У нас вы можете посмотреть бесплатно ಗುರುಪೂರ್ಣಿಮೆಯಂದು ಗಿರಿಪ್ರದಕ್ಷಿಣ ಅರುಣಾಚಲಂ2025 I ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Guru Poornima Day for Tiruvannamalai, Tamil Nadu, India ತಿರುವಣ್ಣಾಮಲೈ ಭಾರತದ ಮತ್ತು ತಮಿಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ತಿರುವಣ್ಣಾಮಲೈ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ತಮಿಳು ನಾಡು ರಾಜ್ಯದ ಒಂದು ಜಿಲ್ಲೆ ತಿರುವಣ್ಣಾಮಲೈ. ಅಣ್ಣಾಮಲೈ ಗಿರಿ ಪ್ರದಕ್ಷಿಣೆ ಎಂದರೆ ಅರುಣಾಚಲ ಬೆಟ್ಟದ ಸುತ್ತಲೂ ನಡೆದು ಹೋಗುವ ಪವಿತ್ರ ಯಾತ್ರೆ. ಇದನ್ನು ಗಿರಿವಾಲಂ ಅಥವಾ ಗಿರಿ ಪ್ರದಕ್ಷಿಣೆ ಎಂದು ಕರೆಯಲಾಗುತ್ತದೆ. ಇದು ಶಿವನ ದೈವಿಕ ಉಪಸ್ಥಿತಿಯನ್ನು ಅನುಭವಿಸಲು ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಒಂದು ಮಾರ್ಗವಾಗಿದೆ. ಅರುಣಾಚಲ ಬೆಟ್ಟದ ಗಿರಿ ಪ್ರದಕ್ಷಿಣೆ ಪ್ರಯೋಜನಗಳು: ಇದು ಕೇವಲ ವಾಕಿಂಗ್ ಅಲ್ಲ, ಆದರೆ ಶಿವನ ದೈವಿಕ ಉಪಸ್ಥಿತಿಯೊಂದಿಗೆ ಸಂಪರ್ಕ ಸಾಧಿಸುವ ಒಂದು ಆಳವಾದ ಆಧ್ಯಾತ್ಮಿಕ ಪ್ರಯಾಣವಾಗಿದೆ. ಇದು ಪ್ರತಿಬಿಂಬ, ಭಕ್ತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಯಾತ್ರೆಯ ಉದ್ದ: ಗಿರಿ ಪ್ರದಕ್ಷಿಣೆ 14 ಕಿಲೋಮೀಟರ್ ದೂರವನ್ನು ಒಳಗೊಂಡಿದೆ, ಇದನ್ನು ನಡೆದು ಹೋಗಬೇಕು. ಪ್ರಮುಖ ದೇವಾಲಯಗಳು: ಮಾರ್ಗದಲ್ಲಿ ಹಲವಾರು ಲಿಂಗ ದೇವಾಲಯಗಳು ಮತ್ತು ಇತರ ಪವಿತ್ರ ಸ್ಥಳಗಳಿವೆ, ಅವುಗಳಲ್ಲಿ ಮುಖ್ಯವಾದವು ಆದಿ ಅಣ್ಣಾಮಲೈ ದೇವಸ್ಥಾನ ಮತ್ತು ಎಂಟು ಲಿಂಗಗಳು. ಯಾವಾಗ ಹೋಗುವುದು: ತಂಪಾದ ವಾತಾವರಣ ಮತ್ತು ಕಡಿಮೆ ಜನಸಂದಣಿಗಾಗಿ ಬೆಳಿಗ್ಗೆ ಬೇಗನೆ ಹೊರಡುವುದು ಒಳ್ಳೆಯದು. ಸಲಹೆಗಳು: ದಿನನಿತ್ಯ ವಾಕಿಂಗ್ ಅಭ್ಯಾಸವಿಲ್ಲದಿದ್ದರೆ, ದಾರಿಯುದ್ದಕ್ಕೂ ಆಯಾಸವಾಗಬಹುದು. ಆದ್ದರಿಂದ, ನಿಧಾನವಾಗಿ ನಡೆಯುವುದು ಮತ್ತು ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಭಕ್ತಿ: ಅನೇಕ ಜನರು ಗಿರಿ ಪ್ರದಕ್ಷಿಣೆ ಮಾಡುವಾಗ ಬರಿಗಾಲಿನಲ್ಲಿ ನಡೆಯುತ್ತಾರೆ, ಇದು ಅವರ ಭಕ್ತಿಯ ಸಂಕೇತವಾಗಿದೆ. ಪೂರ್ಣಗೊಳಿಸಲು ಸಮಯ: ಪೂರ್ಣ ಗಿರಿ ಪ್ರದಕ್ಷಿಣೆ ಸುಮಾರು 4 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರಮುಖ ದೇವಾಲಯಗಳು: ಮಾರ್ಗದಲ್ಲಿರುವ ಮುಖ್ಯ ಲಿಂಗ ದೇವಾಲಯಗಳಲ್ಲಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು, according to AbhiBus. ದಾರಿಯುದ್ದಕ್ಕೂ: ದಾರಿಯುದ್ದಕ್ಕೂ ಸಾಧುಗಳು ಮತ್ತು ಸನ್ಯಾಸಿಗಳನ್ನು ಕಾಣಬಹುದು. ಅವರೆಲ್ಲರೂ ಮಾರ್ಗದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಆಶೀರ್ವಾದಿಸುತ್ತಾರೆ ಅರುಣಾಚಲೇಶ್ವರ ದೇವಸ್ಥಾನ ಅರುಣಾಚಲೇಶ್ವರ ದೇವಸ್ಥಾನ ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿದೆ. ಹಿಂದೂ ಭಕ್ತಾಧಿಗಳಿಗೆ ಇದು ಪವಿತ್ರ ಕ್ಷೇತ್ರ. ಇಲ್ಲಿ ಶಿವಪೂಜೆ ಸಡೆಯುತ್ತಿದ್ದು ಶೈವರಿಗೆ ಹೆಚ್ಚಿನ ಮಹತ್ವವುಳ್ಳ ಕ್ಷೇತ್ರವಿದು. ದೇವಸ್ಥಾನದಲ್ಲಿ ಶಿವನನ್ನು ಪ್ರತಿನಿಧಿಸುವ ಲಿಂಗವಿದೆ. ಲಿಂಗದ ಜೊತೆಗೆ ಪಾರ್ವತಿ ದೇವಿಯ ಪೂಜೆಯೂ ನಡೆಯುತ್ತದೆ. ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ಅಗ್ನಿ ಪ್ರತಿಕವೆಂದು ಭಾವಿಸಲಾಗುತ್ತದೆ ಮತ್ತು ಶಿವನನ್ನು ಅಗ್ನಿ ಲಿಂಗವೆಂದು ಕರೆಯುತ್ತಾರೆ.ತಮಿಳು ಸಂತರು ನಾಯನ್ನರು ಬರೆದ ಶಾಸ್ತ್ರೋಕ್ತ ಪದ್ಯಗಳಲ್ಲಿ ದೇವಸ್ಥಾನದ ಉಲ್ಲೇಖವಿದೆ. ದೇಶದಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನ ಇದು. ಸುಮಾರು 10 ಹೆಕ್ಟೇರ್ ನಷ್ಟು ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅದ್ಭುತವಾದ ನಾಲ್ಕು ಗೋಪುರಗಳಿವೆ. ಪೂರ್ವದ ಗೋಪುರ 66 ಮೀಟರ್ ಎತ್ತರವಿದ್ದು ಭಾರತದ ಎತ್ತರದ ಗೋಪುರವೆಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಅಣ್ಣಮಲೈ ಬೆಟ್ಟ ಅಣ್ಣಮಲೈ ಬೆಟ್ಟ ಪಶ್ಚಿಮಘಟ್ಟದ ಭಾಗವಾಗಿದ್ದು ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗುತ್ತದೆ. ಅಣ್ಣೈ ಮತ್ತು ಮಲೈ ಎಂಬ ಎರಡು ಶಬ್ದಗಳಿಂದ ಅಣ್ಣಮಲೈ ಬೆಟ್ಟದ ಹೆಸರು ಹುಟ್ಟಿಕೊಂಡಿದೆ. ಅಣ್ಣಾಮಲೈ ಎಂಬುದರ ಮೂಲಾರ್ಥ ಆನೆಗಳ ಬೆಟ್ಟ ಎಂದು. ಅನಮುಡಿ ಸಮುದ್ರ ಮಟ್ಟದಿಂದ 264 ಮೀಟರ್ ಎತ್ತರದಲ್ಲಿದ್ದು ಅಣ್ಣಮಲೈ ಬೆಟ್ಟದಲ್ಲಿಯೇ ಎತ್ತರದ ಶೃಂಗ. ಅಷ್ಟ ಲಿಂಗ ಅಷ್ಟ ಲಿಂಗಂ ಅಥವಾ ಎಂಟು ಲಿಂಗಗಳು ಸ್ಥಾಪನೆಗೊಂಡಿರುವುದು ಅಣ್ಣಾಮಲೈ ಬೆಟ್ಟದ ತಳದಲ್ಲಿ. ತಿರುವಣ್ಣಾಮಲೈನಲ್ಲಿ ಧಾರ್ಮಿಕ ಮತ್ತು ಆದ್ಯಾತ್ಮಿಕ ಪ್ರತಿಧ್ವನಿಸಲು ಮುಖ್ಯ ಕಾರಣ ಇದೇ ಅಷ್ಟ ಲಿಂಗ. ಅಷ್ಟಲಿಂಗಗಳು ಸಂತರು ಮತ್ತು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಲಿಂಗಗಳಿಗೆ ಸಣ್ಣ ಮಂದಿರಗಳನ್ನು ನಿರ್ಮಿಸಲಾಗಿದೆ. 14 ಕಿಮೀ ವ್ಯಾಪ್ತಿಯಲ್ಲಿ ಅಷ್ಟಲಿಂಗ ಮಂದಿರಗಳಿವೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ವಾಯುಲಿಂಗ, ವರುಣಲಿಂಗ, ನರುತಿಲಿಂಗ, ಕುಬೇರಲಿಂಗ, ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ. ರಮಣ ಮಹರ್ಷಿ ಆಶ್ರಮ ಆಧುನಿಕ ತತ್ವಜ್ಞಾನಿಯಾಗಿರುವ ರಮಣಮಹರ್ಷಿಗಳು 1922 ರಿಂದ 1950 ರವರೆಗೆ ತಿರುವಣ್ಣಾಮಲೈನಲ್ಲಿ ನೆಲೆ ನಿಂತಿದ್ದರು. ತಿರುವಣ್ಣಾಮಲೈನ ಪಶ್ಚಿಮ ದಿಕ್ಕಿನಲ್ಲಿ ಅರುಣಾಚಲ ಬೆಟ್ಟದ ತಪ್ಪಲಿನಲ್ಲಿದೆ ಈ ರಮಣ ಆಶ್ರಮ. ಮಹರ್ಷಿ ರಮಣರು 1950ರಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದಾಗ ಅವರು ವಾಸಿಸಿದ್ದ ಸ್ಥಳದಲ್ಲಿ ಕೊನೆಯ ಕ್ಷಣಗಳನ್ನು ಮನತುಂಬಿಕೊಳ್ಳುವುದಕ್ಕೆ ಸಾವಿರಾರು ಭಕ್ತರು ಇಲ್ಲಿ ನೆರೆದಿದ್ದರು. ಅವರ ಸಾವಿನ ನಂತರವೂ ಬಹಳಷ್ಟು ಅನುಯಾಯಿಗಳು ಮತ್ತು ಕುತೂಹಲವುಳ್ಳ ಭಕ್ತರು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಮಹರ್ಷಿ ರಮಣರು ಕೊನೆಯುಸಿರೆಳೆದ ಸ್ಥಳದಲ್ಲಿ ಮಂದಿರವೊಂದನ್ನು ನಿರ್ಮಿಸಿ ಅವರಿಗೆ ಅರ್ಪಿಸಲಾಗಿದೆ. ಪ್ರತಿವರ್ಷ ಅವರ ಅನುಯಾಯಿಗಳು ಆಶ್ರಮಕ್ಕೆ ಭೆಟಿ ನೀಡಿ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಸಮಯ ಕಳೆಯುತ್ತಾರೆ. ಸ್ಕಂದಾಶ್ರಮ ಸ್ಕಂದಾಶ್ರಮವನ್ನು ಸ್ಥಾಪಿಸಿದವರು ಕಂದಸ್ವಾಮಿ. ಇವರೇ ಕಟ್ಟಡದ ಪ್ರಾಥಮಿಕ ಭಾಗವನ್ನು ನಿರ್ಮಿಸಲು ಮುಂದಾದವರು. ಸ್ಕಂದಾಶ್ರಮವೊಂದು ಗುಹೆಯಾಗಿದ್ದು ವಿರೂಪಾಕ್ಷ ಗುಹೆಗೆ ಹತ್ತಿರದಲ್ಲಿಯೇ ಇದೆ. ಆಶ್ರಮದಲ್ಲಿ ಸ್ವಚ್ಚ ನೀರಿನ ತೊರೆಯಿದ್ದು ಕುಡಿಯಲು ಯೋಗ್ಯವಾಗಿದೆ. ಗುಹೆಯಲ್ಲಿ ಎರಡು ಕೋಣೆಯನ್ನೂ ಕಟ್ಟಲಾಗಿದೆ. ಆಶ್ರಮದ ತಾರಸಿಯಲ್ಲಿ ನಿಸರ್ಗದ ಸುಂದರತೆಯನ್ನು ಸವಿಯಲು ಅವಕಾಶವಿದೆ. ಭಗವಾನ್ ತಮ್ಮ ತಾಯಿ ಅಲಗಮ್ಮ ಕೊನೆಯುಸಿರೆಳೆಯುವವರೆಗೆ 1922 ರವರೆಗೆ ಇದೇ ಆಶ್ರಮದಲ್ಲಿ ತಂಗಿದ್ದರು ಎಂದು ನಂಬಲಾಗುತ್ತದೆ. 1922 ರಲ್ಲಿ ರಮಣ ಮಹರ್ಷಿಗಳ ತಾಯಿಯ ಸಮಾಧಿಯೂ ಇಲ್ಲೇ ನಿರ್ಮಿಸಲಾಗಿದೆ. ಶೇಷಾದ್ರಿ ಸ್ವಾಮಿಗಳ ಆಶ್ರಮ ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಶೇಷಾದ್ರಿ ಸ್ವಾಮಿಗಳ ಆಶ್ರಮ. ರಮಣ ಆಶ್ರಮಕ್ಕೆ ಹೋಗುವ ದಾರಿಯಲ್ಲಿಯೇ ಇರುವ ಶೇಷಾದ್ರಿ ಸ್ವಾಮಿಗಳ ಆಶ್ರಮ ಕೇವಲ ಮೂರು ಕಟ್ಟಡಗಳ ಅಂತರದಲ್ಲಿದೆ. ಸ್ವಾಮಿಗಳ ಆಶ್ರಮದಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಇಲ್ಲಿನ ವಸತಿ ಬಾಡಿಗೆ ಅತ್ಯಂತ ಕಡಿಮೆ ಖರ್ಚಿನದ್ದು. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ಉಚಿತ ವಸತಿ ಸೌಲಭ್ಯವೂ ಇದೆ. ಈ ಆಶ್ರಮವನ್ನು ಕಟ್ಟಿದ್ದು ಶೇಷಾದ್ರಿ ಸ್ವಾಮಿಗಳು- ಇವರು ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದಿದ್ದಾರೆ. ದಕ್ಷಿಣ ಭಾರತದ ಜನ ಪೂಜಿಸುವ ಈ ಸಂತ ಭಾರತೀಯ ಸಂತರಲ್ಲಿಯೇ ಹೆಚ್ಚು ಮೆಚ್ಚತಕ್ಕ ಸಂತನೆಂದು ತಿಳಿಯಲಾಗುತ್ತದೆ. ತಿರುವಣ್ಣಾಲೈನಲ್ಲಿ ಜನಿಸಿದ ಇವರು ತಮ್ಮ ಜೀವಿತದ ಹೆಚ್ಚು ಸಮಯವನ್ನು ಜನರಿಗೆ ಆಧ್ಯಾತ್ಮ ಹಾಗು ಆರ್ಥಿಕ ಸಬಲತೆ ನೀಡುವುದರಲ್ಲಿಯೇ ವ್ಯಯಿಸಿದರು. ಈ ಕಾರಣಕ್ಕಾಗಿಯೇ ಹಲವರ ಪಾಲಿಗೆ ಈತ ದೇವತಾ ಪುರುಷ.