುಷಿ ಎನ್ನುತ್ತಾರೆ ಕೃಷ್ಣಪ್ಪ. ಹೌದು, ನಮ್ಮ ದೇಶಿಯ ತಳಿಯ ಹಸುಗಳ ಪೈಕಿ ಒಂದಾಗಿರುವ ಮಲೆನಾಡಿನ ಗಿಡ್ಡ ತಳಿಯ ಹಸುಗಳು ವಿಶೇಷವಾಗಿವೆ. ವಿಶಿಷ್ಠವಾಗಿವೆ. ಪೋಷಕಾಂಶಯುತ್ತ ಹಾಲನ್ನು ಕೊಡುವ ಗಿಡ್ಡ ಹಸುಗಳನ್ನು ಮಲೆನಾಡಿನಲ್ಲಿ ಪ್ರತಿಯೊಬ್ಬ ರೈತರು ಸಾಕಬೇಕು. ಅವುಗಳ ಮಹತ್ವ ಎಲ್ಲೆಡೆ ಪಸರಿಸಬೇಕು ಹಾಗೂ ಅಭಿವೃದ್ಧಿಯಾಗಬೇಕು.