У нас вы можете посмотреть бесплатно ಗಾನ ರೂಪದ ಶಿಲುಬೆ ಹಾದಿ | Way Of The Cross Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗಾನ ರೂಪದ ಶಿಲುಬೆ ಹಾದಿ (ಶಿಲುಬೆ ಹಾದಿಯ 14 ಸ್ಥಳಗಳ ಗೀತೆಗಳು) ಪ್ರಭು ಯೇಸುವಿನ ಪಾಡು ಮರಣದ ಹೃದಯ ಸ್ಪರ್ಶಿ ಗೀತೆಗಳು ಆಲಿಸಿರಿ ... ಧ್ಯಾನಿಸಿರಿ .. Album : GOLGOTHA BETTADINDA Kannada Lyrics : Bro Dennys George Sung by : Lijo Jose 🆂🅾🅽🅶 🅻🆈🆁🅸🅲🆂 ಪ್ರಾರಂಭ ಗೀತೆ ಯೇಸುವೇ ಶಿಲುಬೆಹೊತ್ತು ನಡೆದ ನಿಮ್ಮ ಅಂತ್ಯ ಪಯಣದಲಿ ಕನ್ಯೆ ಮೇರಿ ತಾಯಿಯೊಂದಿಗೆ ಹಿಂಬಾಲಿಸುತ್ತೇವೆ ಸ್ವಾಮಿ ನಿಮ್ಮನ್ನು ನಾವು ಸ್ವರ್ಗದ ಈ ಮಾರ್ಗದಲಿ ನೀ ಸುರಿದ ರಕ್ತ ರತ್ನಗಳ ಶೇಖರಿಸ ನೀ ಹರಸು ಕಾಣಿಕೆಯಾಗಿ ಅವನ್ನು ಅರ್ಪಿಪೆನಯ್ಯ 1 ಪಿಲಾತನು ಅನ್ಯಾಯದಿ ಯೇಸುವ ಕೊಲ್ಲುವ ತೀರ್ಪಿತ್ತನು ಘೋರವಾದ ನಮ್ಮ ಪಾಪಗಳೇ ಇದಕ್ಕೆ ಕಾರಣವೆಂದು ಬಲ್ಲೆವು ನಾವು ನ್ಯಾಯಧೀಶರಂತೆ ನೀವು ತೀರ್ಪೆಮಗೆ ನೀಡೊ ದಿನ ನೀತಿಯಂತೆ ಮಾಡಬೇಡಿ ಕರುಣೆಯಿಂದ ಎಮ್ಮನು ಕಾಪಾಡಯ್ಯ 2 ಭಾರವಾದ ಶಿಲುಬೆಯನ್ನು ಯೂಹೂದ್ಯರು ನಿಮಗೆ ಹೊರಿಸಿದರು ಸೋದರರೇ ಈ ಶಿಲುಬೆ ಮರ ನಮ್ಮ ಘೋರ ಪಾಪದ ಭಾರವಲ್ಲವೇ ಪ್ರಭುವೇ ಈ ಜೀವನದ ಕಷ್ಟಗಳೆಂಬ ಶಿಲುಬೆಗಳ ಆನಂದದಿ ಸ್ವೀಕರಿಸಿ ತಾಳಿಕೊಳ್ಳಲು ಎಮಗೆ ಶಕ್ತಿ ನೀಡಿರಿ 3 ಭಾರದಿಂದ ಬಳಲಿ ಯೇಸು ಧರೆಗೆಡವಿ ಬಿದ್ದರಯ್ಯೋ ಸೋದರರೇ ನಾವು ಮೊದಲಸಲ ಪಾಪದಲ್ಲಿ ಬಿದ್ದದ್ದೇ ಇದಕ್ಕೆ ಕಾರಣ ಕರ್ತರೇ ನಿಮ್ಮ ಆಜ್ಞೆಗಳ ಉಲ್ಲಂಘನೆ ಮಾಡಿ ಪಾಪದಲಿ ಬೀಳದಂತೆ ನಮ್ಮ ಲೋಕವಾಸ ಸ್ವರ್ಗವಾಸದಂತಾಗಲು ಕರುಣಿಸಿರಿ 4 ಮಾರ್ಗ ಮಧ್ಯೆ ದೇವಮಾತೆ ಮಗನ ಕಂಡು ಮರುಗಿದಳೂ ತಾಯ ಮನ ಮಿಡಿಯಿತ್ತು ಮಗನನ್ನು ಕಣ್ಣೀರಿಟ್ಟು ನೋಡುತ್ತಾಳಮ್ಮ ರೂಪವಂತ ಮಗನ ಮುಖ ವಿರೂಪವಾಗಿ ಇಗೋ ಕಂಡಳಮ್ಮ ದೇವಮಾತೆ ನಿಮ್ಮ ದುಃಖಕ್ಕೆ ನೀಚರಾದ ನಾವೇ ಕಾರಣ ಮನ್ನಿಸಿರೆಮ್ಮ 5 ಬಳಲಿಹೋದ ಯೇಸುವನ್ನು ಸಜೀವವಾಗಿ ಶಿಲುಬೆಮೇಲೆ ಜಡಿಯಲೆಂಬ ಉದ್ದೇಶದಿ ಶಿಲುಬೆಯವರು ಹೊರಿಸಿದರು ಸಿಮೋನನಿಗೆ ಜೀವನದ ಈ ಶಿಲುಬೆಹೊತ್ತು ಸಿಮೋನನಂತೆ ನಿಮ್ಮ ಹಿಂದೆ ನಾವೆಲ್ಲರೂ ಬರುವೆವಯ್ಯ ಕರುಣೆಯಿಂದ ನಮ್ಮನ್ನು ಧನ್ಯರಾಗಿಸು 6 ಸ್ವರ್ಗದ ಕಾಂತಿಯಿಂದ ಅರಳಿದಂಥ ಸ್ವಾಮಿ ಮುಖ ಬಳಲಿದಾಗ ವೆರೋನಿಕಮ್ಮ ಭಕ್ತಿಯಿಂದೊರೆಸಿದಳು ಶ್ರೀಯೇಸು ಮುಖ ಪಾಪದಿಂದಾ ಬಳಲಿ ಹೋದ ನಮ್ಮಯ ಆತ್ಮ ಶರೀರಗಳ ಶುದ್ಧೀಕರಿಸಿ ನಿಮ್ಮ ಮುಖದ ಛಾಯೆಯನ್ನು ಮುದ್ರಿಸಿ ಬೆಳಗಿಸಿರೆಮ್ಮ 7 ಮತ್ತೊಮ್ಮೆ ಶಿಲುಬೆಯಡಿ ಮೊಕ್ಕಡೆಯಾಗೇಸು ಬಿದ್ದರಯ್ಯೋ ಚಂದವಾದ ನಿಮ್ಮ ಕೆನ್ನೆಗಳು ಕೈಕಾಲುಗಳು ಕಲ್ಲಿಗೆ ಜಜ್ಜಿ ರಕ್ತ ಹರಿಯಿತ್ತು ಯೇಸುವೇ ಪುನಃ ನಾವು ಬಿದ್ದೆವು ಪಾಪದ ದೋಷದಲಿ ನೀವು ಬೀಳಲು ಅದುವೇ ಕಾರಣವೆಂದು ಬಲ್ಲೆವು ನಾವು ಕರವ ಚಾಚಿ ರಕ್ಷಿಸೆಮ್ಮನು 8 ಯೇಸುವಿನ ಯಾತನೆಯ ಕಂಡಂತಾ ಭಕ್ತ ನಾರಿಯರು ಎದೆಬಡಿದು ಅಳುತಿರಲು ಯೇಸು ಸ್ವಾಮಿ ಅವರನ್ನು ಸಂತೈಸಿದರು ಜೆರುಸಲೇಂ ಕುವರಿಯರೇ ನನಗಾಗಿ ನೀವು ಅಳಬೇಡಿರಿ ನಿಮಗಾಗಿ ನಿಮ್ಮ ಮಕ್ಕಳಿಗಾಗಿ ಕಣ್ಣೀರಿಟ್ಟು ರೋಧಿಸಿರಿ ಎಂದರು ಯೇಸು 9 ಬಿದ್ದರೇಸು ಮೂರನೇಸಲ ಅಪ್ಪಳಿಸಿ ಧರೆಗೆ ಮುಖವ ನೀಚರು ದುರುಳರಯ್ಯೋ ಕಾಲಿನಿಂದ ಒದ್ದರೆಳೆದಾಡಿದರು ಕೆಸರಿಗೆ ಬಿದ್ದಂತಾ ಕೆಂಗುಲಾಬಿಯಂತೆ ಬಳಲಿ ಬಿದ್ದರೆನ್ನ ಸ್ವಾಮಿ ಯೇಸು ಪಾಪವೆಂಬ ಕೆಸರಿನಿಂದ ರಕ್ಷಿಸೆಮ್ಮನು ಪಾತಾಳದ ನಿತ್ಯಾಗ್ನಿಯಿಂದ 10 ಕುರಿಮರಿಯ ಚರ್ಮವನು ತೋಳಗಳು ಕಚ್ಚಿ ಸೀಳುವಂತೆ ರಕ್ತದಿಂದ ನಿಮ್ಮ ದೇಹಕ್ಕೆ ಅಂಟಿಕೊಂಡ ವಸ್ತ್ರವನ್ನು ಸುಲಿಯುತ್ತಾರೆ ಜ್ಞಾನಸ್ನಾನ ದಿನದಂದು ನಮಗೆ ನೀವಿತ್ತ ಶ್ವೇತವಸ್ತ್ರ ದೇವೇಚ್ಚೆಯ ಶುಭ್ರವಸ್ತ್ರ ಮಲೀನವಾಗದೆ ಕಾಪಾಡಲು ಕರುಣಿಸೆನ್ನ 11 ಯಹೂದ್ಯರು ಶಿಲುಬೆಮೇಲೆ ಮಲಗಿಸಿ ನಿಮ್ಮ ಕೈಕಾಲುಗಳಿಗೆ ಮೊಳೆಗಳಿಂದಾ ಜಡಿದರಯ್ಯೋ ಪ್ರಾಣವೇದನೆಯಿಂದೇಸು ನರಳಿದರು ಮೊಳೆಗಳಿಂದ ಮಾಂಸಸೀಳಿತು ನೆತ್ತರು ಚಿಮ್ಮಿ ಹರಿಯಿತಯ್ಯೋ ಘೋರವಾದ ನಿಮ್ಮೀ ಯಾತನೆಗೆ ಕ್ರೂರಿಗಳು ನಾವೇ ಕಾರಣ ಕ್ಷಮಿಸೆಮ್ಮನು 12 ಶಿಲುಬೆಮೇಲೆ ತೂಗಾಡುತ್ತಾ ನಗ್ನರಾಗಿ ಯೇಸು ಪ್ರಾಣಬಿಟ್ಟರು ಫರಿಸಾಯರು ಧರ್ಮಶಾಸ್ತ್ರಿಗಳು ಶಿಲುಬೆ ಬುಡದಿ ಆನಂದದಿ ನಲಿದಾಡಿದರು ದೇವಮಾತೆ ಯೋವಾನ್ನರು ಮಗ್ದಲದ ಮರಿಯಮ್ಮನೊಂದಿಗೆ ಶಿಲುಬೆ ಬಳಿ ನಿಲ್ಲೋಣ ಬನ್ನಿ ಯೇಸು ರಕ್ತದಿ ತೊಳೆದು ಶುದ್ದರಾಗೋಣ 13 ಕೆಂದಾವರೆ ಪುಷ್ಪವೊಂದು ಬಿಳಿ ತಾವರೆ ಹೂವಲ್ಲಿಟ್ಟ ಹಾಗೆ ಮುದುಡಿದಂಥ ಸುತನದೇಹ ತಾಯಿ ತನ್ನ ಮಡಿಲಲ್ಲಿಟ್ಟು ಮುತ್ತಿಡುತ್ತಾಳೆ ಅಲಗೊಂದು ತಿವಿಯಿತ್ತು ಹೇಳಲಾರದ ನೋವು ಹೃದಯದೊಳು ದೇವಮಾತೆ ನಿಮ್ಮ ವ್ಯಥೆಗೆ ಕಾರಣರು ನಾವಮ್ಮ ಪ್ರಾರ್ಥಿಸೆಮಗೆ 14 ಯೇಸುವಿನ ಪೂಜ್ಯದೇಹ ಅಂತ್ಯ ಸಂಸ್ಕಾರವ ಮಾಡಿದರು ಸೋದರರೇ ನಾವು ಪಾಪವೆಂಬ ಪಾತಾಳಾಕ್ಕೇ ಬಿದ್ದದ್ದೇ ಇದ್ದಕ್ಕೇ ಕಾರಣ ಕರಮುಗಿದು ನಿಂತಿಹೆವು ಯೇಸುವೇ ನಿಮ್ಮ ಸಮಾಧಿ ಮುಂದೆ ಮರಣದೊಳೆಮ್ಮಯ ಆತ್ಮವನು ಸ್ವೀಕರಿಸಿ ನಿಮ್ಮಯ ಹೃದಯದೊಳು ಮುಕ್ತಾಯ ಗೀತೆ ಯೇಸುವಿಗೆ ಪ್ರಿಯವಾಗುವಂತೆ ದೀನವಾದ ನಮ್ಮೀ ಪ್ರಾರ್ಥನೆಯ ತಪ್ಪುಗಳನ್ನೆಲ್ಲ ನೀವು ಪರಿಹರಿಸಿ ಮಾತೇ ನಿಮ್ಮ ಪುತ್ರನಿಗೆ ಅರ್ಪಿಸಿರಿ ಪಿತ ದೇವರೇ ಯೇಸು ಸ್ವಾಮಿ ಶಿಲುಬೆಯಿಂದ ಸ್ವರ್ಗಕ್ಕೇರಿದಂತೆ ಶಿಲುಬೆಹಾದಿಯ ನಮ್ಮೀ ಪ್ರಾರ್ಥನೆಯಿಂದ ಸ್ವರ್ಗ ಸೇರೋ ಕೃಪೆ ಎಮಗೆ ಕರುಣಿಸಿರಿ