У нас вы можете посмотреть бесплатно ನಾಲ್ವರು ಅನಾಥ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ| PLAY NOW DAILY или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾಲ್ವರು ಅನಾಥ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ. ಕಾಸರಗೋಡು: ನಾಲ್ವರು ಅನಾಥರಾದ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ ನಡೆಯಿತು. ಇದು ಎಲ್ಲರಲ್ಲೂ ಬಹಳ ವಿಶೇಷತೆಯನ್ನು ಉಂಟುಮಾಡಿತು. ಹೌದು ಇದು ನಡೆದಿರುವುದು ಕಾಸರಗೋಡಿನ ಪರವನಡುಕ ಸರಕಾರಿ ಮಹಿಳಾ ಮಂದಿರದಲ್ಲಿ. ಸುಮಾರು ಏಳು ವರ್ಷಗಳಿಂದ ಅನಾಥ ಮಂದಿರದಲ್ಲಿದ್ದ ನಾಲ್ವರು ಯುವತಿಯರಾದ ಉಷಾ, ಸಂಧ್ಯಾ, ಲೀಲಾವತಿ ಮತ್ತು ದಿವ್ಯ ಎಂಬವರ ವಿವಾಹವು ಬಹಳ ಅದ್ದೂರಿಯಾಗಿ ಸೋಮವಾರ ತಕ್ಲಾಯಿ ಪಂಚಜನ್ಯ ಆಡಿಟೋರಿಯಂನಲ್ಲಿ ಜಿಲ್ಲಾಧಿಕಾರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಸಾನಿಧ್ಯದಲ್ಲಿ ನಡೆಯಿತು. ವಿವಾಹದ ಖರ್ಚಿಗೆ ಸರಕಾರ ಒಂದು ಲಕ್ಷ ರೂ ನೀಡಿದ್ದು, ಹಾಗೂ ವಿವಾಹ ದ ಬಟ್ಟೆಬರೆಗಳನ್ನು ನಗರದ ಖಾಸಗಿ ವಸ್ತ್ರ ಮಳಿಗೆಯವರು ನೀಡಿದ್ದಾರೆ. ಸರಕಾರ ನೀಡಿದ ಒಂದು ಲಕ್ಷದಿಂದ ನಾಲ್ವರಿಗೂ ಚಿನ್ನಾಭರಣ ಖರೀದಿಸಲಾಯಿತು. ಮದುವೆ ಹಾಗೂ ಇತರ ವೆಚ್ಚಗಳಿಗಾಗಿ ಹಲವರು ಸಹಾಯ ನೀಡಿದ್ದು, ಕಾಸರಗೋಡು ಬ್ಲಾಕ್ ಪಂಚಾಯತ್ ಹಾಗೂ ಚೆಮ್ಮನಡ್ ಗ್ರಾಮ ಪಂಚಾಯತಿನ ಸಹಾಯ ಗಳೊಂದಿಗೆ ಮದುವೆ ಅದ್ದೂರಿಯಾಗಿ ನಡೆಯಿತು. ಹೆಣ್ಣು ನೋಡುದಕ್ಕಾಗಿ ಆಗಮಿಸಿದ ನಾಲ್ವರು ಯುವಕರು ಯುವತಿಯರನ್ನು ಇಷ್ಟಪಟ್ಟ ಬಳಿಕ ವಿವಾಹಕ್ಕಾಗಿ ಅರ್ಜಿ ಸಲ್ಲಿಸಿದರು. ಪರವ ನಡುಕದ ಮಹಿಳಾ ಮಂದಿರದ ಅಧಿಕಾರಿಗಳು ಅರ್ಜಿಯನ್ನು ಪರಿಗಣಿಸಿ ಕೋಜಿಕ್ಕೋಡ್ ವಲಯ ಕಚೇರಿಗೆ ಹಸ್ತಾಂತರಿಸಿದರು. ನಂತರ ವರನ ಕೆಲಸ ಸ್ವಭಾವ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಅನ್ವೇಷಣೆ ನಡೆಸಿ ವರದಿ ಸಲ್ಲಿಸಲಾಯಿತು. ಮುಂದೆ ಚಪ್ಪರದಲ್ಲಿ ನಾಲ್ವರು ಅನಾಥ ಯುವತಿಯರಿಗೆ ಮಾಂಗಲ್ಯ ಭಾಗ್ಯ ಲಭಿಸುವುದು ಬಹಳ ವಿಶೇಷತೆಯಾಗಿತ್ತು. ಪರವ ನಡುಕದ ಅನಾಥ ಮಹಿಳಾ ಮಂದಿರದ ನಾಲ್ವರಿಗೆ ಜೊತೆಯಾಗಿ ವಿವಾಹ ಮಾಡಿಕೊಡುವುದು ಇದೇ ಮೊದಲಾಗಿದೆ. ಸೋಮವಾರ ನಡೆದ ವಿವಾಹ ಸಮಾರಂಭಕ್ಕೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಉದುಮ ಶಾಸಕ ಕೆ ಕುಂಞ ರಾಮನ್ , ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಕುಂಞ ಹಾಗೂ ಹಲವು ವಲಯಗಳ ಗಣ್ಯರು ವಧು-ವರರಿಗೆ ಶುಭಹಾರೈಸಿದರು. #PLAYNOWDAILY #4GIRLSWEDDING #SANTHOSHRAIMULLERIA PLAY NOW DAILY email: [email protected] email: [email protected] Video By : PLAY NOW Background Voice Santhosh Rai Mulleria BGM : CRF BGM Whatsapp : +91 9809800092 Copy Right : PLAY NOW [email protected] [email protected] www.playnowdaily.com THANK YOU FOR WATCHING THIS VIDEO ♥️ COMMENT | LIKE | SUBSCRIBE | SHARE