У нас вы можете посмотреть бесплатно ದಾಸೋಹರತ್ನ ಚಕ್ರವರ್ತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀಕ್ಷೇತ್ರ ಯಡೂರದಲ್ಲಿಅನ್ನದಾಸೋಹ 17.18. ಮತ್ತು 19 ಜನವರಿ 2026 ರಂದು ದಾನೇಶ್ವರ ಅಪ್ಪಾಜಿ ಅವರಿಂದ ಅನ್ನ ದಾಸೋಹ ಜರಗುವದು.... . ಯಡೂರ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಪಂಚಪಕ್ವಾನದ ಭೋಜನವನ್ನು ಉಣಬಡಿಸಿದ ತ್ರಿವಿಧ ದಾಸೋಹಿ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಐತಿಹಾಸಿಕ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಮಹಾದಾಸೋಹವು ಒಂದು ಆಕರ್ಷಣೀಯ ಕೇಂದ್ರ ಬಿಂದು. ಈ ಮಹಾದಾಸೋಹದಲ್ಲಿ ಭಕ್ತರು ಪಂಚಪಕ್ವಾನ ಭೋಜನವನ್ನು ಸವಿದು ಪಾವನರಾದರು.ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ..ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ರ ಯಡೂರಿನ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಂಡಿಗಣಿ ಶ್ರೀ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರ ನೇತೃತ್ವದಲ್ಲಿ ಮಹಾದಾಸೋಹ ನಡೆಯಿತು. ಶ್ರೀಶೈಲ ಜಗದ್ಗುರುಗಳ ಜೊತೆಗೆ ದಾನೇಶ್ವರ ಅಪ್ಪಾಜಿ ಜೊತೆಗೂಡಿ ಮಹಾದಾಸೋಹಕ್ಕೆ ಚಾಲನೆಯನ್ನು ನೀಡಿದರು. ಈ ದಾಸೋಹದಲ್ಲಿ ಭಕ್ತರಿಗೆ ದಾನೇಶ್ವರ ಅಪ್ಪಾಜಿ ಯವರು ಪಂಚಪಕ್ವಾನವದ ಭೋಜನವನ್ನು ಉಣಬಡಿಸಿದರು. ಹುಗ್ಗಿ ಹೋಳಿಗೆ, ಹಾಲು, ಮಜ್ಜಿಗೆ, ತುಪ್ಪ, ಜಿಲೇಬಿ, ಭಜಿ,ಬೂಂದೆ ಬದನೆಕಾಯಿಪಲ್ಲೆ, ಮಸಾಲೆ ಅನ್ನ, ಬಿಳಿ ಅನ್ನ, ಸಾಂಬಾರು ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ಒಳಗೊಂಡ ಪಂಚಪಕ್ವಾನದ ಭೋಜನವನ್ನು ಭಕ್ತರಿಗೆ ಉಣಬಡಿಸಿದರು ಹಾಗೂ ಊಟ ಮುಗಿದ ಮೇಲೆ ಭಕ್ತರಿಗೆ ತಾಂಬೂಲದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೂ ಬಂಡಿಗಣಿ ಮಠದಿಂದ ಸುಮಂಗಲಿಯರಿಗೆ ಉಡಿತುಂಬಲಾಯಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳು ಮಾಧ್ಯಮಗಳ ಜೊತೆ ಮಾತನಾಡಿ ವರ್ಷದ 365 ದಿನಗಳಲ್ಲಿ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಪ್ರತಿದಿನ ದಾಸೋಹ ನಡೆಸುತ್ತಿರುವ ಏಕೈಕ ಮಠವೆಂದರೆ ಅದು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠ ಅನ್ನದಾನ ಮಹಾದಾನ ಈ ನಿಟ್ಟಿನಲ್ಲಿ ಅನ್ನದಾನೇಶ್ವರ ಅಪ್ಪಾಜಿ ಯವರು ಮಹಾದಾನ ಮಾಡುವ ಮೂಲಕ ಶ್ರೀಗಳು ಸಮಾಜಕ್ಕೆ ಬಹಳ ದೊಡ್ಡ ಉಪಕಾರವನ್ನು ಮಾಡುತ್ತಿದ್ದಾರೆ ಎಂದು ಶ್ರಿಶೈಲ್ ಜದ್ಗುರುಗಳು ಹೇಳಿದರು ನಂತರ ದಾಸೋಹ ರತ್ನ ಚಕ್ರವರ್ತಿದಾನೇಶ್ವರ ಅಪ್ಪಾಜಿ ಯವರು ಮಾತನಾಡಿ ನಮ್ಮ ತಾಯಿಯವರ ಆಶಯದಂತೆ ಅನ್ನದಾನ ಮಾಡಿಕೊಂಡು ಬರುತ್ತಿದ್ದೇವೆ,ಪ್ರತಿದಿನ 2 ಸಾವಿರ ಜನರಿಗೆ ಅನ್ನದಾನ ಮಾಡಬೇಕು ಎಂದು ನಮ್ಮ ತಾಯಿ ನನಗೆ ಹೇಳಿದ್ದರು, ಆ ಪ್ರಕಾರವಾಗಿ ಅನ್ನದಾನವನ್ನು ಮಾಡಿಕೊಂಡು ಬರುತ್ತಿದ್ದೇವೆ.ದೇವರ ಆಶಿವಾರ್ದದಿಂದ ವರ್ಷದ 282 ದಿನಗಳ ಕಾಲ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ದಾಸೋಹವನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಅನ್ನದಾನೇಶ್ವರ ಅಪ್ಪಾಜಿ ಯವರು ತಿಳಿಸಿದರು..ಒಟ್ಟಿನಲ್ಲಿ ಯಡೂರಿನ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವದಲ್ಲಿ ಅನ್ನದಾನೇಶ್ವರ ಅಪ್ಪಾಜಿ ಯವರ ಮಹಾದಾಸೋಹವು ಆಕರ್ಷಣಿಯ ಕೇಂದ್ರಬಿಂದುವಾಗಿತ್ತು.. ಇಲ್ಲಿ ಭಕ್ತರು ಪಂಚಪಕ್ವಾನದ ಭೋಜನವನ್ನು ಸವಿದು ಪಾವನರಾದರು.. #sriveerbhadreshwarjatra #yedujatra #chikkodi #innews #daneshwara Appaji ದಾನೇಶ್ವರಅಪ್ಪಾಜಿ ದಾನೇಶ್ವರರು