У нас вы можете посмотреть бесплатно ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕನ್ನಡ ವಿವೇಕ-೧.ಕವಿರಾಜಮಾರ್ಗದ ಆಯ್ದ ಪದ್ಯಗಳ ಭಾವಾರ್ಥ:- ಕನ್ನಡ ನಾಡು-ನುಡಿ-ಸಾಹಿತ್ಯದ ಐತಿಹಾಸಿಕತೆ, ವ್ಯಾಪಕತೆಯನ್ನು ಗುರುತಿಸುವ ಒಂದು ಅಪೂರ್ವ ದಾಖಲೆಯೆಂದರೆ ಕವಿರಾಜಮಾರ್ಗವಾಗಿದೆ. ಇದು ಕನ್ನಡದ ಮೊದಲ ಉಪಲಬ್ದ ಅಲಂಕಾರಶಾಸ್ತ್ರ ಗ್ರಂಥವಾಗಿದೆ. ಕನ್ನಡ ಕಾವ್ಯ ಗುಣ-ದೋಷಗಳ ಬಗ್ಗೆ ವಿವೇಕವನ್ನು ಬೆಳೆಸಿ ಹೇಳುವುದು ಇದರ ಮುಖ್ಯ ಗುರಿಯಾಗಿದೆ. ಕನ್ನಡ ನಾಡು-ನುಡಿಯ ಮೌಲ್ಯವನ್ನು ಚಾರಿತ್ರಿಕ, ಲಾಕ್ಷಣಿಕ, ವಿವೇಕಪರ ಎಂಬ ಮೂರು ನೆಲೆಯಲ್ಲಿ ಅರಿತುಕೊಳ್ಳಲು ಈ ಕೃತಿ ಬಹುಮುಖ್ಯ ಆಕರವಾಗಿದೆ. ಈ ಪಠ್ಯ ಭಾಗದಲ್ಲಿ ಕವಿರಾಜಮಾರ್ಗದ ಹತ್ತು ಪದ್ಯಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಈ ಪದ್ಯಗಳಲ್ಲಿ ಕನ್ನಡ ನಾಡಿನ ಜನರ ಗುಣ, ಶೀಲ, ಸ್ವಭಾವ, ನಾಡಿನ ಭೌಗೋಳಿಕ ಮೇರೆ ಮತ್ತು ಪ್ರಾಚೀನ ಪ್ರಸಿದ್ಧ ಗದ್ಯ ಪದ್ಯ ಕವಿಗಳ ವಿವರಗಳನ್ನು ಕಾಣಬಹುದು. ೧. ವಿಮಲೋದಯ, ನಾಗಾರ್ಜುನ, ಜಯಬಂಧು ಹಾಗೂ ದುರ್ವಿನೀತರು ಶ್ರೇಷ್ಠ ಗದ್ಯ ಬರಹಗಾರರೆಂದು ತಿಳಿಸುತ್ತಾನೆ. ಅಲ್ಲದೆ ಪರಮಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲರನ್ನು ಪದ್ಯದ ಪ್ರಸಿದ್ಧ ಕವಿಗಳೆಂದುಹೇಳುತ್ತಾನೆ. ಇಲ್ಲಿ ಉಲ್ಲೇಖಿತರಾಗಿರುವ ಗದ್ಯ-ಪದ್ಯ ಬರಹಗಾರರಕುರಿತು ನಿರ್ದಿಷ್ಟವಾದ ನಿಖರವಾದ ಸಂಗತಿಗಳು ನಮಗೆ ಸಿಗುವುದಿಲ್ಲ. ಆದರೆ ಇವರೆಲ್ಲ ಕವಿರಾಜಮಾರ್ಗದ ಪೂರ್ವದಲ್ಲಿ ಇದ್ದರೆಂಬುದಕ್ಕೆ ಈ ಉಲ್ಲೇಖಗಳೇ ಸಾಕ್ಷಿ. ೨. ಪದ್ಯ ಸಮಸ್ತ ಜನತೆಯ ಹೃದಯವನ್ನು ಸೂರೆಗೊಳ್ಳುತ್ತದೆ. ಅದು ಪದ ಮತ್ತು ಪಾದನಿಯಮಕ್ಕೆ ಒಳಪಟ್ಟಿರುತ್ತದೆ. ಛಂದೋವಿದ್ಯೆಯನ್ನು ಅನುಸರಿಸುವ ಈ ಮೂಲಭೂತ ಅಭಿವ್ಯಕ್ತಿ ವೃತ್ತಗಳಿಂದ ಜಾತಿಪದ್ಯಗಳಿಂದ ಕೂಡಿರುತ್ತದೆ. ೩. ಖ್ಯಾತಿವೆತ್ತ ಗುಣಸೂರಿ, ನಾರಾಯಣ, ಭಾರವಿ, ಕಾಳಿದಾಸ, ಮಾಘ ಮೊದಲಾದವರು ಈ ರೀತಿಯಲ್ಲಿ ಮಹಾಕಾವ್ಯದ ವಿಶಿಷ್ಟ ಕ್ರಮವನ್ನು ಹಾಕಿಕೊಟ್ಟ ಶ್ರೇಷ್ಠಕವಿಗಳು. ೪. ಶ್ರೇಷ್ಠರಾದ ಶ್ರೀವಿಜಯ, ಕವೀಶ್ವರ, ಪಂಡಿತಚಂದ್ರ, ಲೋಕಪಾಲ ಮೊದಲಾದವರ ನಿರುಪಮ ವಸ್ತು ವಿಸ್ತರ ರಚನೆಗಳು ಹಿಂದೆ ಹೇಳಿದ ಆದ್ಯ ಕಾವ್ಯಕ್ಕೆ ಉದಾಹರಣೆಗಳು. ೫. ಬೇರೆ ಭಾಷೆಗಳಿಗಿಂತ ಭಿನ್ನವಾದ ಕನ್ನಡದಲ್ಲಿ ಈಗಲೂ ಪ್ರಸಿದ್ಧವಾಗಿರುವ, ಎಂಬುವು ಪ್ರಸಿದ್ಧ ಕಾವ್ಯಗಳಲ್ಲಿ ಸೇರುವಂತೆ ಚಿತ್ತಾಣ ಮತ್ತು ಬೆದಂಡೆ ಎಂಬ ಪುರಾತನ ಕವಿಗಳು ಮಾಡಿದರು. ೬. ಕಂದಪದ್ಯ ಸ್ವಚ್ಛವಾದ ವೃತ್ತ ಮತ್ತು ಅಲ್ಲಲ್ಲಿ ಜಾತಿಪದ್ಯಗಳು ವಿಷಯ ಮಾತ್ರ ಹೇಳಿರುವುದರಿಂದ ಇದು ಮಾತ್ರಾ ಛಂದಸ್ಸಿನ ಕಂದ, ಅಕ್ಷರ ಛಂದಸ್ಸಿನ ವೃತ್ತ ಮತ್ತು ಅಂಶ ಛಂದಸ್ಸಿನ ಪದ್ಯಗಳು ಸೇರಿದ ವಿಶಿಷ್ಟ ಕಾವ್ಯಪ್ರಕಾರವೆಂದು ಊಹಿಸಬಹುದು. ೭. ಕಂದಪದ್ಯಗಳು ಹಲವಿದ್ದು, ಅವುಗಳ ಜೊತೆಗೆ ಸುಂದರ ವೃತ್ತಗಳು, ಅಕ್ಕರ, ಚೌಪದಿ, ಗೀತಿಕೆ ಮತ್ತು ತ್ರಿಪದಿಗಳು ಅಂದವಾಗಿ ಸೇರುವಂತೆ ಹೇಳಿದರೆ ಅದು ಚೆತ್ತಾಣ. ೮. ಕಾವೇರಿಯಿಂದ ಗೋದಾವರಿಯವರೆಗಿನ ವಿಸ್ತಾರದಲ್ಲಿ ಹರಡಿಕೊಂಡಿರುವ ನಾಡು, ಕನ್ನಡ ನಾಡು. ಈ ನಾಡಿನಲ್ಲಿರುವ ಕನ್ನಡ ಜನಸಮುದಾಯವು ಭೂಮಂಡಲದಲ್ಲಿ ವಿಲೀನವಾಗಿಯೂ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾರೆ. ೯. ಈ ಭೂಭಾಗದಲ್ಲಿಯೇ ಕಿಸುವೊಳಲು (ಪಟ್ಟದಕಲ್ಲು), ಕೊಪಣ (ಕೊಪ್ಪಳ), ಪುಲಿಗೆರೆ (ಲಕ್ಷೇಶ್ವರ), ಒಕ್ಕುಂದ (ಒಕ್ಕುಂದಗಳ ನಡುವಣ ನಾಡು ತಿರುಳನ್ನಡ ಮಾತು ಎನ್ನುವುದು ಆಡುವುದು ಮಾತ್ರವಲ್ಲ ಅದೊಂದು ಅರಿವಿನ ಪ್ರಕ್ರಿಯೆ ಎಂಬ ಸ್ಪಷ್ಟತೆ ಮಾರ್ಗಕಾರನದು. ೧೦. ಪದವನ್ನು ಅರಿತು ನುಡಿಯಲು, ನುಡಿದುದನ್ನು ಸರಿಯಾಗಿ ತಿಳಿಯಲು ಸಮರ್ಥರು ಈ ನಾಡವರು. ನಿಜವಾಗಿಯೂ ಭಾಷೆಯಲ್ಲಿ ಚತುರರಾದ ಈ ಜನರು ಕಾವ್ಯದ ಕುರಿತು ಅಧ್ಯಯನ ನಡೆಸದೆಯೂ ಸಹಜವಾಗಿಯೇ ಕಾವ್ಯವನ್ನು ಪ್ರಯೋಗಿಸಬಲ್ಲ ಪರಿಣತಮತಿಗಳು.