У нас вы можете посмотреть бесплатно ಸರ್ಕಾರಿ ಶಾಲೆಗಾಗಿ 3 ದಿನ ಉಪವಾಸ ಸತ್ಯಾಗ್ರಹ..! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬೇಡಿಕೆ ಈಡೇರದಿದ್ದರೆ, ಜನವರಿ 26ರ ಗಣರಾಜ್ಯೋತ್ಸವದಂದು ಬಲಗೈಲಿ ರಾಷ್ಟ್ರಧ್ವಜ ಎಡಗೈಯಲ್ಲಿ ಕಪ್ಪು ಬಾವುಟ ಹಿಡಿದು ರಾಜ್ಯದ 224 ತಾಲ್ಲೂಕು ಕೇಂದ್ರಗಳು 31 ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಂದಲೇ ಪ್ರತಿಭಟನೆ ನಡೆಸಲಾಗುವುದು. ರಾಷ್ಟ್ರಧ್ವಜ - ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮೇಲಿನ ಅಭಿಮಾನಕ್ಕೆ. ಕಪ್ಪು ಬಾವುಟ - ದೇಶಕ್ಕೆ ಸಂವಿಧಾನ ಬಂದು 75 ವರ್ಷವಾಗಿದ್ದರೂ ಮೂಲಭೂತ ಸೌಕರ್ಯ ಕೊಡದ ಸರ್ಕಾರದ ವಿರುದ್ಧ..! ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ..! ದಿನಾಂಕ: ಡಿಸೆಂಬರ್ 13, 14 & 15. ಸ್ಥಳ : ಸರ್ ಎಂ ವಿ ಪ್ರತಿಮೆ ಎದುರು, ಬೆಂಗಳೂರು-ಮೈಸೂರು ರಸ್ತೆ, ಮಂಡ್ಯ ನಗರ. ದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ್ಷವಾದರೂ, ಸಂವಿಧಾನದಲ್ಲಿ ಆರ್ಟಿಕಲ್ 21ಎ ಅಡಿಯಲ್ಲಿ ನೀಡಲಾಗಿರುವ ಗುಣಮಟ್ಟದ ಉಚಿತ ಶಿಕ್ಷಣ ಮೂಲಭೂತ ಹಕ್ಕುಗಳನ್ನು ಸರ್ಕಾರ ಜನಸಾಮಾನ್ಯರಿಗೆ ಕೊಟ್ಟೇ ಇಲ್ಲ. ಇವತ್ತಿನ ದಿನ ಬಹುತೇಕ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕುಟುಂಬದವರ ಹಿಡಿತದಲ್ಲಿದೆ. ಇದರ ಜೊತೆಗೆ "ಮ್ಯಾಗ್ನೆಟ್ ಶಾಲೆಗಳು ಹಾಗೂ ಕೆಪಿಎಸ್ ಶಾಲೆಗಳು ಎಂಬ ಹೆಸರಿನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ, ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ದಲ್ಲಾಳಿಯಾಗಿ ಸರ್ಕಾರ ಸಮಾಜ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯುವ ಸಮಯ ಬಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳೇ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ಆದ್ದರಿಂದ ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು, ಇವತ್ತಿನ ದಿನ ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಬಡವರ ಮಕ್ಕಳಿಗೂ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಮಂಡ್ಯ ಜಿಲ್ಲಾ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಂಘ ಮೂರು ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದೆ. ನಮ್ಮ ಪ್ರಮುಖ ಬೇಡಿಕೆಗಳು ಕೆಳಕಂಡಂತಿವೆ. 1. ರಾಜ್ಯದ 41,905 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ ಎಲ್ಕೆಜಿಯಿಂದ 5ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್ಸಿ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು. 2. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲೂ 6ನೇ ತರಗತಿಯಿಂದ 12ನೇ ತರಗತಿಯವರೆಗೆ ನವೋದಯ ಮಾದರಿ ಸಿಬಿಎಸ್ಸಿ ವಸತಿ ಶಾಲಾ ಶಿಕ್ಷಣ ನೀಡಬೇಕು. 3. ಕೊನೆಯದಾಗಿ ಸರ್ಕಾರಕ್ಕೆ ಯೋಗ್ಯತೆ ಇಲ್ಲವಾದರೆ ಶಿಕ್ಷಣ ಇಲಾಖೆಯ ಅನುದಾನವನ್ನು ನೇರವಾಗಿ ಪ್ರತಿಯೊಂದು ಸರ್ಕಾರಿ ಶಾಲೆಯ ಎಸ್’ಡಿಎಂಸಿ ಖಾತೆಗೆ ವರ್ಗಹಿಸಿದರೆ, ಹಾಲಿನ ಡೈರಿ ರೀತಿ, ಎಸ್’ಡಿಎಂಸಿಯವರೇ ಶಿಕ್ಷಕರ ನೇಮಕ ಮಾಡಿ, ಮೂಲಭೂತ ಸೌಕರ್ಯ ಒದಗಿಸಿ ಶಾಲೆಗಳನ್ನು ಮುನ್ನಡೆಸಿ, ಸರ್ಕಾರೀ ಶಾಲೆಗಳಿಗೆ ಬೀಗ ಹಾಕುವ ಕೆಲಸಕ್ಕೆ ಶಾಶ್ವತವಾಗಿ ತೆರೆ ಎಳೆಯಲಿದ್ದಾರೆ. ಕುಲಗೆಟ್ಟ ರಾಜ್ಯ ಶಿಕ್ಷಣ ವ್ಯವಸ್ಥೆಗೆ ಇತ್ತೀಚೆಗೆ ನಡೆದ ಒಂದು ಘನಘೋರ ಘಟನೆಯ ಉದಾಹರಣೆ ನೀಡುತ್ತೇವೆ. ಅದೇನೆಂದರೆ ಒಂದೆರಡು ತಿಂಗಳ ಹಿಂದೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿ ಗ್ರಾಮದಲ್ಲಿ ಶಿಕ್ಷಕನ ಎಂಜಲು ತಟ್ಟೆ ತೊಳೆಯಲು ಹೋಗಿ ಸರ್ಕಾರಿ ಶಾಲೆಯ ಮೂರನೇ ತರಗತಿ ಬಾಲಕ ಸುರೇಂದ್ರ ಸಂಪಿಗೆ ಬಿದ್ದು ಮೃತನಾಗಿದ್ದಾನೆ. ಬಾಲಕನ ಶವವನ್ನು ನೀರಿನ ಸಂಪಿನಿಂದ ಮೇಲೆತ್ತು ಮೃತ ದೇಹದಿಂದ ನೀರನ್ನು ತೆಗೆಯುತ್ತಿದ್ದಾಗ, ಬಾಲಕನ ಮುಖವನ್ನು ನೋಡದೇ ಶಾಲೆಯಿಂದ ಹೋದ ಶಿಕ್ಷಕ, ತದನಂತರ ಸುಮಾರು ಮೂವತ್ತು ಮಂದಿ ಶಿಕ್ಷಕರ ಸಂಘದವರನ್ನು ಆಸ್ಪತ್ರೆ ಹಾಗೂ ಪೋಲಿಸ್ ಸ್ಟೇಷನ್ ಹತ್ತಿರ ಕಳುಹಿಸಿ, ತನ್ನ ವಿರುದ್ಧ ಪ್ರಕರಣ ದಾಖಲಾಗದಂತೆ ಕ್ರೌರ್ಯ ಮೆರೆದಿದ್ದಾನೆ. ಇದು ಇವತ್ತಿನ ಸರ್ಕಾರೀ ಶಾಲೆಗಳ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕಾದರೆ, ಮೃತ ಬಾಲಕನ ಪೋಷಕರಿಗೆ ಸರ್ಕಾರ 50 ಲಕ್ಷ ಪರಿಹಾರ ಕೊಡಬೇಕು ಹಾಗೂ ಆ ಶಿಕ್ಷಕನನ್ನು ಸೇವೆಯಿಂದ ವಜಾ ಮಾಡಬೇಕು, ಇಲ್ಲವಾದರೆ ರಾಜ್ಯಾದ್ಯಂತ ಇದರ ವಿಷಯವಾಗಿ ಜಾಗೃತಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಎಚ್ಚರಿಸುತ್ತೇವೆ. ಕೊನೆಯದಾಗಿ, ರಾಜ್ಯದಲ್ಲಿ ಸುಮಾರು 40 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅವರ ಪೋಷಕರನ್ನೆಲ್ಲ ಸೇರಿಸಿದರೆ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಜನ ಒಂದೇ ಒಂದು ದಿನ ಬೀದಿಗಿಳಿದು ಹೋರಾಟ ಮಾಡಿದರೆ, ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಈಡೇರಿಸದೆ ಬೇರೆ ದಾರಿ ಇರುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮತ್ತು ಅವರ ಪೋಷಕರು ತಪ್ಪದೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಮೂರು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.