У нас вы можете посмотреть бесплатно ಶ್ರೀ ಸೂರಿಕುಮೇರಿ ಗೋವಿಂದ ಭಟ್ಟ (Shri Surikumeri Govinda Bhat) или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ತೆಂಕುತಿಟ್ಟು ಯಕ್ಷರಂಗದಲ್ಲಿ ದಶಾವತಾರಿ ಎಂದು ಗುರುತಿಸಲ್ಪಟ್ಟ, 7 ದಶಕಗಳಿಂದ ಯಕ್ಷರಂಗದಲ್ಲಿ ಸಕ್ರಿಯರಾಗಿರುವ, ತೆಂಕುತಿಟ್ಟು ಯಕ್ಷಗಾನ ಗುರುಗಳು ಎಂದೇ ಗುರುತಿಸಲ್ಪಡುವ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟ (ಶ್ರೀ ಕೆ. ಗೋವಿಂದ ಭಟ್ಟ) [Recognized as Dashavatari from Art Lovers, Active artist for 7 decades, Yakshagana Guru Shri Surikumeri Govinda Bhat (Shri K. Govinda Bhat] ಉತ್ತಮವಾದ ಶೈಲಿಯ ನಾಟ್ಯ ಮತ್ತು ಮಾತುಗಾರಿಕೆಯಲ್ಲಿನ ಪ್ರಬುದ್ಧತೆಯ ಕಾರಣ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿಯನ್ನು ಗಳಿಸಿರುವ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರು ಧರ್ಮಸ್ಥಳ ಮೇಳದ ಹಿರಿಯ ಅನುಭವಿ ಕಲಾವಿದರಾಗಿ ಇವತ್ತಿಗೂ ತಿರುಗಾಟವನ್ನು ನಡೆಸುತ್ತಿದ್ದಾರೆ. ಶ್ರೀ ಕಿನಿಲ ಶಂಕರನಾರಾಯಣ ಭಟ್ಟ ಮತ್ತು ಕುಕ್ಕೆಮನೆ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರರಾಗಿ 22 ನೇ ಮಾರ್ಚು 1940 ರಲ್ಲಿ ಜನಿಸಿದ ಇವರು ಮೂಲತಃ ಜೀವನಯಾಪನೆಗಾಗಿಯೇ ಯಕ್ಷಗಾನ ಕ್ಷೇತ್ರಕ್ಕೆ ಬಂದು ತಮ್ಮ 11 ನೆಯ ವಯಸ್ಸಿನಲ್ಲಿ ಯಕ್ಷಗಾನ ರಂಗಪ್ರವೇಶವನ್ನು ಮಾಡಿದವರು. ಕುರಿಯ ವಿಠಲ ಶಾಸ್ತ್ರಿಗಳು ಇವರಿಗೆ ಯಕ್ಷಗಾನದ ಗುರುಗಳಾದರೆ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಮೊದಲಾದವರಲ್ಲಿ ಭರತನಾಟ್ಯದ ಅಭ್ಯಾಸವನ್ನೂ ಮಾಡಿಕೊಂಡವರು. ಧರ್ಮಸ್ಥಳದಲ್ಲಿ 50 ವರ್ಷಗಳು, ಮೂಲ್ಕಿಯಲ್ಲಿ 1 ವರ್ಷ, ಕೂಡ್ಲು ಮೇಳದಲ್ಲಿ 2 ವರ್ಷಗಳು, ಸುರತ್ಕಲ್ ಮೇಳದಲ್ಲಿ 1 ವರ್ಷ, ಇರಾ ಶ್ರೀ ಸೋಮನಾಥೇಶ್ವರ ಮೇಳದಲ್ಲಿ 13 ವರ್ಷಗಳು ಒಟ್ಟಾರೆಯಾಗಿ ಬರೋಬ್ಬರಿ 67 ವರ್ಷಗಳ ಮೇಳ ತಿರುಗಾಟ ಸೂರಿಕುಮೇರಿ ಗೋವಿಂದ ಭಟ್ಟರದ್ದು. ಸ್ತ್ರೀವೇಷ, ಪುಂಡು ವೇಷ, ಕಿರೀಟ ವೇಷ ಇತ್ಯಾದಿ ವೇಷಪ್ರಕಾರಗಳಲ್ಲಿ ನೈಪುಣ್ಯತೆಯನ್ನೂ, ಪ್ರೌಢಿಮೆಯನ್ನೂ ಗಳಿಸಿರುವ ಇವರು ಶ್ರೀ ಕೃಷ್ಣ, ಶ್ರೀ ರಾಮ, ಸುಧನ್ವ, ಜಮದಗ್ನಿ, ಶ್ರೀದೇವಿ, ವಿಶ್ವಾಮಿತ್ರ, ಪರಶುರಾಮ, ಮಾಗಧ, ಶಿಶುಪಾಲ, ರಕ್ತಬೀಜ, ದುರ್ಯೋಧನ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತ ಬಂದಿದ್ದಾರೆ. ಉತ್ತಮ ಮಾತು, ಖಚಿತ ಲಯ, ಉತ್ತಮ ನಾಟ್ಯ, ಕರಾರುವಾಕ್ಕಿನ ಧೋರಣೆಗಳನ್ನು ಇವರ ಪಾತ್ರಗಳಲ್ಲಿ ಕಾಣಬಹುದಾಗಿದೆ. ಶ್ರೀಮತಿ ಸಾವಿತ್ರಿ ಎಂಬವರನ್ನು ವರಿಸಿರುವ ಇವರಿಗೆ ಪ್ರಸನ್ನ ಕುಮಾರ್, ಶ್ಯಾಮ ಪ್ರಸಾದ್, ಸೂರ್ಯ ಪಸಾದ್ ಮೂವರು ಮಕ್ಕಳು. ಆಟ-ಕೂಟಗಳೆರಡರಲ್ಲೂ ಖ್ಯಾತಿಯನ್ನು ಗಳಿಸಿರುವ ಇವರು ನಾಟ್ಯಗುರುಗಳಾಗಿ ಸಾವಿರಾರು ಶಿಷ್ಯರುಗಳನ್ನು ಹೊಂದಿದವರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ, ಕಲ್ಲುಗುಂಡಿ ಶೇಣಿ ಪ್ರಸಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳಲ್ಲದೆ ಕದ್ರಿ, ಬೆಂಗಳೂರು, ಮುಂಬೈ ಮುಂತಾಗಿ ದೇಶ ಮತ್ತು ಅಬುದಾಭಿ, ದುಬೈ, ಬೆಹರೈನ್ ಮುಂತಾಗಿ ವಿದೇಶಗಳಲ್ಲಿಯೂ ಅಗಣಿತ ಮಾನ ಸಮ್ಮಾನಗಳನ್ನು ಗಳಿಸಿದ್ದಾರೆ. ಯಕ್ಷಗಾನ ಕ್ಷೇತ್ರದ ಸೂರಿಕುಮೇರಿ ಗೋವಿಂದ ಭಟ್ಟರ ಶಿಷ್ಯರು ಮತ್ತು ಅಭಿಮಾನಿಗಳಿಂದ ತೆಂಕುತಿಟ್ಟು ಯಕ್ಷರಂಗದ ದಶಾವತಾರಿ ಎಂದು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. 11 ನೆಯ ವಯಸ್ಸಿನಿಂದ ಇವತ್ತಿನವರೆಗೂ ಕಳೆದ 67 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿ ಮುಂದುವರೆಯುತ್ತಿದ್ದಾರೆ. ಸೂರಿಕುಮೇರಿ ಗೋವಿಂದ ಭಟ್ಟರ ಸಂದರ್ಶನವನ್ನು ಶ್ರೀ ಧರ್ಮಸ್ಥಳ ಮೇಳದ ಬಯಲಾಟವಿದ್ದ ಕಡೆ ಹೋಗಿ ಮಾಡಿಕೊಂಡೆ. ಮರುದಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಹೋಗುವವರಿದ್ದರು. ಒಟ್ಟು 2 ಘಂಟೆಗಳ ಸಂದರ್ಶನವನ್ನು ಗೋವಿಂದ ಭಟ್ಟರು ನೀಡಿದ್ದಾರೆ. ಖುದ್ದು ಅವರಲ್ಲಿಯೇ ತಮ್ಮ ಕೆಲ ವಿಚಾರಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಾಗ ಹಾರ್ದಿಕವಾದ ಮುಗುಳ್ನಗುವಿನೊಂದಿಗೆ ಈ ಪ್ರಪಂಚದಲ್ಲಿ ಎಲ್ಲರನ್ನೂ ನೂರಕ್ಕೆ ನೂರು ಒಪ್ಪಿಕೊಳ್ಳುವುದಕ್ಕೆ ಬರುತ್ತದೆಯೇ? ಎಲ್ಲರಲ್ಲೂ ಒಂದಲ್ಲ ಒಂದು ಕೊರತೆಯಿದ್ದೇ ಇರುತ್ತದೆ. ಯಾರೂ ಪರಿಪೂರ್ಣರಲ್ಲ. ಅನೇಕ ವಿಚಾರಗಳು ಅನೇಕರಿಗೆ ಒಪ್ಪಿತವಾಗುವುದಿಲ್ಲ ಎನ್ನುವ ಸಂತುಲಿತ ಮಾತನ್ನು ಹೇಳಿದರು. _________________________________________________________________ I hereby declare that, the content is in the public domain OR is not eligible for copyright protection. I swear, under penalty of perjury, that I have a good faith belief that the material does not fall under copyright protection. I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.