У нас вы можете посмотреть бесплатно ಭವಾನಿ ಶಂಕರ ಆರ್ಟ್ಸ್, ಶ್ರೀ ಶಶಿಧರ ವೇಳನ್ಕರ್ ಇವರ ಅನುಭವ ಮಾತುಗಳು... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಶೆಟ್ಟಿಬೆಟ್ಟು ಭವಾನಿ ಶಂಕರ ಆರ್ಟ್ಸ್ ಇದರ ಮಾಲಕರಾದ ಶ್ರೀ ಶಶಿಧರ ವೇಳನ್ಕರ್ ಇವರ ಅನುಭವದ ನುಡಿಗಳನ್ನು ಬಿಚ್ಚಿಟ್ಟದ್ದು ಹೀಗೆ.. ಶ್ರೀ ಗಣಪತಿ ವೇಳಂಕರ್ ರವರ ಪುತ್ರ ಶ್ರೀ ಶಂಕರ ವೇಳಂನ್ಕರ್ ಇವರ ಸುಪುತ್ರ ಶ್ರೀ ಶಶಿಧರ ವೇಳನ್ಕರ್ ಬೆಳ್ಳಿ ಕೆಲಸದಲ್ಲಿ ಹೆಸರು. ಶ್ರೀ ಶಶಿಧರ ವೇಳಂಕರ್ ಇವರು ಬಾಲ್ಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶೆಟ್ಟಿವೆಟ್ಟು ಪರಿಸರದಲ್ಲಿ ಕಳೆದರು. ಮೆಟ್ರಿಕ್ಯುಲೇಶನ್ ಬಳಿಕ ಇನ್ನೇನು ಎಂದು ಯೋಚಿಸಿದಾಗ ಬೆಳ್ಳಿ ಕುಸುರಿ ಕೆಲಸವನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದ ಶ್ರೀಯುತ ಸುಧಾಕರ ಡೋಂಗ್ರೇ ಕಲ್ಲಣ ಇವರ ಶಿಷ್ಯತ್ವವನ್ನು ಬಯಸಿ, ತಾನು ಬೆಳ್ಳಿಯ ಕೆಲಸವನ್ನು ಮಾಡುವುದಕ್ಕೆ ಮುಂದಾದರು. 2,000 ಇಸವಿಯಿಂದ 2004 ಇಸವಿಯ ತನಕ ಅವರ ಬಳಿ ಬೆಳ್ಳಿ ಕುಸುರಿ ಕೆಲಸಗಳನ್ನು ಕಲಿತು ಮುಂದೆ 2004 ನವೆಂಬರ್ ನಲ್ಲಿ ಸ್ವಂತ ಉದ್ಯಮವನ್ನು ಆರಂಭಿಸಲು ಯೋಚಿಸಿ ಸಣ್ಣಮಟ್ಟಿನಲ್ಲಿ ಆರಂಭಿಸಿಯೇ ಬಿಟ್ಟರು. ಮುಂದೆ ಬೆಳೆಯುತ್ತಾ ಸುತ್ತಮುತ್ತ ಪರಿಸರದಲ್ಲಿ ಉಡುಪಿಯಿಂದ ಕೆಲಸಗಳನ್ನು ತರಿಸಿ ಮಾಡಿಕೊಡುತ್ತಿದ್ದರು. ಅನುಭವ ಮತ್ತು ಕೆಲಸಗಳನ್ನು ಹುಡುಕಿಕೊಂಡು ಇವರ ಬಳಿ ಅನೇಕರು ಬಂದು ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದರು. ಹೀಗೆ ಬೆಳೆಯುತ್ತಾ ಸಣ್ಣ ಕೆಲಸದಿಂದ ದೊಡ್ಡ ಕೆಲಸಗಳತ್ತ ಹೋಗುವಂತಾಯಿತು. ಪರಿಣಾಮ ಈಗಾಗಲೇ ಬೆಳ್ಳಿಯ ರಥಗಳನ್ನು ಮಾಡಿಸಿ ಸುವರ್ಣ ಲೇಪನದ ರಥವನ್ನು ಇತ್ತೀಚೆಗೆ ಶೃಂಗೇರಿ ಮಠದ ಬೆಂಗಳೂರು ಶಾಖೆ, ಶಂಕರ ಮಠಕ್ಕೆ ಮಾಡಿ ಕೊಟ್ಟಿರುತ್ತಾರೆ. ಪುಣ್ಯಕ್ಷೇತ್ರ ಕಾಶಿಯ ಅನ್ನಪೂರ್ಣೇಶ್ವರಿ ವಿಮಾನ ಗೋಪುರದ ಚಿನ್ನದ ಕವಚ ಮಾಡಿಕೊಟ್ಟಿರುತ್ತಾರೆ. ಇವರ ಬಳಿ 22 ನುರಿತ ಕೆಲಸಗಾರರು ಇವರಿಗೆ ಸಹಕರಿಸುತ್ತಿದ್ದಾರೆ. ಮನೆ ಪರಿಸರ ಸುತ್ತಮುತ್ತ ಸಂಬಂಧಿಗಳು ಗೆಳೆಯರು ಬಳಗ ಹೀಗೆ ಎಲ್ಲರ ಸಹಕಾರದಿಂದ ತಾನು ಮುಂದೆ ಬಂದಿದ್ದೇನೆ ಎಂದು ನೆನಪಿಸಿಕೊಳ್ಳುತ್ತಾರೆ. ತಾನು ಬೆಳೆಯುದರೊಂದಿಗೆ ಸಮಾಜಮುಖಿಯಾಗಿ ಬೆಳೆಯಬೇಕೆಂಬ ಹಂಬಲ ಇವರದು ಅದಕ್ಕಾಗಿ ಯಾರು ಕೇಳಿದರು ರಕ್ತದಾನಕ್ಕಾಗಿ ಮುಂದೆ ಬರುತ್ತಾರೆ. ಬಡವರಿಗೆ ಮನೆ ಕಟ್ಟುವುದಕ್ಕೆ ವಿದ್ಯಾಭ್ಯಾಸಕ್ಕೆ ಮದುವೆ ಹೀಗೆ ಯಾಚಿಸಿ ಬಂದವರಿಗೆ ಇಲ್ಲವೆಂದು ಹೇಳದೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಶ್ರೀ ಶಶಿಧರ ವೇಳನ್ಕರ್ ಮತ್ತು ಅವರ ತಮ್ಮ ಶಶಿಕಾಂತ್ ವೇಳನ್ಕರ್ ಇಬ್ಬರು ಸೇರಿ ಕ್ಯಾನ್ಸರ್ ಪೇಡಿತರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಇವರ ಈ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತವರು ತಾಯಿ ತಂದೆ ಶ್ರೀಮತಿ ಶಾಲಿನಿ ಮತ್ತು ಶ್ರೀ ಶಂಕರ ವೇಳನ್ಕರ್. ಮಾಳದ ಪರಿಸರದಲ್ಲಿ ಹಲವಾರು ಜನ ಬೆಳ್ಳಿ ಕೆಲಸ ಮಾಡುತ್ತಿದ್ದರು ಇದೀಗ ಮುಂಚೂಣಿಯಲ್ಲಿ ಹೆಚ್ಚಿನ ಕೆಲಸಗಾರರನ್ನು ಹೊಂದಿರುವ ಓರ್ವ ಬೆಳ್ಳಿ ಕುಸುರಿ ಕೆಲಸಗಾರ ಎಂದು ಖ್ಯಾತಿ ಇವರಿಗಿದೆ. ಹೇಗೂ ಇರಲಿ, ಇವರ ಉಜ್ವಲ ಭವಿಷ್ಯ ಉತ್ತರೋತ್ತರವಾಗಿ ಅಭಿವೃದ್ಧಿ ಆಗಲಿ ಎನ್ನುವ ಹಾರೈಕೆಯೊಂದಿಗೆ...