У нас вы можете посмотреть бесплатно Big Bulletin | Zameer Ahmed Makes a Serious Allegation Against BJP Leaders | HR Ranganath | April 9 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Big Bulletin | Zameer Ahmed Makes a Serious Allegation Against BJP Leaders | HR Ranganath | April 9, 2022 #publictv #bigbulletin #hrranganath Watch Live Streaming On http://www.publictv.in/live ಬೆಂಗಳೂರಿನ ಹಳೇಗುಡ್ಡದಹಳ್ಳಿಯ ಚಂದ್ರು ಕೊಲೆ ಪ್ರಕರಣ ದೊಡ್ಡ ತಿರುವು ಪಡೆದಿದೆ. ಉರ್ದು ಮಾತನಾಡಿಲ್ಲ ಅನ್ನೋ ಕಾರಣಕ್ಕೇ ಚಂದ್ರುನ ಕೊಲೆ ಮಾಡಿದ್ರು ಅಂತ ಚಂದ್ರು ಜೊತೆಗಿದ್ದ ಸ್ನೇಹಿತ ಸೈಮನ್ ರಾಜ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಮೂಲಕ, ಉರ್ದು ವಿಚಾರವಾಗೇ ಕೊಲೆ ನಡೆದಿದೆ ಎಂಬ ಬಿಜೆಪಿಗರ ಹೇಳಿಕೆಗಳಿಗೆ ಸೈಮನ್ ರಾಜ್ ಹೇಳಿಕೆ ಪುಷ್ಠಿ ಕೊಟ್ಟಿದೆ. ಏಪ್ರಿಲ್ 4ರ ಸೋಮವಾರ ಬೆಳಗಿನ ಜಾವ 2.15ರ ಸುಮಾರಿಗೆ ಜೆಜೆ ನಗರದಲ್ಲಿ ಚಂದ್ರು ಕೊಲೆಯಾಗಿತ್ತು. ಪ್ರಕರಣ ಮತೀಯ ರೂಪ ಪಡೆದಿತ್ತು. ರಾಜಕೀಯ ರಾಡಿ ಎಬ್ಬಿಸಿತ್ತು. ಪೊಲೀಸರು-ಸರ್ಕಾರದ ಮಧ್ಯೆ ತಾಳಮೇಳ ಇಲ್ಲ ಅಂತ ಟೀಕೆ ವ್ಯಕ್ತವಾಗಿತ್ತು. ಯಾರು ಏನೇ ಹೇಳಿದ್ರೂ.. ಪ್ರತ್ಯಕ್ಷದರ್ಶಿ ಸೈಮನ್‍ರಾಜ್ ಹೇಳಿಕೆ ಮಹತ್ವದ್ದು ಆತ ಮಾತನಾಡಿದರೆ ಸತ್ಯ ಹೊರಬರುತ್ತೆ ಅಂತಲೂ ಚರ್ಚೆ ಆಗಿತ್ತು. ಈ ಬೆನ್ನಲ್ಲೇ, ಸೈಮನ್ ರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಬೈಕ್ ವಿಚಾರಕ್ಕೆ ಕಿರಿಕ್ ತೆಗೆದು; ಉರ್ದು ಮಾತಾಡದೇ ಕನ್ನಡದಲ್ಲೇ ಮಾತನಾಡಿದ್ದಕ್ಕೆ ಕೊಲೆ ಮಾಡಿದ್ರು. ಅವತ್ತು ಮಧ್ಯರಾತ್ರಿ 20 ಮಂದಿ ಮಾರಕಾಸ್ತ್ರ ಹಿಡಿದು ಕಾಯ್ತಿದ್ದರೂ ಅನ್ನೋ ಆತಂಕಕಾರಿ ವಿಷಯ ಹೇಳಿದ್ದಾನೆ. ಚಂದ್ರು ಹೇಳಿಕೆ ಬೆನ್ನಲ್ಲೇ ಜೆಜೆನಗರ ಪೊಲೀಸರು ಸೈಮನ್ ರಾಜ್‍ಗೆ ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ಸೈಮನ್ ರಾಜ್ ಹೇಳಿಕೆ ಬಳಿಕ ಪೊಲೀಸ್ ಇಲಾಖೆ ವರ್ಸಸ್ ಸರ್ಕಾರ ಎನ್ನುವಂತಾಗಿದೆ. ಏಪ್ರಿಲ್ 6ರಂದು ಬಿಜೆಪಿ ಕಚೇರಿ ಬಳಿ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಮಾತನಾಡದ್ದಕ್ಕೇ ಕೊಲೆ ಆಗಿದೆ ಅಂತ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕ ಸಿಟಿ ರವಿ ಕೂಡ ದನಿಗೂಡಿಸಿದ್ದರು. ಆದರೆ, ಸ್ವಲ್ಪ ಹೊತ್ತಿಗೇ ಟ್ವೀಟ್ ಮಾಡಿದ್ದ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್.. ಬೈಕ್ ವಿಚಾರಕ್ಕೆ ಗಲಾಟೆಯಾಗಿದೆ. ಆರೋಪಿಗಳನ್ನ ಬಂಧಿಸಿದ್ದೇವೆ ಅಂದಿದ್ದರು. ಅರ್ಧ-ಒಂದು ಗಂಟೆ ಬಳಿಕ ಹೋಮ್ ಮಿನಿಸ್ಟರ್ ಉಲ್ಟಾ ಹೊಡೆದಿದ್ರು. ಆದ್ರೀಗ, ಸೈಮನ್ ಹೇಳಿಕೆ ಬೆನ್ನಲ್ಲೇ ಪೊಲೀಸ್ ಕಮೀಷನರ್ ಅವರೇ ಸುಳ್ಳು ಹೇಳ್ತಿದ್ದಾರೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿಡಿಕಾರಿದ್ದಾರೆ. ಆದರೆ, ಕಮಿಷನರ್ ಕಮಲ್ ಪಂಥ್ ಮಾತ್ರ, ನನಗೆ ಇರುವ ಎಲ್ಲಾ ಮಾಹಿತಿ ಪ್ರಕಾರ, ಡಿಕ್ಕಿಯಾಗಿ ವಿವಾದವಾಗಿ ಈ ಘಟನೆ ನಡೆದಿದೆ ಅಂದಿದ್ದಾರೆ. ಹಾಗಾದ್ರೆ, ಯಾರದು ಸತ್ಯ..? ಯಾರದು ಸುಳ್ಳು..? ಅನ್ನೋ ಪ್ರಶ್ನೆ ಎದ್ದಿದೆ. ಇನ್ನು, ಆರಗ ಸಾಹೇಬ್ರನ್ನ ಕೇಳಿದ್ರೆ.. ಮಾತಾಡಲ್ಲ ಅಂತ ಕೈ ಮುಗಿದು ಹೋಗಿದ್ದಾರೆ. ಇದರ ಮಧ್ಯೆ, ಸರ್ಕಾರ-ಗೃಹ ಸಚಿವರಿಗೆ ಮುಜುಗರ ತಂದಿಟ್ಟಿದ್ದಾರೆ ಅಂತ ಕಮಲ್ ಪಂಥ್ ತಲೆದಂಡ ಆಗುತ್ತಾ..? ಅಂತ ಚರ್ಚೆ ಎದ್ದಿದೆ. ರವಿಕುಮಾರ್ ಹೇಳಿಕೆ ಬೆನ್ನಲ್ಲೇ ಮಾಜಿ ಸಚಿವ ಜಮೀರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸೈಮನ್ ರಾಜ್‍ಗೆ ಬಿಜೆಪಿಯವರು 5 ಲಕ್ಷ ದುಡ್ಡು ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಅಲ್ಲದೆ, ರವಿಕುಮಾರ್ ಅವರೇ ಕಮೀಷನರ್ ಸುಳ್ಳು ಹೇಳ್ತಿದ್ದಾರಾ.. ನಿಮ್ಮದೇ ಸರ್ಕಾರ ಇರೋದಲ್ವಾ..? ಪೊಲೀಸ್ ಕಮೀಷನರೇ ಆಕ್ಸಿಡೆಂಟ್ ಅಂತಾ ಟ್ವೀಟ್ ಮಾಡಿದ್ದಾರೆ. ನಿಮ್ಮದೇ ಸರ್ಕಾರ ಅಷ್ಟು ಜ್ಞಾನ ಬೇಡ್ವಾ..? ಒಳ್ಳೆ ಕಮಿಷನರ್ ಅಂತಾರೆ. ಅವರ ಮೇಲೆ ಆಪಾದನೆ ಮಾಡ್ತೀರಾ..? ಇದು ಪೊಲೀಸ್ ಇಲಾಖೆ, ಸರ್ಕಾರಕ್ಕೆ ಮಾಡಿದ ಅವಮಾನ ಅಲ್ವಾ..? ಎಫ್‍ಐಆರ್‍ನಲ್ಲಿ ಸೈಮನ್‍ರಾಜ್ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾನೆ. ಅಂತ ಎಫ್‍ಐಆರ್ ನಾನು ಆ ಜಾಗದಲ್ಲಿ ಇರಲಿಲ್ಲ. ಭಯದಿಂದ ಓಡಿ ಹೋಗಿದ್ದೆ ಅಂತಾನೆ ಅಂತ ಜಮೀರ್ ಎಫ್‍ಐಆರ್ ಕಾಪಿ ತೋರಿಸಿದ್ದಾರೆ. ಇನ್ನು, ಗೃಹ ಸಚಿವರು ಆರ್‍ಎಸ್‍ಎಸ್ ಏಜೆಂಟ್ ಅಂತ ಅಂಜಲಿ ನಿಂಬಾಳ್ಕರ್ ಕಿಡಿಕಾರಿದ್ರೆ, ಬಿಜೆಪಿಯರು ಮರಕೋತಿ ತರ ಆಡ್ತಿದ್ದಾರೆ ಅಂತ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ರಾಜ್ಯದಲ್ಲಿ ಅಶಾಂತಿ ಮೂಡಿಸೋಕೆ, ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ ಪ್ರಚೋದನೆ ನೀಡ್ತಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಬೆಳಗಾವಿ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. Download Public TV app here: Android: https://play.google.com/store/apps/de... iOS: https://apps.apple.com/in/app/public-... Keep Watching Us On Youtube At: / publictvnewskannada Watch More From This Playlist Here: / publictvnewskannada Read detailed news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @ / publictv Follow us on twitter @ / publictvnews -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...