У нас вы можете посмотреть бесплатно ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? | ಕುವೆಂಪು ಪದ್ಯ |yava kalada saastra | KUVEMPU POEM или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#kannada #karnataka #kuvempu #tejasvi #ಕುವೆಂಪು #ಪೂರ್ಣಚಂದ್ರತೇಜಸ್ವಿ #BCA #NOTES #competitiveexams #studymaterial #BENGALURUUNIVERSITY ಯಾವ ಕಾಲದ ಶಾಸ್ತವೇನು ಹೇಳಿದರೇನು? ಕುವೆಂಪು __ _______ __ ಯಾವ ಕಾಲದ ಶಾಸ್ತವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯ ಋಷಿ! ಮನು ನಿನಗೆ ನೀನು ಅರ್ಥ:- ಮನುಷ್ಯ ವೈಚಾರಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಅದನ್ನು ಬಿಟ್ಟು, ಋಷಿಗಳು ಹೇಳಿದರೆಂಬ ಕಾರಣಗಳನ್ನು ಹೇಳಿಕೊಂಡು ಮಾನವೀಯತೆಯನ್ನೇ ಮರೆತು ವರ್ತಿಸಬಾರದು ಎಂಬ ವಿಚಾರವನ್ನು ಕುವೆಂಪು ಇಲ್ಲಿ ಹೇಳಿದ್ದಾರೆ. ಯಾವಕಾಲದ ಶಾಸ್ತç ಏನೇ ಹೇಳಲಿ ಆದರೆ, ನಿನ್ನ ಆತ್ಮಸಾಕ್ಷಿಗಿಂತಲೂ ಮಿಗಲಾದುದು ಇನ್ನೇನಿದೆ? ಎಂದೋ ಮನು ಬರೆದಿಟ್ಟರೇ ಅದನ್ನೇ ಪಾಲಿಸಬೇಕೆಂದೇನಿಲ್ಲ ಅಂತ ಕುವೆಂಪು ಹೇಳಿದ್ದಾರೆ. ನಿನ್ನ ಬದುಕಿನ ನಾಯಕ ನೀನೆ, ಹಾಗೆಯೇ ನಿನ್ನೆ ಯಶಸ್ಸಿನ ಕಾರಣನೂ ನೀನೆ.. ! ಎಂಬ ವಿಚಾರಗಳನ್ನ ಕುವೆಂಪು ಇಲ್ಲಿ ಪ್ರಸ್ತಾಪಿಸುತ್ತಾರೆ. ನೀರಡಿಸಿ ಬಂದ ಸೋದರಿಗೆ ನೀರನು ಕೊಡಲು ಮನುಧರ್ಮಶಾಸ್ತçವೆನೆಗೊರೆಯಬೇಕೇನು? ನೊಂದವರ ಕಂಬನಿಯೊರಸಿ ಸಂತೈಸುವೊಡೆ ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು? ಅರ್ಥ:- ಸಾಮಾನ್ಯ ವಿಚಾರಗಳನ್ನು ಮಾಡಲು ಮತ್ಯಾರೋ ಅದಕ್ಕೆ ಪ್ರೇರಣೆಯಾಗಬೇಕಿಲ್ಲ, ಅವು ಸಾಮಾನ್ಯವಾಗಿ ಕಲಿಯಬೇಕಾದವುಗಳು..! ನೀರಡಿಸಿ ಬಂದ ಸೋದರಿಗೆ ನೀರು ನೀಡಲಿಕ್ಕೆ ಪ್ರಾಚೀನ ಕಾವ್ಯಗಳ, ಪ್ರಾಚೀನ ವ್ಯಕ್ತಿಗಳ ಪ್ರೇರಣೆ ಬೇಕಾಗಿಲ್ಲ.. ನೊಂದವರ ಕಣ್ಣೀರು ಒರೆಸುವ ಕೆಲಸ ಮಾನವೀಯವಾದುದು.. ಮನುಷ್ಯನಾದವನು ಸಾಮಾನ್ಯವಾಗಿ ಆ ವಿಚಾರಗಳನ್ನ ಕಲಿತಿರುತ್ತಾನೆ. ಇಂತಹ ವಿಚಾರಗಳಿಗೆ ಶಾಸ್ತçಗಳ ಪ್ರಮಾಣಿಕರಣ ಬೇಕಾಗಿಲ್ಲ ಎಂಬ ಮಾತುಗಳನ್ನ ಕುವೆಂಪು ಇಲ್ಲಿ ಹೇಳಿದ್ದಾರೆ. ಪಂಚಮರ ಶಿಶುವೊಂದು ಕೆರೆಯಲಿ ಮುಳುಗುತಿರೆ ದಡದಲಿ ಮೀಯುತ್ತಾ ನಿಂತಿರುವ ನಾನು ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು? ಅರ್ಥ:- ಕಷ್ಟ ಎಲ್ಲರಿಗೂ ಬರುತ್ತದೆ, ಆಗ ನಾವು ಜಾತಿ, ವರ್ಗ ಎಂದ ನೋಡದೆ ಇನ್ನೊಬ್ಬರ ಸಹಾಯವನ್ನ ನಿರೀಕ್ಷಿಸುತ್ತೇವೆ. ಹಾಗೆಯೇ ಮೇಲ್ಜಾತಿಯ ಮಗುವೊಂದು ಕೆರೆಯಲ್ಲಿ ಮುಳುಗುತ್ತಿರೋದನ್ನ ಕಂಡ ಕೆಳ ಜಾತಿಯವ ಮಗುವನ್ನ ರಕ್ಷಿಸಿದೆ ಜಾತಿ ಕಾರಣ ಕೊಡಲಾದೀತೆ? ಇಲ್ಲಿ ಶಾಸ್ತçಗಳಿಗಿಂತಲೂ ಮಾನವೀಯತೆ ಪ್ರಧಾನ ಅಂಶವಾಗಬೇಕು ಎಂಬ ಮಾತುಗಳನ್ನ ಮಾರ್ಮಿಕವಾಗಿ ಕುವೇಂಪು ಹೇಳಿದ್ದಾರೆ. ಅಂತು ಮನು ತಾನು ಹೇಳಿರಲಾರನಯ್ಯಯ್ಯೊ! ಹೇಳಿದ್ದರವನನೂ ಶಾಸ್ತçದೊಳೆ ಸುತ್ತಿ, ಸ್ವರ್ಗ ಹೋಗಲಿ,ಮತ್ತೆ ನರಕ ಬಂದರು ಬರಲಿ, ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ ಅರ್ಥ:- ಕೆಲ ನಿಯಮಗಳನ್ನ ಅಂಧತ್ವದಿಂದ ಒಪ್ಪಿಕೊಳ್ಳುವ ಜನ ಈಗಲೂ ಇದ್ದಾರೆ. ಪ್ರಾಚೀನ ಶಾಸ್ತçಗಳ ಹೆಸರನ್ನ ಹೇಳಿಕೊಂಡು ಕೆಲವರು ಮನು ಅಥವಾ ಆ ಕಾಲದ ಮಹನೀಯರ ಗ್ರಂಥಗಳ ಮೂಲ ವಿಚಾರವನ್ನೇ ತಿರುಚಿ, ತಮಗೆ ಅನಿಸಿದ್ದ ಪದ್ಧತಿಗಳನ್ನ ಶಾಸತ್ರಗಳ ಹೆಸರನ್ನ ಹೇಳಿಕೊಂಡು ಸಾಮಾನ್ಯ ಜನರ ಮೇಲೆ ಹೇರುವ ಪ್ರವೃತ್ತಿಯನ್ನ ಕುವೆಂಪು ಇಲ್ಲಿ ಖಂಡಿಸಿದ್ದಾರೆ. ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆಗಳನ್ನ ಹೇಳುವ ಮೂಲಕ ಜನರಲ್ಲಿ ಇಲ್ಲದೆ ಇರೋ ಆಲೋಚನೆಗಳನ್ನ ತುಂಬುವದನ್ನ ಕವಿ ತಿಳಿಸಿದ್ದಾರೆ. ಆದರೆ ಇದೆಲ್ಲವನ್ನ ಧೈರ್ಯದಿಂದ ಹೊರಹಾಕಿ ಬದುಕನ್ನ ಕಟ್ಟಿಕೊಳ್ಳಬೇಕೆಂಬ ಮಾತನ್ನೂ ಹೇಳಿದ್ದಾರೆ. ಸ್ವರ್ಗ ಹೋಗುವುದಿಲ್ಲ,ನರಕ ಬರುವುದಿಲ್ಲ ಸ್ವರ್ಗ ನರಕಗಳೇನು ಶಾಸ್ತçಸ್ಥವಲ್ಲ. ಎದೆಯ ದನಿಧರ್ಮನಿದಿ ü! ಕರ್ತವ್ಯವದುವೆ ವಿಧಿ ನಂಬದನು: ಅದನುಳಿದು ಋಷಿಯು ಬೇರಿಲ್ಲ! ಅರ್ಥ:- ಸ್ವರ್ಗ ಹಾಗೂ ನರಕಗಳ ಬಗ್ಗೆ ಹಲವು ಚರ್ಚೆಗಳನ್ನು ಕಾಣಬಹುದು. ಆದರೆ ಇಲ್ಲಿ ಕವಿ ಕುವೆಂಪು ಸ್ವರ್ಗ ಹಾಗೂ ನರಕಗಳಿಗೂ , ಶಾಸ್ತçಗಳಿಗೂ ಯಾವುದೇ ಸಂಬAಧವಿಲ್ಲ ಎಂದು ಹೇಳಿದ್ದಾರೆ. ಸ್ವರ್ಗ ಹಾಗೂ ನರP ಚಿಂತನೆಗಿAತ ನಮ್ಮ ಒಳಗಿನ ಚಿಂತನೆಗಳನ್ನ ಗೌರವಿಸಬೇಕು. ನಾವು ಮಾಡುವ ಕಾಯಕವನ್ನು ಗೌರವಿಸಬೇಕು. ಕಾಯಕವನ್ನೇ ನಂಬಬೇಕು. ಅದನ್ನ ಹೊರತುಪಡಿಸಿ ಮತ್ಯಾವುದೇ ಋಷಿಗಳಿಲ್ಲ ಎಂದು ಕವಿ ಹೇಳಿದ್ದಾರೆ. ಹಿಂದಿನಾ ಋಷಿಗಳು ಮಾನವರು ನಮ್ಮಂತೆ ಅವರ ಶಾಸ್ತçವು ಅವರ ಕಾಲಕ್ಕೆ ಮಾತ್ರ ಕಾಲಕ್ಕೆ ತಕ್ಕಂತೆ,ದೇಶಕ್ಕೆ ತಕ್ಕಂತೆ ನಮ್ಮ, ಹೃದಯವೇ ನಮಗೆ ಶ್ರೀಧರ್ಮಸೂತ್ರ! ಪುರಾತನ ಕಾಲದ ಚಿಂತನೆಗಳನ್ನ ಹಾಗೂ ಅಲ್ಲಿನ ವ್ಯಕ್ತಿಗಳನ್ನ ಕವಿ ಇಲ್ಲಿ ಪ್ರಾಯೋಗಿಕವಾಗಿ ಓರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಋಷಿಗಳು ಕೂಡಾ ನಮ್ಮ ನಿಮ್ಮಂತೆಯೇ ಸಾಮಾನ್ಯ ಮನುಷ್ಯರು ಎಂಬುದನ್ನ ಇಲ್ಲಿ ಕುವೆಂಪು ಹೇಳಿದ್ದಾರೆ. ಹಾಗಾಗಿ ಆ ಕಾಲದ ವ್ಯಕ್ತಿಗಳನ್ನೇ ದೇವರು ಎಂದು ಹೇಳುವುದನ್ನ ಕವಿ ಪ್ರಶ್ನಿಸಿದ್ದಾರೆ. ಆ ಕಾಲದ ಬದುಕು ಎಂದರೆ ಅದು ಅವರ ಕಾಲಕ್ಕೆ ಸಂಬAಧಿಸಿದ್ದು, ಅವರ ಕಾಲದ ಎಲ್ಲವೂ ಈ ಕಾಲಕ್ಕೆ ಅನ್ವಯಿಸೋದಿಲ್ಲ. ಎಲ್ಲಾ ದೇಶಗಳಿಗೂ ಅವರದ್ದೇ ಆದ ಸ್ವಂತಿಕೆ ಇರುತ್ತದೆ, ಹಾಗೆಯೇ ರಾಜ್ಯಕ್ಕೂ ಕೂಡಾ..! ಹಾಗಾಗಿ ನಮ್ಮ ಹೃದಯದ ವಿಚಾರಗಳೇ ನಮಗೆ ಶ್ರೀ ಧರ್ಮಸೂತ್ರ ಎಂಬುದನ್ನು ಕವಿ ಕುವೆಂಪು ಹೇಳಿದ್ದಾರೆ. #firstbuttonKannada #firstbutton please subscribe : #firstbutton #kannada