У нас вы можете посмотреть бесплатно ದಿವ್ಯ ಸುತ || DIVYA SUTA || PROD: BARTHALOM BYRATHI или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
DIVYA SUTA / ದಿವ್ಯ ಸುತ PRODUCER: BARTHALOM BYRATHI ARRANGEMENTS: YELSTEN ROLAND MUSIC & LYRICS: FR KANTHRAJ JHANSI COORDINATION: BALARAJ SNEHAGAANA The album "Divya Suta" is a souvenir for the Silver Jubilee of New Byrathi Church building dedicated to "Christ the King". Special thanks to Rev. Fr. Balaraj and Rev. Fr. Michael, the parish priest of Byrathi for his good-will and for making things happen. DETAILS 00:00 ಬೆಳ್ಳಿಮುಗಿಲ ಬಾನಿಗೆ - Ajay Warrior, Anuradha Bhat & Chorus 05:59 ದಯೆ ತೋರಿ - Barthalom & Chorus 07:16 ಮಹಿಮೆ ಮಹಿಮೆ ಮಹೋನ್ನತಗೆ - Balaraj & & Chorus 11:26 ಬಾನಲಿ ಭುವಿಯಲಿ ಇರುಳಲಿ ನನ್ನಲಿ - Rajesh Krishnan & Chorus 18:33 ಅಲ್ಲೆಲೂಯ - ದೇವಾದಿದೇವನಿಗೆ - Ajay Warrior & Chorus 21:21 ಪಾವನ ಆತ್ಮರೇ ಪರಿಶುದ್ಧ ದೇವರೇ - Rajesh & Chorus 27:04 ದೀನಳ ಅರ್ಪಣೆಯು - Anuradha Bhat & Chorus 33:30 ಪರಿಶುದ್ಧ ಪರಿಶುದ್ಧ ಪರಿಶುದ್ಧರು - Chorus 34:48 ಈ ರೊಟ್ಟಿ ಭುಜಿಸಿ ಈ ಪಾನ ಕುಡಿದು - Chorus 35:38 ಲೋಕದ ಪಾಪಗಳನ್ನು ಪರಿಹರಿಸುವ - Yelsten & Chorus 36:58 ಅನುಗ್ರಹ ನೀ ನನ್ನ ಆಸರೆ ನೀ - Anuradha & Chorus 42:18 ನಾವಿಕನೇ ಪ್ರಿಯ ನಾವಿಕನೇ 47:38 ಯೇಸು ಬರುವರು ನಮ್ಮ ರಾಜ ಬರುವರು - Ajay Warrior & Chorus 51:27 ಧ್ವಜಾರೋಹಣ - ಸ್ವರ್ಗದ ಕಡೆಗೆ ಏರುತ್ತಿದೆ - Balaraj & Chorus THANK YOU Praying for you all... Please Like & Comment, Share and Subscribe. COPYRIGHTS: @SnehaGaanaYouTube Channel #FatherChasara #Snehagaana #FrKanthrajJhansi #LentenSongs #frchesara #FrKanthraj #KannadaHymns ಬೆಳ್ಳಿಮುಗಿಲ ಬಾನಿಗೆ ಹಕ್ಕಿ ಹಾರಿದೆ ನಾನು ನಿನ್ನ ಸನಿಹ ಸೇರಿಹೆ ಮೋಡ ಚೆಲ್ಲಿ ಮಳೆಹನಿ ತಿರೆಯನು ತಣಿಸಿದೆ ನಾನು ಇಂದು ಬಂದಿಹೆ ನಿನ್ನ ಪ್ರೇಮ ಧಾರೆಗಾಗಿ ನೀಡು ನಿನ್ನ ದಿವ್ಯ ಸಾಂತ್ವನ ಚೆಲುವ ನಿನ್ನ ವರದ ಸಿಂಚನ ಉದಯ ರವಿಗೆ ಕಾಯುತ್ತಿರುವ ಲತೆಗಳಂತೆಯೇ ನಿನ್ನ ಕರೆಯ ಇಂಚರಕ್ಕೆ ನಾನು ಕಾದಿಹೆ ರವಿಯ ಮೂಡಿಸು ಕನಸ ಕರಗಿಸು ನಿನ್ನ ಧ್ವನಿಯ ಕೇಳುವಂತ ಮನಸ ಕರುಣಿಸು ನಿನ್ನ ಪ್ರೇಮ ರೆಕ್ಕೆಯೆಡೆಗೆ ನಾನು ಸೇರುವೆ ಗಾಳಿಗೋಡಿ ಗಿರಿಯ ಕಲೆವ ಮೋಡದಂತೆಯೇ ವರದ ಮಳೆಯಲಿ ಜೇನ ಹೊಳೆಯಲಿ ನಿನ್ನ ಕಲೆತು ಬಾಳಲೆನ್ನ ಹೃದಯ ಅರಳಿಸು ದಯೆ ತೋರಿ ಪ್ರಭುವೇ ದಯೆ ತೋರಿ ಕ್ರಿಸ್ತರೇ ದಯೆ ತೋರಿ, ಕ್ರಿಸ್ತರೇ ದಯೆ ತೋರಿ ದಯೆ ತೋರಿ ಪ್ರಭುವೇ ದಯೆ ತೋರಿ ಮಹಿಮೆ ಮಹಿಮೆ ಮಹೋನ್ನತಗೆ ಶಾಂತಿ ಶಾಂತಿ ಸುಮನುಜಗೆ ಪ್ರಭುವೇ ಪಿತರೇ ಸ್ವರ್ಗದ ರಾಜರೇ ಸೃಷ್ಟಿಯ ಪಾಲಕರೇ ಹೊಗಳಿ ಸ್ತುತಿಸಿ ನಮಿಸುವೆವು ವಂದಿಸಿ ನಿಮಗೆ ಹಾಡ್ವೆವು ರಕ್ಷಣೆ ನೀಡಲು ಭುವಿಯಲಿ ಜನಿಸಿದ ಪ್ರಭುವೇ ಯೇಸುವೇ ಹೊಗಳಿ ಸ್ತುತಿಸಿ ನಮಿಸುವೆವು ವಂದಿಸಿ ನಿಮಗೆ ಹಾಡ್ವೆವು ತಂದೆಯ ಪುತ್ರರ ಪ್ರೀತಿಯ ರೂಪವೆ ಪಾವನ ಆತ್ಮರೇ ಹೊಗಳಿ ಸ್ತುತಿಸಿ ನಮಿಸುವೆವು ವಂದಿಸಿ ನಿಮಗೆ ಹಾಡ್ವೆವು ಬಾನಲಿ ಭುವಿಯಲಿ ಇರುಳಲಿ ನನ್ನಲಿ ಮೂಡಿದೆ ನಿನ್ನ ದನಿ ನೆನಪಲಿ ಮನಸಲಿ ಉಸಿರಲಿ ಬದುಕಲಿ ವಾಕ್ಯದ ನಿನ್ನ ಸವಿ ನೀನೇ ಚೇತನ ನೀನೇ ಚಿರಂತನ ಚೈತನ್ಯವಾಗಿಸು ನನ್ನ ಬಾಳಿನ ಓಟಕೆ ದಿನವು ನೀನೇ ಗೆಲುವು ನನ್ನ ನೆರವು ಎದುರಾಗಿ ನಿಲ್ಲುವರಾರು ನೀನೇ ಬಲವು ನನ್ನ ಪ್ರಭುವು ಸ್ಥಿರತೆಯ ರೂಪಿಸ ಬಾ ಗುರಿಯಲಿ ಸ್ವಷ್ಟತೆ ತಾ ಉಲ್ಲಾಸ ಉತ್ಸಾಹ ನನಗೆ ನಿನ್ನ ಬದುಕು ಸ್ಫೂರ್ತಿ ಬೆಳಕು ಮೂಡಿಸಿ ಮುಗುಳ್ನಗೆ ಮೊಗದಿ ನೀನು ಒಲಿದೆ ಬದುಕ ಬರೆದೆ ನನ್ನಯ ಸಾಂತ್ವನ ನೀ ನಿನ್ನಯ ಸಾಧನ ನಾ ಅಲ್ಲೆಲೂಯ ಅಲ್ಲೆಲೂಯ ದೇವಾದಿ ದೇವನಿಗೆ ರಾಜಾಧಿರಾಜನಿಗೆ ಅಲ್ಲೆಲೂಯ ಅಲ್ಲೆಲೂಯ ಅಲ್ಲೆಲೂಯ ಸಾರಿರಿ ಭಕ್ತರೇ ಮುಕ್ತಿಯ ಸಂದೇಶ ದಿವ್ಯ ಸಂದೇಶ ಪಾವನ ಆತ್ಮರೇ ಪರಿಶುದ್ಧ ದೇವರೇ ಸುರಿಸಿರಿ ನಿಮ್ಮ ವರಧಾರೆಯನ್ನ ಭುವಿಯನ್ನು ಬದುಕನ್ನು ಹಸನಾಗಿಸಿ ಅಂತರಂಗದ ಆರಾಧ್ಯನೇ ಆತ್ಮಸ್ವರೂಪಿ ಪರಮಾತ್ಮನೇ ಮನದಾಳದಿ ಮನೆಮಾಡಿರಿ ನಲ್ಮೆಯ ದಾತರೇ ಯೇಸು ನನ್ನ ಪ್ರಭುವೆಂದು ಸಾರಲು ಶಕ್ತಿಯ ದಯಪಾಲಿಸಿ ಕೃಪೆನೀಡಿರಿ ದಯಮಾಡಿರಿ ಸಾಂತ್ವನ ದಾತರೇ ದೀನಳ ಅರ್ಪಣೆಯು ನಿನ್ನ ಪಾದ ಕಮಲಕೆ ತಂದಿಹೆನು ಬಾಳಿನ ಹಣತೆಯಿದು ಗುರುವಾಗಿ ಬೆಳಗು ಜೀವವನು ಸ್ವೀಕರಿಸೋ ಪ್ರಭುವೇ ಸ್ವೀಕರಿಸೋ ಗುರುವೇ ನೀ ಮಾಡಿದ ಎಲ್ಲಾ ಉಪಕಾರಕ್ಕೆ ಏನನ್ನು ನಿನಗೆ ನಾ ನೀಡಲಿ ಈ ಜೀವದ ಓ ಜೀವಾತ್ಮನೇ ಧನ್ಯತೆ ಹೇಗೆ ಪ್ರಕಟಿಸಲಿ ನಿನ್ನ ಪೂಜೆಯಲ್ಲಿ ಪರಸೇವೆಯಲ್ಲಿ ಆಭಾರಿಯಾಗಿ ನಾ ಬಾಳುವೆ ಮನದಾಳದ ಈ ನವಭಾವನ ನಿನ್ನಿಂದ ಅರಳಿತು ಈ ಹೊಸತನ ಅನುಗಾಲ ಮಿಡಿದ ಮೃದು ಕಂಪನ ಆಂತರ‍್ಯದಲ್ಲಿಂದು ಅನುಭಾವನ ಈ ರೊಟ್ಟಿರಸದ ಪ್ರತಿರೂಪದಲ್ಲಿ ನನ್ನನ್ನೇ ನೀಡಿ ಋಣಿಯಾಗುವೆ ಪರಿಶುದ್ಧ ಪರಿಶುದ್ಧ ಪರಿಶುದ್ಧರು ಸೇನಾಧೀಶ್ವರ ದೇವರು ಹಾಡಿರಿ ಎಲ್ಲರು ಹೋಸಾನ್ನ ಪ್ರಭುವಿನ ನಾಮಕ್ಕೆ ಹೋಸಾನ್ನ ಪ್ರಭುವಿನ ನಾಮದಿ ಬರುವವರು ಲೋಕದ ರಕ್ಷಕ ಕ್ರಿಸ್ತರು ಹಾಡಿರಿ ಎಲ್ಲರು ಹೋಸಾನ್ನ ಪ್ರಭುವಿನ ನಾಮಕ್ಕೆ ಹೋಸಾನ್ನ ಹೋಸಾನ್ನ ೫ ಈ ರೊಟ್ಟಿ ಭುಜಿಸಿ ಈ ಪಾನ ಕುಡಿದು ಪ್ರಭು ಬರುವ ತನಕ ಮರಣವ ಸಾರುವೆವು ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ನಮಗೆ ದಯೆತೋರಿ ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ ಶಾಂತಿ ನೀಡೆಮಗೆ ಅನುಗ್ರಹ ನೀ ನನ್ನ ಆಸರೆ ನೀ ಕರುಣಾಳು ಕ್ರಿಸ್ತನೇ ನಿನ್ನನ್ನೇ ಬಯಸಿಹೆ ಕರುಣಾ ಮಳೆಯಾಗಿ ಜೀವ ಜಲವಾಗಿ ಹೊನಲಾಗಿ ಹರಿಯುತ ಬಾ ತಣಿಸಲು ತೃಷೆಯನು ನೀನಿಂದು ಬಾ ಆತ್ಮದಾಹವ ಇಂಗಿಸ ಬಾ ಅನುಗ್ರಹ ನೀ ಹುಡುಕಿ ನಿನ್ನನ್ನು ದಣಿದಿದೆ ಜೀವಾ ಬದುಕಲಿ ಬೇಸರ ಆಸೆಯ ತೀರಿಸೆನ್ನಯ ದಿವ್ಯ ಸಂತೃಪ್ತಿ ತುಂಬಲು ಬಾ ನನ್ನ ಮನದ ಗುಡಿಯಲಿ ನಿನ್ನ ಮಧುರ ಸನ್ನಿಧಿ ನೆಲೆಸಲಿ ಎಂದೆಂದಿಗೂ ಆವರಿಸು ನನ್ನ ಜೀವನ ಅನುಗ್ರಹ ನೀ ಸೊಗಸು ನಿನ್ನೊಡನೆ ಜೀವನ ಚಕ್ರ ಪ್ರತಿದಿನ ವಿಸ್ಮಯ ನಿನ್ನಯ ಸೂತ್ರದಿಂದಲೇ ನನ್ನ ಬದುಕಿಗೆ ನವಿರತೆ ತಾ ನನ್ನ ದಿನದ ಶ್ರಮದಲಿ ನಿನ್ನ ವರದ ಹೂಮಳೆ ಹನಿಸುತಲಿ ಕ್ಷಣಕ್ಷಣವೂ ಆವರಿಸು ನನ್ನ ಜೀವನ ಅನುಗ್ರಹ ನೀ ಯೇಸು ಬರುವರು ನಮ್ಮ ರಾಜ ಬರುವರು ಬಾನಿನಲ್ಲಿ ಕಹಳೆ ಮೊಳಗಿ ಮೋಡದಲ್ಲಿ ಮಿಂಚು ಮಿನುಗಿ ಭಕ್ತರ ಬಿನ್ನಹ ಕೇಳ ಬರುವರು ಧರ್ಮವ ಸ್ಥಾಪಿಸ ಮರಳಿ ಬರುವರು ಹಸಿದವಗೆ ಅನ್ನ ಉಣಿಸು ನೊಂದವನ ಕಣ್ಣು ಒರೆಸು ದೀನಜನರ ಬಂಧುವಾಗು ಬಂಧಿತರ ಭೇಟಿ ಮಾಡು ಯೇಸು ಬರುವ ಗಳಿಗೆ ತೀರ್ಪು ಕೊಡುವ ಕ್ಷಣಕೆ ಎಲ್ಲರಲ್ಲು ಯೇಸುವನ್ನು ನೋಡಲೆತ್ನಿಸು ಶತ್ರುಗಳ ಕ್ಷಮಿಸಿ ಬಿಡು ಪರರ ಸೇವೆಯನ್ನು ಮಾಡು ಗುಪ್ತವಾಗಿ ದಾನ ನೀಡು ದೀನನಂತೆ ನೀನು ಬಾಳು ಯೇಸು ನಿನ್ನ ಶ್ರಮಕೆ ನೀಡ್ವ ತಕ್ಕ ಕೊಡುಗೆ ದೇವರನ್ನು ಮೆಚ್ಚಿಸಲು ನೀನು ಯತ್ನಿಸು ಸ್ವರ್ಗದ ಕಡೆಗೆ ಏರುತ್ತಿದೆ ಪ್ರಾರ್ಥನೆ ಹೊತ್ತ ಬಾವುಟವು ಪರಮನ ಕೃಪೆಯ ಸುರಿಸುತ್ತಲಿ ತಣಿಸಿದೆ ಭಕ್ತರ ಮನಗಳನು ರಾಜರು ಯೇಸು ರಾಜರು ದೂತರ ಮೇಳದಿ ಬರುತ್ತಿಹರು ಮೇಘದ ಮರೆಯಿಂದಲೇ ಮರೆಯದೆ ಭಕ್ತರ ಮರಳಿಹರು ಮಾತೆಯು ಮೇರಿ ಮಾತೆಯು ದೂತನ ದನಿಗೆ ಶಿರ ಬಾಗಿ ಕ್ರಿಸ್ತರ ಯೇಸು ಕ್ರಿಸ್ತರ ಮಡಿಲಾಗಿ ಭುವಿಗೆ ತಂದಿಹರು ಸಂತರು ನಮ್ಮ ಸಂತರು ದೇವರ ನಂಬಿ ಬದುಕಿದರು ಕ್ರಿಸ್ತನ ಸಂದೇಶವ ಭುವಿಯಲ್ಲಿ ಬಾಳಿ ಜಯಿಸಿಹರು