У нас вы можете посмотреть бесплатно ಬೆಂಗಳೂರು- ಅಂಗವಿಕಲತೆ ಹಾಗೂ ಸಮನ್ವಯ ಸಮಾಜ ನಿರ್ಮಾಣ’ದ ಕುರಿತು ಸಂದೇಶ ಸಾರುವ ಗೋಡೆ ಚಿತ್ರಗಳನ್ನು ಬರೆಯುವ ಅಭಿಯಾನ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯು ಜನವರಿ 26 ರಿಂದ ಫೆಬ್ರವರಿ 20ರ ವರೆಗೆ ‘ಅಂಗವಿಕಲತೆ ಹಾಗೂ ಸಮನ್ವಯ ಸಮಾಜ ನಿರ್ಮಾಣ’ದ ಕುರಿತು ಸಂದೇಶ ಸಾರುವ ಗೋಡೆ ಚಿತ್ರಗಳನ್ನು ಬರೆಯುವ ಅಭಿಯಾನ ಹಮ್ಮಿಕೊಂಡಿದೆ. ಈ ಸಂಸ್ಥೆಯ ಮೂಲಕ ಜೀವನ ರೂಪಿಸಿಕೊಂಡಿರುವ 20ಕ್ಕೂ ಹೆಚ್ಚು ವಿಶೇಷ ಚೇತನ ಯುವಕ- ಯುವತಿಯರು ಅಭಿಯಾನದಲ್ಲಿ ಭಾಗವಹಿಸಿದ್ದು, ಸಮಾಜದಲ್ಲಿ ಅಂಗವಿಕಲತೆಯ ಅರಿವು, ಸಮನ್ವಯದ ಶಿಕ್ಷಣ, ವಿಶೇಷ ಚೇತನ ಸ್ನೇಹಿ ಸಮಾಜ ನಿರ್ಮಾಣದ ಕುರಿತು ಅರಿವು ಮೂಡಿಸುವ ಚಿತ್ರಗಳನ್ನು ಮತ್ತು ಬರಹಗಳನ್ನು ಗೋಡೆಮೇಲೆ ಚಿತ್ರಿಸಲಾಗುತ್ತಿದೆ. ಡಿಡಿ ನ್ಯೂಸ್ ನೊಂದಿಗೆ ವಿಶೇಷ ಚೇತನ ಚಿತ್ರಕಾರ ಜೀವನ್, ಈ ಅಭಿಯಾನದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ನಾವು ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಅಂಗವಿಕಲರಿಗೆ ಸಮಾಜದಲ್ಲಿನ ಸ್ಥಾನಮಾನದ ಅರಿವು ಮೂಡಿಸುವುದೇ ಈ ಅಭಿಯಾನದ ಉದ್ದೇಶ ಎಂದರು. ಮತ್ತೋರ್ವ ಚಿತ್ರಕಾರ ರಾಮು, ಚಿಕ್ಕ ವಯಸ್ಸಿನಿಂದ ಸಂಸ್ಥೆಯಲ್ಲಿದ್ದು, ಸಂಸ್ಥೆಯು ವಿಶೇಷ ಚೇತನರ ನೆರವಿಗೆ ನಿಂತಿದೆ. ವಿಶೇಷ ಚೇತನರು ಜೀವನದಲ್ಲಿ ಮತ್ತೊಬ್ಬರನ್ನು ಅವಲಂಭಿಸದೆ ಬದುಕುವುದನ್ನು ಕಲಿಸುತ್ತಿದೆ ಎಂದರು. ಸಂಸ್ಥೆಯ ನಿರ್ದೇಶಕ ಶಿವಾ ಸಿ. ಹಿರೇಮಠ, ಪೋಷಕರುಗಳು ವಿಶೇಷ ಚೇತನರಿಗೆ ಹಲವು ಅವಕಾಶ ಕಲ್ಪಿಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ನೆರವಾಗಬೇಕು ಎಂದರು.WATCH ಕಲಾ ಸಂಯೋಜಕ ಶಿವಬೋಧ, ವಿಶೇಷ ಚೇತನರನ್ನು ಸಮಾಜದಲ್ಲಿ ಕಡೆಗಣಿಸದೆ, ಅವರು ನಮ್ಮೆಲ್ಲರಂತೆ ಸಮರ್ಥರು ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.WATCH #LiveDDChandanaNews #DDChandanaNews #DDChandana #DDKannada