У нас вы можете посмотреть бесплатно Nuthisalalave Yathi Sudheendraranu l ನುತಿಸಲಳವೇ ಯತಿ ಸುಧೀಂದ್ರರನುl Kavitha Shenoy I Sudheendra Gunagana или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ll श्री श्री ಸುಧೀಂದ್ರ ತೀರ್ಥ ಗುರುವೇ ನಮೋ ನಮಃ ll ಇದೊಂದು ದಿವಂಗತ ಮಟ್ಟಿ ಶ್ರೀನಿವಾಸ ಪ್ರಭು, ಇವರಿಂದ ವಿರಚಿತ ನಮ್ಮ ಸರ್ವಾಂಗ ಸುಂದರರಾದ ಶ್ರೀ ಸುಧೀಂದ್ರ ತೀರ್ಥ ಗುರುಗಳ ಮೇರು ಗುಣಗಳನ್ನು ಬಿಂಬಿಸುವ ಸುಂದರ ಕೃತಿ, ಶ್ರೀಸುಧೀಂದ್ರ ಗುಣ ಗಾನ. ಮಹಾಮಹಿಮರಾದ ಶ್ರೀ ಸುಧೀಂದ್ರ ತೀರ್ಥ ಗುರುಗಳ ಕಾಲದಲ್ಲಿ ನಾವಿದ್ದು, ಅವರ ಆಶೀರ್ವಾದ, ಅವರಿಂದ ತಪ್ತ ಮುದ್ರಾಧಾರಣೆ, ಅವರ ದಯಾಪೂರಿತ ಕಡೆಗಣ್ಣ ನೋಟ, ಅವರ ದಿವ್ಯ ಫಲ ಮಂತ್ರಾಕ್ಷತೆ, ಅವರ ಪಾದಪೂಜೆ ಮಾಡುವ ಭಾಗ್ಯ, ಅವರ ಮಂತ್ರೋಪದೇಶ, ಅವರ ಸತ್ಸಂಗ ಪಡೆದ ನಾವೇ ಧನ್ಯರು. ಅಂತಹ ಮೇರು ವ್ಯಕ್ತಿತ್ವದ ಶ್ರೀ ಸುಧೀಂದ್ರ ತೀರ್ಥರನ್ನು ನುತಿಸುವುದು ಕಷ್ಟ ಸಾಧ್ಯ. ಅವತಾರ ಪುರುಷರಾದ ಸುಧೀಂದ್ರ ಗುರುಗಳು ನರರಲ್ಲ, ನರರೆಂದು ತಿಳಿದರೆ ನರಕ ಖಂಡಿತ. ಅತ್ಯಂತ ಪಾವನವಾದ ಹರಿದ್ವಾರದ ಗಂಗಾತೀರದಲ್ಲಿರುವ ಸಪ್ತರ್ಷಿಧಾಮದಲ್ಲಿ ಹಾಗೂ ಯಮುನಾ ದ್ವೀಪದ ಅವತಾರ ಸ್ಥಳ ಕಾಲ್ಪಿಯಲ್ಲಿ ಭಗವಾನ್ ವೇದವ್ಯಾಸ ದೇವರ ದಿವ್ಯ ಭವ್ಯ ಮಂದಿರಗಳನ್ನು ನಿರ್ಮಾಣ ಮಾಡಿ ಶ್ರೀ ಸುಧೀಂದ್ರ ತೀರ್ಥರು ನಮ್ಮನ್ನು ಪಾವನಗೊಳಿಸಿ ಉತ್ತರಾಭಿಮುಖವಾಗಿಸಿದ್ದಾರೆ. ಆಸೇತು ಹಿಮಾಚಲ ಸಮಗ್ರ ಭಾರತದಲ್ಲಿ ದಿಗ್ವಿಜಯ ಬೆಳೆಸಿ, ನಮಗೂ ತೀರ್ಥಯಾತ್ರೆಯ ಅವಕಾಶ ಕೊಟ್ಟು, ಶಿಷ್ಯ ವರ್ಗಕೆ ಚೆನ್ನಾಗಿ ಫಲ ಮಂತ್ರಾಕ್ಷತೆಯಿಂದ ಶುಭಾಶೀರ್ವಾದ ಮಾಡಿದ, ಹರಿದ್ವಾರದ ಗಂಗಾತೀರದಲ್ಲಿ ವೇದವ್ಯಾಸ ದೇವರು ಹಾಗೂ ಮಗನಾದ ಸದಾಶಿವ ಶುಕಮುನಿಯ ಸನ್ನಿಧಿಯಲ್ಲಿ ವೃಂದಾವನಸ್ಥರಾದ ಶ್ರೀ ಸುಧೀಂದ್ರ ತೀರ್ಥರು ನಮ್ಮನ್ನೆಲ್ಲ ಸಲಹಲಿ. Lyrics: ನುತಿಸಲಳವೇ ಯತಿ ಸುಧೀಂದ್ರರನು ಕಾಶಿeಮಠಾಧಿಪ ಪ್ರತಿರಹಿತ ಸುಪವಿತ್ರ ಗುರುಗಳನು ।।ಪ ।। ಕೃತಭುಜಾರ್ಚಿತ ವ್ಯಾಸ ರಘುಪತಿ, ಸ್ತುತಿಗಗಮ್ಯ ಪದಾಬ್ಜ ಮಧುಕರ, ಸತತ ತಾಪಸ ಧರ್ಮ ಪರಿಪಾಲಿಪ ಗುಣಾನ್ವಿತ ದಿವ್ಯ ಮೂರ್ತಿಯ ।।೧।। ತೋಷ ಭರಿತ ಪ್ರಕಾಶ ಮಯ ವದನಾ । ನಯನಾoಬುರುಹ ಸುಮಹಾಸ ಮುಕುರ ಕಪೋಲಪರಿವದನಾ । ದ್ವೇಷವಿರಹಿತ ಹೃದಯವಿಕಸಿತ, ದೋಷವರ್ಜಿತ ಚರಣಕೋಮಲ ಈಷಣತ್ರಯ ದೂರ ಭವಜಿತ ಭಾಸುರಾಂಗ ದಯಾ ಸಮುದ್ರರ ।।೨।। ಭುವನ ಮೋಹಿಪ ತಿಲಕ ನಡುನಿಟಿಲಾ। ಕಸ್ತೂರಿ ಶೋಭಿತ ನವರತುನ ಶೃಂಗಾರ ಹಾರಗಳಾ । ಜವನ ಜಯಿಸುವ ದಂಡ ಪಾತಕ । ನಿವಹ ದಹಿಸುವ ಕರಕಮಂಡಲ । ವಿವಿಧ ಕಾವಾಂಬರ ವಿರಾಜಿಪ । ನವಯುಗಳ ಪಾದುಕೆಗಳೊಪ್ಪುವ ।।೩।। ವೇದಶಾಸ್ತ್ರ ಕಲಾದಿ ಸಂಪನ್ನ । ಸುಜ್ಞಾನ ಶರನಿಧಿ ಸಾಧುಶೀಲ ಸ್ಮರಾದಿರಿಪುದಮನ । ಸಾಧಿಸುತ ಜಪಧ್ಯಾನ ಯೋಗತಪಾದಿ ನೇಮವನಾಚಾರಿಸಿ ಬಲು । ಗೌಡಸಾರಸ್ವತ ಬುಧಾನ್ವಯ ಮೋದದಿಂದುದ್ಧರಿಪ ಮಹಿಮರ ।।೪।। ವರುಷ ತಾರುಣ ಜ್ಯೇಷ್ಠಸಿತ ಪಕ್ಷ । ಮಿತಿ ಬಿದಿಗೆ ಬುಧವಾಸರದಿ ವಳೆಲಂಕೆಯಲಿ ಯತಿ ದೀಕ್ಷಾ । ಹರುಷದಿಂ ಸ್ವೀಕರಿಸಿ ವಿಭವದಿ । ಪರಮ ಗುರು ಸುಕೃತೀಂದ್ರ ತೀರ್ಥರ ಕರಕಮಲ ಸಂಜಾತರೆನಿಸುತ । ಮೆರೆವ ಕೀರ್ತಿ ಕಲಾನಿಧಿಯರ ।।೫।। ದೇಶ ಪಾವನ ದಿಗ್ವಿಜಯ ಬೆಳೆಸಿ । ನಿಜ ಶಿಷ್ಯವರ್ಗಕೆ ಆಸು ಫಲಮಂತ್ರಾಕ್ಷತೆಯ ಸಲಿಸಿ । n ಈ ಸುಪದ ಪೂಜಿಸುವ ಜನರಘ । ನಾಶಗೊಳಿಸುವ ಸಖ ಸದಾಶಿವ, ವ್ಯಾಸ ರಘುಪತಿ ಶ್ರೀನಿವಾಸನ ಧ್ಯಾನದಿಂದರ್ಚಿಪ ಮಹಾತ್ಮರ ।।೬।। Credits: Vocals: Kavitha Shenoy Lyrics: Late Sri.Matti Srinivas Prabhu Flute: Varun Rao Rythm Percussion: Gangadas. Tabla: Gautam Birwa Keyboard: Gururaj M B Studio & Sound Engg: Sai Ram Studio ,Gururaj M B Dop n Editing: Nishanth Shenoy Paduka & Simhasan making video by UV Kini, Hyderabad Description of the song: Chempi Narasimha Bhat. Special Thanks to Vedamurthy. S.Y. Sudhakar Bhat, Nigamagama Pathashala. Photoe Courtesy: G.Suresh Kamath Venue: SVT, Mangalore A NadaVedaBrahma Presentation Loka Samastha Sukhino Bhavanthu