У нас вы можете посмотреть бесплатно ಹೆಬ್ಬುಲಿ ಹಂಗ ಗರ್ಜಿಸಿ ನಿಂತ ನೋಡ ನಮ್ಮ ರಾಯಣ್ಣ🐯🐅|Hebbuli Hanga Garjisi Ninth Noda Namma Rayanna или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹೆಬ್ಬುಲಿ ಹಂಗ ಗರ್ಜಿಸಿ ನಿಂತ ನೋಡ ನಮ್ಮ ರಾಯಣ್ಣ🐯🐅|Hebbuli Hanga Garjisi Ninrha Noda Namma Rayanna#ಹೆಬ್ಬುಲಿ ಹಂಗ ಗರ್ಜಿಸಿ ನಿಂತ ನೋಡ ನಮ್ಮ ರಾಯಣ್ಣ🐯🐅#Hebbuli Hanga Garjisi Ninrha Noda Namma Rayanna#rayannasong Singer:. Vijay Vikram K Honnur ಲಿರಿಕ್ಸ್: Praveenkumar K Honnur Music Composition:. Vijay Honnur Videography & Editing :. Praveenkumar K Honnur Programming and Dj beats : Fayaz Kustagi Recording Studio:Charan Hirehadagali Studio Poster Edit:. Vijay K Honnur Produced By : Vijaya Honnur Business Enquiry +917892988789 Fallow Me on Facebook https://www.facebook.com/vijayvikram.... your quarries ರಾಯಣ್ಣ ಡಿಜೆ ಸಾಂಗ್ ರಾಯಣ್ಣ ಸಾಂಗ್ ರಾಯಣ್ಣ ಜನಪದ ಸಾಂಗ್ ರಾಯಣ್ಣ ಡಿಜೆ ಸಾನಗ್ ಕನ್ನಡ Rayana Song Rayanna Song Rayanna Janapada Song Janapada Rayanna DJ song DJ song Kannada Kannada DJ Song kranti veera sangolli Rayanna Song Kranti veera sangolli Rayanna Kranti geete ಸಾಹಿತ್ಯ ಹೆಬ್ಬುಲಿ ಹಂಗ ಘರ್ಜಿಸಿ ನಿಂತ ನೋಡ ನಮ್ಮ ರಾಯಣ್ಣ ಗಂಡುಗಲಿ ಗಂಡೇದಿ ವೀರ ದೇಶಕ್ಕ ಕೊಟ್ಟ ತನ ಪ್ರಾಣ ಹಿಂಡಗಟ್ಟಲೆ ಬ್ರಿಟಿಷರ ಸೈನ್ಯ ಮುಕ್ಕಸಿದ ಇವ ಮಣ್ಣ ಗಂಡು ಮೆಟ್ಟಿದ ಕಿತ್ತೂರ ನಾಡ ದಂಡನಾಯಕ ರಾಯಣ್ಣ ಹೆಬ್ಬುಲಿ ಹಂಗ ಘರ್ಜಿಸಿ ನಿಂತ ನೋಡ ನಮ್ಮ ರಾಯಣ್ಣ ಗಂಡುಗಲಿ ಗಂಡೇದಿ ವೀರ ದೇಶಕ್ಕ ಕೊಟ್ಟ ತನ ಪ್ರಾಣ ತಂದಿ ಭರಮಪ್ಪ ತಾಯಿ ಕೆಂಚವ್ವಗ ಹುಟ್ಟಿ ಬಂದ ಮಂದಿ ಹಾಡಿ ಹೊಗಳಂಗ ಬೆಳದ ಸಂಗೋಳ್ಯಾಗ ಚಂದ ಹುಲಿಯ ಕೊಂದ ತಂದಿ ಶೌರ್ಯ ಇವ ಹೊತ್ತು ತಂದ ವಾಲಿಕಾರ್ಕಿ ಮಾಡಿ ಚೆನ್ನಮ್ಮನ ಬಲಗೈ ಬಂಟಾದ ಮುಂದ ಥ್ಯಾಕರೆ ಸಾಬ ಚನ್ನಮ್ಮನ ಕಪ್ಪ ಕೇಳಿ ಬಂದಾಗ ಸಿಕ್ಕಂಗ ಸೀಳಾಕ ಅವನ ರಾಯಣ್ಣ ಖಡ್ಗ ತಗದಾಗ ದಿಕ್ಕ ತಪ್ಪಿ ಬಿಕ್ಕ ಹಿಡಿತ ಥ್ಯಾಕರೆ ಕುನ್ನಿಗಾಗ ತೆಕ್ಕಿ ಬಡದ ಹಿಡದ್ರ ಮಂದಿ ರಾಯಣ್ಣನ ಸಭೆದಾಗ ಸಿಟ್ಟಿಲೆ ಹೋದ ಥ್ಯಾಕರೆ ಸಾಬ ಯುದ್ಧ ಮಾಡಿ ಸೋತ ಗಪ್ಪನ ವೆಂಕಟರಾವ ಶೆಟ್ಟಿ ನಡಸಿದ್ರ ಕುತಂತ್ರ ಪಿರಂಗಿಯರ ಜೊತಿ ಸೇರಿ ಕಿಲ್ಲೆ ಗುಟ್ಟ ಹೇಳಿದ್ರ ಸಗಣಿ ನೀರ ಮದ್ದೊಳಗ ಕಲ್ಸಾಕ ಸಂಚ ಮಾಡಿದ್ರ ಕಿತ್ತೂರ ಕಿಲ್ಲೆ ಕಾವಲಿನವಂಗ ರೊಕ್ಕ ಕೊಟ್ಟ ಕಿತ್ತಹೋದ ಕೆಲಸ ಮಾಡ್ಸಿ ನಾಡಿಗೆ ಕುತ್ತಾಗಿ ಬಿಟ್ರ ದುಷ್ಟ ಆಂಗ್ಲರು ಕಿತ್ತೂರಿಗೆ ಮತ್ತ ಮುತ್ತಿಗೆ ಹಾಕಿ ಕಷ್ಟ ಇಲ್ದ ಸಂಚೀಲೆ ಯುದ್ಧ ಗೆದ್ದ ಹಾಕಿದ್ರ ಕ್ಯಾಕಿ ಯುದ್ದ ಗೆದ್ದು ಚೆನ್ನಮ್ಮ ರಾಯಣ್ಣನ ಬಂಧಿಸಿ ತಂದ ಇಟ್ಟರ ಬೆಳಗಾವಿ ಜೈಲ್ನ್ಯಾಗ ಆಂಗ್ಲರು ಅಬ್ಬರಿಸಿ ಮಟ್ಟ ಹಾಕಿದ್ವಿ ಕಿತ್ತೂರ ಅದು ನಮ್ಮ ಪಾಲಾತ ಅಂತ ಹೇಳ್ಯಾರ ಆಂಗ್ಲರ ಹುಲಿ ಇನ್ನೂ ಇರೂದ ಮರತ ಚೆನ್ನಮ್ಮನ ಹೊರತ ಜೈಲಿಂದ ಬಿಟ್ಟಾರ ಎಲ್ಲರನ ಸಣ್ಣಾಗಿ ಒಳಗ ತಾಯ್ ನಾಡ ನೆನದ ಬಂದಾ ರಾಯಣ್ಣ ಕಣ್ಣಾಗಿನ ಕ್ರಾಂತಿ ಕಿಡಿ ಎಲ್ಲರೊಳಗ ತುಂಬ್ಯಾನ ರಾಯಣ್ಣ ಆಂಗ್ಲರ ಓಡಸಾಕ ಪಣ ತೊಟ್ಟ ನಿಂತಾನ ದಂಡು ಕಟ್ಟಿ ಯುದ್ದನಾ ಮಾಡುವ ಮುಂಚೇಕ ಜಂಗಮ ವೇಷ ತೊಟ್ಟ ಹೋದ ಚೆನ್ನಮ್ಮ ಇದ್ದ ಜೈಲಕ ಹಂಬಲ ತೋರದ ತಾಯಿಯ ಮನಸ್ಸು ಆತ ಪುಳಕ ಬೆಂಬಲ ನೀಡಿ ಕೊಟ್ಟಳ ತಾಯಿ ಬಂಗಾರ ಬೆಳ್ಳಿ ಪದಕ ಗೆಲವು ನಮ್ಮದು ಅಂತ ಅಂದ ಆಗ ರಾಯಣ್ಣ ಪಕ್ಕ ಬೈಲಹೊಂಗಲ ಜೈಲೊಳಗ ನೋಡಿ ಚೆನ್ನಮ್ಮನ ಮಕ ಯಾರ್ಗೂ ಸಂಶ ಬಾರ್ಬದಂತ ವಾಲಿಕಾರ್ಕಿ ವ್ರತ್ತಿ ವಂಶಪಾರಂಪರ್ಯ ಅಂತದು ಮಾಡಾಕ ನಿಂತ ಮತ್ತಿ ಗುಲಾಮರಲ್ಲ ನಾವು ಹೆಚ್ಚು ಕಂದಾಯ ಕೊಡಾಕ ಛಲ ಬ್ಯಾಡ ಕಂದಾಯ ವಸೂಲಿಗಂದ ರಾಯಣ್ಣ ಕಡಕ್ಕ ವಾಲಿಕಾರ್ಕಿ ಮಾಡ್ತ ಮುರದ ಕುಲಕರ್ಣಿಯ ಸೊಕ್ಕ ಕುಲಕರ್ಣಿ ಸಂಚೀಲೆ ರಾಯಣ್ಣಗ ತೋರ್ಸಿದ ಜೈಲ ದಿಕ್ಕ ಮಾಮಲೆದಾರ್ ಸಂಪಗಾವಿ ಅವ ಬಾಳ ಕಿರಿಕ್ಕ ಸಲಾಮ್ ಅನ್ನದ ರಾಯಣ್ಣಗ ತೋರ್ಸಿದ ಅವ ದರ್ಪ ಕುಲಕರ್ಣಿ ಹೆಚ್ಚು ಕಂದಾಯ ಕೊಡಲ್ಲ ಅಂದಿದ್ದಕ ಕಲ್ಲು ಹೊರ್ಸಿದ ಕೆಂಚವ್ವ ತಾಯಿ ಬೆನ್ನ ಮ್ಯಾಲೆ ಠಕ್ಕ ಜೈಲಲ್ಲಿದ್ದ ರಾಯಣ್ಣನಿಗೆ ಜಾಮೀನನ್ನು ಕೊಟ್ಟು ಮೇಲುಗಿರಿ ರಂಗಣ್ಣ ಬಿಡಿಸ್ಯಾರ ರಾಯಣ್ಣನ ಬಿಕ್ಕಟ್ಟು ಹಲ್ಲ ಕಡದ ರಾಯಣ್ಣ ಮಾಡಕೊಂಡ ಬಂದ ಸಿಟ್ಟು ಕುಲಕರ್ಣಿ ಎದಿಗೊದ್ದ ಮಾಡವಿದ್ದ ರುಂಡ ಕಟ್ಟು ಕಾಲ್ ಹಿಡದ ಬೇಡಿ ಕುಲ್ಕರ್ಣಿ ಹೆಂಡ್ತಿ ಬಿಡದ ಪಟ್ಟು ಉಳಿಸ್ಯಾಳ ಗಂಡನ ಜೀವ ಹುಲಿ ಬಾಯಿಂದ ಕಷ್ಟಪಟ್ಟು ಮಾಮಲೆದಾರ ಕುಲ್ಕರ್ಣಿ ಇಬ್ಬರೂ ಆಗಿ ಗಟ್ಟಿ ಕಲೆಕ್ಟರಗ ರಾಯನ ಹಿಡಿಬೇಕಂತೇಳಿ ಆದ್ರ ಭೆಟ್ಟಿ ರಾಯಣ್ಣನ ಸೆರೆ ಹಿಡದ ಕೊಟ್ಟವರಿಗೆ ಬಹುಮಾನ ಕಂಪಣಿ ಸರ್ಕಾರ ಹಂಗಂತ ಹೋಹೋರ್ಡಿಸೈತಿ ಫರ್ಮಾನ ರಾಯಣ್ಣನ ದಂಡ ನಡಿಸೈತಿ ಕಿತ್ತೂರಿನ ಕ್ರಾಂತಿ ಹೆಣ ಆಂಗ್ಲರದ ಉರಳಿಸಿ ಕೆಡಿಸೈತಿ ಅವರ ಶಾಂತಿ ಸಂಪಾಗಾವಿ ಬೀಡಿ ಕಚೇರಿಗೆ ಹಚ್ಚ್ಯಾರ ಬೆಂಕಿ ಕೆಂಪ ಮೋತಿಯರನ್ನ ಲೂಟಿ ಮಾಡಿ ಹಾಕ್ಯಾರ ಕ್ಯಾಕಿ ನೇಘನಾಳ ನಿಂಗನಗೌಡ ರಾಯಣ್ಣನ ಖಾಸ ಡೋರಿ ಹಳ್ಳದಾಗ ಹುಲಿನ ಹಿಡಿಸ್ಯಾನ ಮಾಡಿ ಮೋಸ ಕಿತ್ತೂರ ಹುಲಿಯ ಬಲಿ ಬೀಸಿ ಹಿಡದ್ರ ಮೋಸದಿಂದ ನೆತ್ತರ ಕುಡಿತಿದ್ದ ಎದಿಯ ಸೀಳಿ ಬಂದ್ರ ಎದುರಿಂದ ಕಂಪನಿ ಸರ್ಕಾರ ಯಾರನ್ನೂ ಮಾಡಲಿಲ್ಲ ಮಾಫು ರಾಯಣ್ಣ ಜೊತೆ ಏಳು ಜನಕಾತ ಗಲ್ಲು ಶಿಕ್ಷೆ ತೀರ್ಪು ಹದಿನೆಂಟು ನೂರ ಮೂವತ್ತೊಂದು ಜನೇವರಿ ಇಪ್ಪತ್ತಾರು ನಂದಗಡದಾಗ ರಾಯಣ್ಣನ ಗಲ್ಲಿಗೆ ಹಾಕ್ಯಾರ ಆಂಗ್ಲರು ಎದಿಯೊಳಗ ನೋವ ಹೊತ್ತ ನಾಡಿನ ಜನರು ಹದಿಹರೆಯದ ವೀರನ ತ್ಯಾಗ ನೋಡಿ ಇಟ್ಟಾರ ಕಣ್ಣೀರು ಪ್ರವೀಣಕುಮಾರ ಕಾ ಹೊನ್ನೂರ