У нас вы можете посмотреть бесплатно ಸಾಗರ-ಕಂಟೈನರ್ ಅಪಘಾತ,ಚಾಲಕನನ್ನು ಹೆದರಿಸಿ ಬೆದರಿಸಿದ ಕಳ್ಳರು. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಂಟೈನರ್ ಅಪಘಾತ,ಚಾಲಕನಿಗೆ ಹೆದರಿಸಿ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ರಾಷ್ಟ್ರೀಯ ಹೆದ್ದಾರಿ ಐಗಿನಬೈಲ್ ಸಮೀಪ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಉರುಳಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಚಾಲಕನಿಗೆ ಯಾವುದೇ ಹೊಡೆತ ಬಿದ್ದಿಲ್ಲ. ರಾತ್ರಿ ಅಪಘಾತ ಸಂಭವಿಸಿದಾಗ ಗ್ರಾಮಸ್ಥರು ಸ್ಥಳಕ್ಕೆ ಬಂದು ಚಾಲಕನಿಗೆ ಆರೈಕೆ ಮಾಡಿ, ಬೆಳಿಗ್ಗೆ ಲಾರಿ ತೆಗೆಯಲು ಸಹಕಾರ ನೀಡುವುದಾಗಿ ತಿಳಿಸಿ ಹೋಗಿದ್ದಾರೆ. ಚಾಲಕ ಲಾರಿಯಲ್ಲಿಯೆ ಮಲಗಿ ಕೊಂಡಿದ್ದಾರೆ. ತಡರಾತ್ರಿ ಯಾರೋ ಅಪರಿಚಿತರು ಸ್ಥಳಕ್ಕೆ ಬಂದು ಚಾಲಕ ಸೋಮು ಎಂಬುವವರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕಂಟೈನರ್ ಲಾಕ್ ಒಡೆದು ಒಳಗೆ ಹುಡುಕಾಡಿದ್ದಾರೆ. ಕಂಟೈನರ್ ಒಳಗೆ ತೆಂಗಿನಚಿಪ್ಪು ಇದೆ ಎಂದು ಹೇಳಿದಾಗ ಹಲ್ಲೆ ನಡೆಸಿದವರು ವಾಪಾಸ್ ಹೋಗಿದ್ದಾರೆ ಎಂದು ಚಾಲಕ ಸೋಮು ಮತ್ತು ಮಾಲೀಕ ವಿನೋದ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾರು ಇದೆ ಎನ್ನುವ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ. ಕಾರು ಇದ್ದವರಿಗೂ ಬಿಪಿಎಲ್ ಕಾರ್ಡ್ ಕೊಡಲು ಮುಖ್ಯಮಂತ್ರಿಗಳಿಗೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಿದ್ದಾರೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು. ಸಾಗರದ ಶ್ರೀನಗರದಲ್ಲಿ ಭಾನುವಾರ ಬಿಜೆಪಿ ನಗರ ಘಟಕದ ವತಿಯಿಂದ 10ನೇ ವಾರ್ಡ್ ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್, ಕಾರ್ಮಿಕ ಕಾರ್ಡ್, ಈ-ಶ್ರಮ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೋಂದಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ನೊಂದಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಎಲ್ಲರ ಮನೆಯಲ್ಲೂ ಒಂದು ಕಾರು ಇರಿಸಿಕೊಂಡಿರುತ್ತಾರೆ. ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಎನ್ನುವ ನಿಯಮವನ್ನು ತೆಗೆದು ಹಾಕಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸೂಕ್ತವಾಗಿ ಸ್ಪಂದಿಸಿ, ನಿಯಮಕ್ಕೆ ತಿದ್ದುಪಡಿ ಮಾಡಲು ತಿಳಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಬಳಿ ಕಾರು ಇದೆ ಬಿಪಿಎಲ್ ಕಾರ್ಡ್ ನಮಗೆ ಸಿಗುವುದಿಲ್ಲ ಎನ್ನುವ ಭಯ ಬೇಡ ಎಂದು ಹೇಳಿದರು. ನಗರ ಬಿಜೆಪಿ ಅಧ್ಯಕ್ಷ ಹಾಗೂ ಸ್ಥಳೀಯ ನಗರಸಭೆ ಸದಸ್ಯ ಗಣೇಶಪ್ರಸಾದ್ ಹಾಜರಿದ್ದರು.