У нас вы можете посмотреть бесплатно Gange bhaageerathi mangalaangi / ಗಂಗೆ ಭಾಗೀರಥಿ ಮಂಗಳಾಂಗಿ / ಹರಪನಹಳ್ಳಿ ಭೀಮವ್ವ ಅವರ ಕೃತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹರೇ ಶ್ರೀನಿವಾಸ🙏 ಗಂಗೆ ಭಾಗೀರಥಿ ಮಂಗಳಾಂಗಿ ಅಲಕನಂದಳೆ ನೀ ಮಹಾ ಸುಂದರಾಂಗಿ ll ಪ ll ಸಿಂಧು ರಾಜನ ರಾಣಿ ಸಿರಿ ಸಂಪತ್ತು ಕೊಟ್ಟು l ಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ ll ಅ. ಪ ll ಕಾಶಿಪಟ್ಟಣದಲ್ಲಿ ವಾಸವಾಗಿ l ಸರಸ್ವತಿಯ ಕೂಡಿ ನೀ ಸರಸವಾಗಿ l| ಸೋಸಿಲಿಂದ ಸೂರ್ಯ ಪುತ್ರಿ ಯಮುನೆಯ ಕೂಡಿ | ಉಲ್ಲಾಸ ದಿನ್ದಹರಿದೆ ವಾರಣಾ ಸಿಗ್ಹೋಗಿ ll 1 ll ಹಾಲಿನಂತೆ ಹರಿವೊ ಗಂಗೆ ನೀನು l ನೀಲದಂತಿದ್ದ ಯಮುನೆಯ ಕೂಡಿ ll ಲೀಲೆಯಿಂದಲಿ ಸರಸ್ವತಿಯನ್ನು ಕೂಡಿ l ಒಯ್ಯಾರದಿಂದಹರಿದೆ ಪ್ರಯಾಗದಲ್ಲಿ ll 2 ll ಭಗೀರಥನ ಹಿಂದೆ ನೀ ಬಂದೆ ಓಡಿ l ಸಗರನ ಸುತರ ಉದ್ದಾರ ಮಾಡಿ ll ಜಗವ ಪಾವನ ಮಾಡೋ ಜಾನ್ಹವಿಯೇ ನೀ l ಎನ್ನ ಮಗುವೆಂದು ಮುಂದಕ್ಕೆ ಕರಿಯೇ ತಾಯೆ ll 3 ll ಬಿಂದು ಮಾಧವ ವೇಣು ಮಾಧವ l ಆನಂದಿಂದ ಕಾಳ ಭೈರವ l ಚೆಂದದಿಂ ವಿಶ್ವನಾಥನಗುಡಿ ಮುಂದೆ l ಹೊಂದಿ ಹರಿದೆ ಹನುಮಂತನ ಘಾಟಿನಿಂದೆ ll 4 ll ದಡದಡನೆ ಬಂದು ದಡಗಳನೆ ಕೊರೆದು l ಪೊಡವಿಯ ಮೇಲೆ ಇಂಥ ಸಡಗರದಿ ಹರಿದು ಕಡಲಶಯನನ ಕಾಲುಂಗುಷ್ಠದ ಮಗಳೆ l ಕಡಲ ರಾಣಿಯೇ ಕೈಯ ಪಿಡಿಯೇ ಬೇಗ ll 5 ll ಮೊರದ ಬಾಗಿಣ ಕುಂಕುಮ ಅರಿಶಿನವು ಗಂಧ l ಪರಿಪರಿಯಲಿ ಪೂಜೆ ಗೊಂಬುವಿ ಛಂದl ಸ್ಥಿರವಾದ ಮುತೈದೆತನ ಜನುಮ ಜನುಮಕು | ವರವ ಕೊಟ್ಟು ವೈಕುಂಠವ ತೋರಿಸೆ ll 6 ll ಮದ್ಯಾನ್ಹದಲ್ಲಿ ಮಣಿಕರ್ಣಿಕೆಯ ಸ್ನಾನ l ಶುದ್ಧ ವಾದ ಪಂಚ ಗಂಗೆಯಲಿ l ಅದ್ದಿದ ದೇಹ ಪವಿತ್ರ ಮಾಡಿ l ಭವ ಸಮುದ್ರ ಧಾಟಿಸೆ ಭಾಗೀರಥಿ ll7ll ಎಷ್ಟು ಜನ್ಮದ ಪುಣ್ಯ ವೊದಗಿತಿಂದು l ಗಂಗೆ ಭೆಟ್ಟಿಯಾಗೋ ಪುಣ್ಯ ಬಂದಿತಿಂದು l ಚಕ್ರ ತೀರ್ಥದ ಸ್ನಾನ ಸಂಕಲ್ಪದ ಫಲ ಕೊಟ್ಟು l ರಕ್ಷಿಸೆನ್ನನು ತಾಯೇ ತರಂಗಿಣಿ ll 8 ll ಸಾಸಿರ ಮುಖದಿಂದ ಶರಧಿಯನು ಕೂಡಿ l ಹೋಗಿ ಬಾ ಊರಿಗೆ ಭಕ್ತಿಯ ನೀಡಿ l| ನೀನು ಭೀಮೇಶ ಕೃಷ್ಣನಲಿ ಹುಟ್ಟಿದ | ಪಾದವನ್ನು ತೊರೀ ಪೊರೆಯಬೇಕಮ್ಮ ll 9 ll