У нас вы можете посмотреть бесплатно ಸುಳಾದಿ :ಬಂದೆನೋ ಎಲೋ ಹರಿಯೇ;ರಚನೆ:ವಿಜಯ ದಾಸರು;ಗಾಯನ:ಜಗನ್ನಾಥ ದಾಸರು & ಪರೀಕ್ಷಿತ ದಾಸರು ಚೀಕಲಪರ್ವಿ(ತಾತ-ಮೊಮ್ಮಗ ) или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ವಿಜಯದಾಸಾರ್ಯ ವಿರಚಿತ ಪಂಢರಪುರ ಕ್ಷೇತ್ರ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಬಂದೆನೊ ಎಲೊ ಹರಿಯೆ ಪಂಢರಪುರಿ ಧೊರಿಯೆ ಇಂದೆನ್ನ ಪಾಲಿಸೊ ಬಿನ್ನಪವ ಲಾಲಿಸೋ ಮಂದನು ನಾನಯ್ಯಾ ಮಹಾತ್ಮ ನೀನಯ್ಯಾ ಮಂದಾಕಿನಿ ಜನಕ ಲಿಂಗ ಭಂಗದತನಕ ಒಂದು ಸಾಧನ ಕಾಣೆ ನಿನ್ನ ಸ್ಮರಣೆ ಮಾಡೆ ಬಂಧು ಬಳಗ ನೀನೆ ಭಕ್ತಾರಮರಧೇನು ಎಂದೆಂದಿಗೆ ನಿನ್ನ ಪಾಡಿದವಗೆ ಬನ್ನಾ ಪೊಂದಿಪ್ಪವೆಂದು ಪ್ರತಿದಿನದಲಿ ನಿಂದು ವೃಂದಾರಕ ವೃಂದ ಪೊಗಳಿದರಾನಂದ ನಂದನಾಗಿ ಕೇಳಿ ಘನ ಸಂತಸ ತಾಳಿ ಬಂದಿನೊ ಎಲೊ ಹರಿಯೆ ಪಂಢರಪುರಿಧೊರಿಯೆ ಬಿಂದು ಮಾತುರ ಪುಣ್ಯ ಇಲ್ಲವೊ ಕಾರುಣ್ಯ ಸಿಂಧು ಪುಂಡರೀಕವರದ ನಿಷ್ಕಳಂಕ ಚಂದಿರಭಾಗ ಭೀಮಾತೀರ ಗೋವಾಗಾ ನಂದ ವಿಗ್ರಹ ವಿಜಯವಿಠ್ಠಲ ಮುನಿಗೇಯ ವಂದಿಸುವೆನು ನಾರಂದಮುನಿ ಹೃದ್ಭಾನು ॥ 1 ॥ ಮಟ್ಟತಾಳ ದೋಷಿ ಮಾನವರಿಗೆ ದಯಮಾಡುವೆನೆಂದು ದೇಶದೊಳಗೆ ನಿನ್ನ ಕೀರ್ತಿ ವ್ಯಾಪಿಸಿ ಇಪ್ಪದು ದೋಷ ವಿದೂರ ದುರ್ಜನಮಾರ ದೋಷ ಭಾವಗಳೆಲ್ಲನದರಂತೆ ಕೈಕೊಂಡು ಯೋಷಿ ಜನರ ಸಂಗಡ ಮಾಡಿ ಅವರ ಪಾಪ ಲೇಶ ಉಳಿಯದಂತೆ ಅಪಹರಿಸಿದ ದೇವ ಲೇಸು ನಿನ್ನ ಮಹಿಮೆ ಪೊಗಳಲು ಅತಿ ಚಿತ್ರಾ ಏಸು ಬಗೆಯಿಂದ ಒಲಿಸಿದ ಕಾಲಕ್ಕು ಆಶೆ ತೀರದು ಕಾಣೊ ಅನಿಮಿತ್ಯ ಬಂಧು ವಾಸ ಪಂಢರಪುರಿ ವಿಜಯವಿಠ್ಠಲ ಗೋವ - ಳೇಶ ಇಟ್ಟಗಿ ಮೇಲೆ ನಿಂದ ಮುಕ್ಕುಂದ ॥ 2 ॥ ತ್ರಿವಿಡಿತಾಳ ದೇವರೆಂಬುವರೆಲ್ಲ ನಿನ್ನ ತರುವಾಯ ಆವಾವ ದೇಶದಲ್ಲಿ ನೋಡಿದರು ಕಾವ ನೀತಿಯಲ್ಲಿ ಕೊಡುವಲ್ಲಿ ಕೊಂಬಲ್ಲಿ ಭೂವಲಯದಲ್ಲಿ ಸರಿಗಾಣೆನೋ ಪಾವನ್ನ ಮೂರ್ತಿಯೆ ನಿನ್ನ ನಂಬಿದೆ ಇ - ನ್ನಾವ ದೈವಗಳನ್ನು ಸ್ತುತಿಸಲರಿಯೆ ಪೂವಿನೊಳಗೆ ಇಟ್ಟು ನಮ್ಮನ ಸಲಹುವ ಗೋವರ್ಧನನುದ್ಧರಣ ಕಲಿಹರಣ ಭಾವೆ ವಂದನೆ ಕೇಳೊ ನಿರ್ವಿಘ್ನದಾಯಕನೆ ದೇವಗಂಗಿಯ ಸ್ನಾನ ಮಾಡಿಸಯ್ಯಾ ಸೇವಕ ನುಡಿದದ್ದು ಸತ್ಯ ಮಾಡುವಿ ವಸು - ದೇನಂದನ ಪಂಢರಪುರಿರಾಯನೆ ಶ್ರೀವತ್ಸಲಾಂಛನ ವಿಜಯವಿಠ್ಠಲ ಎನ್ನ ಜೀವನೋಪಾಯವೇ ಜೀವ ಜೀವೇಶಾ ॥ 3 ॥ ಅಟ್ಟತಾಳ ಹೂಣ, ಪುಳಿಂದ , ಪುಲ್ಕಸ, ಕಂಕ, ಕಿರಾತ ಕಾಣ, ಅಭೀರ, ಯವನ, ನಾನಾ ವಿಜಾತಿ ಯೋನಿ ಜನರಿಗೆ ನೀನೆ ವಲಿದಂತೆ ಕರುಣಾಳೆ ನಾನಂತು ವೈಷ್ಣವ ಸತ್ಕುಲ ಪ್ರಸೂತ ಆನಂದತೀರ್ಥರ ಮತದಲ್ಲಿ ಪೊಂದಿಪ್ಪೆ ಏನಾದರವಗುಣ ಇದ್ದರಾದಡೆ ನೀನೆ ಎಣಿಸಾದೆ ಎನ್ನ ಪಾಲಿಸು ಪರದೈವ ಕಾಣಿ ಮಿಕ್ಕಾ ದ್ರವ್ಯದಿಂದ ನಿನ್ನಂಘ್ರಿ ಮಾನಸದಲಿ ಪೂಜೆ ಮಾಡಲಿಲ್ಲ ಪ್ರಭುವೆ ಮಾನಿಸವೇಷನೆ ವಿಜಯವಿಠ್ಠಲರೇಯಾ ಜ್ಞಾನವ ಕೊಡುವೆ ಮಹಭಾಗ್ಯವ ಕೊಡುವೆ ॥ 4 ॥ ಆದಿತಾಳ ನಿನ್ನ ನುಡಿದೆ ನಾನು ನಿನ್ನ ಪಾಡಿದೆ ನಾನು ನಿನ್ನ ಕಾಡಿದೆ ನಾನು ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು ಅನ್ನಂತ ಬಗೆಯಿಂದ ಕೊಂಡಾಡುವೆನೊ ವಿಠಲಾ ಎನ್ನಭಾರ ನಿನ್ನದು ಕ್ಷಣ ಅನಂತ ಕ್ಷಣಕ್ಕೆ ಮುನ್ನೆ ಪೇಳುವದೆಲ್ಲಾ ಉಪಚಾರವೊ ಸ್ವಾಮಿ ಘನ್ನ ಪಂಢರಿರಾಯಾ ವಿಜಯವಿಠ್ಠಲರೇಯಾ ರನ್ನ ಪ್ರಸನ್ನ ಸಂಪನ್ನ ಮತಿಯ ಕೊಡು ॥ 5 ॥ ಜತೆ ಮನೋರಥ ಸಿದ್ಧ ಮಾಡಯ್ಯ ಮನ್ಮಥನಯ್ಯಾ । ಅನುಭವದಿಂದಲಿ ವಿಜಯವಿಠ್ಠಲ ಪಂಢರಿ ॥ ಶ್ರೀ ವಿಜಯದಾಸರ ವಂಶೀಕರಿಂದ ಪಾರಂಪಾರಿಕ ಭಜನೆ ಹಾಗು ಚೀಕಲಪರವಿಯ ಪರಿಚಯ