У нас вы можете посмотреть бесплатно |ಡೇರೆ ಹೂವಿನ ಅರಮನೆ||Beautiful Dahlia Garden||ಸಾಗರ ಶೆಡ್ತಿಕೆರೆ ಉಷಾ ಶ್ರೀಕಾಂತ್ ಮನೆ ಡೇರೆ ಕೈತೋಟ| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸೊಬಗಿನ ಸೂರೆ- ಡೇರೆ ಅಗ್ನಿಕುಂಡ..., ಜಮಖಾನಪಟ್ಟೆ.., ಲಿಲ್ಲಿಪುಟ್ಟ.., ಬೂದಿ ಉಂಡೆ.., ಬೂದಿ ತಾವರೆ..., ಜರ್ಬೇರಾ ತಾವರೆ...ಪುನಾತಾವರೆ...ಹೀಗೆ ಹತ್ತು ಹಲವು ಹೆಸರಿನ ೧೫೦ಕ್ಕೂ ಅಧಿಕ ಬಗೆಯ ೫೦೦ ಡೇರೆ ಗಿಡಗಳಲ್ಲಿ ಹೂವರಳಿ ನಿಂತಿವೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೆಡ್ತಿಕೆರೆಯ ಉಷಾ ಶ್ರೀಕಾಂತ್ ಅವರ ಮನೆಯಂಗಳದ ಡೇರೆ ಕೈತೋಟ. ಇವರ ಅಂಗಳದಲ್ಲಿ ಬೆಳೆದು ಹೂವರಳಿ ನಿಂತ ಡೇರೆ ಗಿಡಗಳನ್ನು ನೊಇಡುವುದೇ ಕಣ್ಣಿಗೆ ಹಬ್ಬ. ಹೇಗೆ ಬೆಳೆದರು? ಪ್ರತಿ ವರ್ಷ ಮಳೆಗಾಲ ಪ್ರಾರಂಭವಾದಾಗ ಅಂದರೆ ಜೂನ್ ತಿಂಗಳಲ್ಲಿ ಡೇರೆ ಗಡ್ಡೆಗಳಿರುವ ಪ್ಲಾಸ್ಟಿಕ್ ಬ್ಯಾಗ್, ಚೀಲಗಳನ್ನು ಅಂಗಳದಲ್ಲಿ ಇಡುತ್ತಾರೆ. ಅದು ೧೫ ದಿನಗಳಲ್ಲಿ ಮೊಳಕೆ ಬಂದು ಅರ್ಧ ಅಡಿ ಎತ್ತರದ ಗಿಡವಾದಾಗ ಬುಡದ ಮಣ್ಣು ಸಡಿಲಿಸಿ ಡಿಎಪಿ ಗೊಬ್ಬರ, ಹೊಸ ಮಣ್ಣು ಹಾಕುತ್ತಾರೆ. ಗಿಡಗಳು ಗಾಳಿ ಮಳೆಗೆ ಬೀಳದಂತೆ ಕೋಲು ಕಟ್ಟಿಕೊಡುತ್ತಾರೆ. ಗಿಡದ ಕುಡಿಗಳನ್ನು ಚಿವುಟಿ ಗಿಡ ತುಂಬಾ ಟಿಸಿಲು ಬರುವಂತೇ ಮಾಡುವುದರಿಂದ ಹೆಚ್ಚು ಹೂವು ಬಿಡುವುದು. ಪ್ರತೀ ೧೫ ದಿನಗಳಿಗೊಮ್ಮೆ ಸೆಗಣಿ ನೀರು ಹಾಕಿ, ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಇಷ್ಟೇ, ಗಿಡಗಳಲ್ಲಿ ಅರಳಿ ನಿಂತ ಹೂವುಗಳನ್ನು ನೋಡಲು ಎರಡು ಕಣ್ಣು ಸಾಲದು. ವಿಡಿಯೋ ಕೃಪೆ: ಸಮುದ್ಯತಾ ವೆಂಕಟರಾಮು. #Dahlia #DahilaGarden #flowers #flower #flowerpainting #dahliaflowers #dahliacollections #dahliaVerity #beautifulflowers #sagar #shivmogga