У нас вы можете посмотреть бесплатно ಕೇಂದ್ರೀಯ ಗುಪ್ತಚರ ಸಂಸ್ಥೆಯ ಶತಮಾನೋತ್ಸವ ದತ್ತಿ ಉಪನ್ಯಾಸ ಕಾರ್ಯಕ್ರಮ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕೇಂದ್ರೀಯ ಗುಪ್ತಚರ ಸಂಸ್ಥೆಯ ಶತಮಾನೋತ್ಸವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಉಪಸ್ಥಿತರಿದ್ದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಆರ್ಥಿಕ ಹೂಡಿಕೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಭದ್ರತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ' ಸಮೃದ್ಧ ಭಾರತ ' ಕ್ಕಾಗಿ, ಸುರಕ್ಷಿತ ಭಾರತ ನಿರ್ಮಿಸುವುದು ಅತ್ಯಗತ್ಯವಾಗಿದೆ. ಭಾರತ ಬಹು ಆಯಾಮದ ಭದ್ರತಾ ಸವಾಲುಗಳು ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದೆ, ಗಡಿ ಪ್ರದೇಶಗಳಲ್ಲಿನ ಉದ್ವಿಗ್ನತೆ, ಭಯೋತ್ಪಾದನೆ ಹಾಗೂ ಕೋಮು ಮೂಲಭೂತವಾದ ಕಾಳಜಿ ವಹಿಸಬೇಕಾದ ಸಾಂಪ್ರದಾಯಿಕ ಕ್ಷೇತ್ರಗಳಾಗಿವೆ ಎಂದು ಹೇಳಿದರು. ದೇಶದಲ್ಲಿ ಎಡಪಂಥೀಯ ಉಗ್ರವಾದ ಸಂಪೂರ್ಣ ನಿರ್ಮೂಲನೆಯ ಹಂತ ತಲುಪಿದ್ದು, ಆಂತರಿಕ ಭದ್ರತೆಯಲ್ಲಿ ತೊಡಗಿರುವ ಪಡೆಗಳು ತೀವ್ರ ಕ್ರಮ ಕೈಗೊಂಡಿವೆ ಎಂದ ರಾಷ್ಟ್ರಪತಿ, ಈ ಸಂದರ್ಭದಲ್ಲಿ ಗುಪ್ತಚರ ಸಂಸ್ಥೆ ದೇಶದ ಆಂತರಿಕ ಭದ್ರತೆಗೆ ನೀಡಿದ ಅಸಾಧಾರಣ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶವಾಸಿಗಳಿಗೆ ಭದ್ರತೆ ಒದಗಿಸುವಲ್ಲಿ ಹಾಗೂ ರಾಷ್ಟ್ರದ ಏಕತೆ, ಸಮಗ್ರತೆ ಖಚಿತಪಡಿಸುವಲ್ಲಿ ಗುಪ್ತಚರ ಸಂಸ್ಥೆ ಮಹತ್ವದ ಪ ತ್ರ ನಿರ್ವಹಿಸುತ್ತಿದೆ. ಕಳೆದ ದಶಕದಲ್ಲಿ ಗುಪ್ತಚರ ಸಂಸ್ಥೆಯ ಸಮನ್ವಯದಿಂದಾಗಿ, ಭದ್ರತಾ ಸಂಸ್ಥೆಗಳು ದೇಶದೊಳಗೆ ಹಲವಾರು ಬೆದರಿಕೆಗಳನ್ನು ತಟಸ್ಥಗೊಳಿಸಿವೆ. ರಾಷ್ಟ್ರೀಯ ಭದ್ರತೆಯಲ್ಲಿ ನಿರತವಾಗಿರುವ ಸರ್ಕಾರಿ ಸಂಸ್ಥೆಗಳ ಪ್ರಯತ್ನಗಳಿಗೆ ಜಾಗೃತ ನಾಗರಿಕರು ಬೆಂಬಲವನ್ನು ನೀಡಬಹುದು. ಸಮುದಾಯದ ಭಾಗವಹಿಸುವಿಕೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ. ಭದ್ರತಾ ಬಿಕ್ಕಟ್ಟುಗಳನ್ನು ತಪ್ಪಿಸುವಲ್ಲಿ ನೆರವಾಗುವ ಜಾಗರೂಕ ನಾಗರಿಕರ ಹಲವಾರು ಉದಾಹರಣೆಗಳಿವೆ ಎಂದು ಅವರು ಹೇಳಿದರು. *