У нас вы можете посмотреть бесплатно ಆವೇಶಗೊಂಡ ಪಂಜುರ್ಲಿ ದೈವ ಕಡ್ಸಲೆ ಬೀಸಿದಾಗ ಏನಾಯಿತು? ಅತ್ತೂರು ಬೈಲ ಪಂಜುರ್ಲಿ ನೇಮ | ATHUR BAILA PANJURLI NEMA | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅತ್ತೂರು ಬೈಲ ಪಂಜುರ್ಲಿ ನೇಮ ಕಿಲೆಂಜೂರು,ಕಿನ್ನಿಗೋಳಿ "ಅತ್ತೂರು ಬೈಲಲ್ಲಿ ಪಂಜುರ್ಲಿ ದೈವ" ಕರಾವಳಿಯ ತುಳುವ ಜನರು ಆಧುನಿಕ ಕಾಲದಲ್ಲೂ ತಮ್ಮ ದಿನನಿತ್ಯದ ಬದುಕಿನಲ್ಲಿ ತಾವು ನಂಬಿದ ದೈವ ದೇವರುಗಳ ನಂಬಿಕೆ ಬಿಟ್ಟಿಲ್ಲ. ಇದಕ್ಕೆ ಪೂರಕವೆಂಬಂತೆ ಅನೇಕ ಕಡೆ ದೈವದ ಕಾರಣಿಕ ಆಗಿಂದಾಗ್ಗೆ ತೋರಿ ಬರುತ್ತಿರುತ್ತದೆ. ಅಂಥ ಒಂದು ಕ್ಷೇತ್ರದಲ್ಲಿ ಅತ್ತೂರು ಬೈಲು ಮಹಾಗಣಪತಿ ಮಂದಿರವೂ ಒಂದು. ಕಿನ್ನಿಗೋಳಿ ಸಮೀಪದ ಅತ್ತೂರು ಬೈಲು ಮಹಾಗಣಪತಿ ದೇವಳ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಿಸಿದ ಮಂದಿರ. ಅತ್ಯಂತ ಕಾರಣಿಕದ ಕ್ಷೇತ್ರವಾದ ಇಲ್ಲಿ ಬೈಲ ಪಂಜುರ್ಲಿ ದೈವ ನೆಲೆ ನಿಂತಿದ್ದು ಕಾರಣಿಕ ತೋರಿಸುತ್ತದೆ. ವರ್ಷಂಪ್ರತಿ ನಡೆಯುವ ನೇಮದಲ್ಲಿ ಮಹಾಗಣಪತಿ ಮಂದಿರದ ಗಡಿ ಪ್ರಧಾನರಾದ ಬೈಲು ಉಡುಪ ಮತ್ತು ಬೊಟ್ಟು ಉಡುಪರನ್ನು ತನ್ನ ಕಾರಣಿಕ ಶಕ್ತಿಯಿಂದ ಪ್ರಜ್ಞೆ ತಪ್ಪುವಂತೆ ಮಾಡುವುದು ಇಲ್ಲಿನ ವಿಶೇಷ. ಮೂಲ್ಕಿ ಒಂಬತ್ತು ಮಾಗಣೆಯಲ್ಲಿ ಅನೇಕ ಗುತ್ತು ಬರ್ಕೆಗಳಿದ್ದು ಅಲ್ಲಿ ಗಡಿ ಪ್ರಧಾನ ಸಾಮಾನ್ಯ. ಮೂಲ್ಕಿ ಒಂಬತ್ತು ಮಾಗಣೆಯ ಬ್ರಾಹ್ಮಣ ಸಮುದಾಯದಲ್ಲಿ ಎರಡೇ ಗಡಿಗಳಿದ್ದು ಅದು ಬೈಲು ಮತ್ತು ಬೊಟ್ಟು ಉಡುಪ ಗಡಿಗಳು. ಪ್ರಸ್ತುತ ಅತ್ತೂರು ಬೈಲು ಮಹಾಗಣಪತಿ ಮಂದಿರದ ವೆಂಕಟರಾಜ ಉಡುಪರು ಬೈಲು ಉಡುಪ ಗಡಿ ಪ್ರಧಾನರಾಗಿದ್ದರೆ, ಜಯರಾಮ ಉಡುಪರು ಬೊಟ್ಟು ಉಡುಪ ಗಡಿ ಪ್ರಧಾನರಾಗಿದ್ದಾರೆ. ನೇಮದ ಸಂದರ್ಭ ಅತ್ತೂರು ಬೈಲು ಚಾವಡಿಯಲ್ಲಿ ಬೈಲು ಉಡುಪರು ಮತ್ತು ಬೊಟ್ಟು ಉಡುಪರು ಕುಳಿತುಕೊಂಡಿರುತ್ತಾರೆ, ಚಾವಡಿಯ ಮುಂಭಾಗ ಕೊಡಿಯಡಿ ಇರುತ್ತದೆ, ಸಂಪ್ರದಾಯದಂತೆ ಪಂಜುರ್ಲಿ ದೈವದ ನೇಮ ಪ್ರಾರಂಭವಾಗುತ್ತದೆ, ಮೊದಲ ಹಂತದಲ್ಲಿ ಪಂಜುರ್ಲಿ ದೈವ ಮೊಗ (ಮುಖವಾಡ) ಧರಿಸಿ ನೇಮ ಪ್ರಾರಂಭವಾಗಿ ಮೊಗ ಇಳಿಸುವ ತನಕದ ಪ್ರಥಮ ಹಂತ ಮುಗಿಯುತ್ತದೆ, ಎರಡನೇ ಹಂತದಲ್ಲಿ ಪಂಜುರ್ಲಿ ದೈವದ ಆವೇಶ ಹೆಚ್ಚಾಗುತ್ತದೆ, ಈ ಸಂದರ್ಭ ಚಾವಡಿಯಲ್ಲಿ ಬೈಲು ಮತ್ತು ಬೊಟ್ಟು ಉಡುಪರು ಭಕ್ತಿ ಭಾವದಿಂದ ಮಂತ್ರ ಉಚ್ಚರಿಸುತ್ತ ಕುಳಿತಿರುತ್ತಾರೆ, ಪಂಜುರ್ಲಿ ದೈವಕ್ಕೆ ಅವೇಶ ಹೆಚ್ಚಾಗುತ್ತ ಮುಂದುವರಿದು ಉಡುಪರಿಬ್ಬರು ಕುಳಿತ ಚಾವಡಿ ಮುಂಭಾಗದ ತನ್ನ ಕೈಯಲ್ಲಿರುವ ಆಯುಧ(ಕಡ್ಸಲೆ) ಮುಂದೆ ಬೀಸುತ್ತದೆ. ಆಗ ಬೈಲು ಉಡುಪರು ಹಿಮ್ಮುಖವಾಗಿ ಬಿದ್ದು ಪ್ರಜ್ಞೆ ತಪ್ಪುತ್ತಾರೆ, ದೈವ ಕಲಾವಿದ ಇನ್ನೊಂದು ಬಾರಿ ಇದೇ ರೀತಿ ಪುನರಾವರ್ತಿಸುವಾಗ ಬೊಟ್ಟು ಉಡುಪರು ಇದೇ ರೀತಿ ಪ್ರಜ್ಞೆ ತಪ್ಪಿ ಬೀಳುತ್ತಾರೆ, ಸುಮಾರು 5 ನಿಮಿಷ ಪ್ರಜ್ಞೆ ತಪ್ಪಿರುತ್ತಾರೆ. ಅನಂತರ ಗುತ್ತಿನವರ ಕೋರಿಕೆಯಂತೆ ಪಂಜುರ್ಲಿ ದೈವ ಉಡುಪರಿಬ್ಬರನ್ನು ಯಥಾಸ್ಥಿತಿಗೆ ಬರುವಂತೆ ಮಾಡುತ್ತದೆ. (from fb ನಿಶಾಂತ್ ಕಿಲೆಂಜೂರು) #tulunad #viralvideo #kola #panjurlikola #panjurli #kanthara #kudla #guliga panjurli #travel #cultural #culture ©® [email protected]