У нас вы можете посмотреть бесплатно ಹೂ ಪ್ರಸಾದ ಎಡಗಡೆ ಆದರೆ ..... ? What does it mean if a flower falls from the left side of God? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸುಮಾರು 430 ವರ್ಷಗಳ ಹಿಂದೆ ತಮಿಳುನಾಡಿನ ಭುವನಗಿರಿ ಎಂಬ ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಅವತಾರವನ್ನು ಮಾಡಿದರು. ಅನಂತರ ಇವರು ಶ್ರೀ ಸುಧೀಂದ್ರ ತೀರ್ಥರ ಶಿಷ್ಯರಾಗಿ ವಿಭೂತಿ ಪುರುಷರೆಂದು ಪ್ರಸಿದ್ಧರಾದರು ಕೇವಲ ತಮ್ಮ ತಪಸ್ ಶಕ್ತಿಯಿಂದ ಎಲ್ಲಾ ಹರಿ ಭಕ್ತರನ್ನು ಉದ್ಧಾರ ಮಾಡಿದರು 48 ಗ್ರಂಥಗಳನ್ನು ಬರೆದರು. ಇತಿಹಾಸ ಪುರಾಣ ಇವೆಲ್ಲವುಗಳಿಗೂ ವ್ಯಾಖ್ಯಾನ ಮಾಡಿದರು. ತುಂಬಾ ದೊಡ್ಡ ಜ್ಞಾನಿಗಳು ಹಾಗೂ ದೊಡ್ಡ ವಿಭೂತಿ ಪುರುಷರು ಅವರ ಸ್ಮರಣೆಯನ್ನು ಮಾಡುವುದರಿಂದಲೇ ಅದೆಷ್ಟೋ ಕಷ್ಟಗಳು ಪರಿಹಾರ ಆಗುತ್ತದೆ. ಇವರು ಮಂತ್ರಾಲಯ ಕ್ಷೇತ್ರದಲ್ಲಿ ಜೀವಂತವಾಗಿಯೇ ಬೃಂದಾವನದಲ್ಲಿ ಕುಳಿತಿದ್ದಾರೆ. ಸಾಮಾನ್ಯವಾಗಿ ಶರೀರದಿಂದ ಪ್ರಾಣವನ್ನು ಬಿಟ್ಟ ಮೇಲೆ ಯತಿಗಳ ಬೃಂದಾವನವನ್ನು ಕಟ್ಟುತ್ತಾರೆ . ಆದರೆ ಇವರು ತಪಸ್ಸನ್ನು ಮಾಡುತ್ತಿರುವಾಗಲೇ ಇವರ ಅಪ್ಪಣೆಯಂತೆ ಇವರ ಶಿಷ್ಯರು ಬೃಂದಾವನವನ್ನು ಕಟ್ಟಿದ್ದಾರೆ. ರಾಮದೇವರು 7 ನಿಮಿಷಗಳ ಕಾಲ ಯಾವ ಶಿಲೆಯ ಮೇಲೆ ಕುಳಿತಿದ್ದರೋ ಅದೇ ಶಿಲೆಯನ್ನೇ ಬೃಂದಾವನವನ್ನಾಗಿ ಮಾಡಿಕೊಂಡು ಏಳುನೂರು ವರ್ಷಗಳ ಕಾಲ ಈ ಭೂಲೋಕದಲ್ಲಿ ತಪಸ್ಸನ್ನು ಆಚರಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಹ ತಾವೇ ತಮ್ಮ ಶಿಷ್ಯಂದರಿಗೆ ಹೇಳಿದ್ದಾರೆ ಇದೇ ಭಾವನೆಯಲ್ಲಿ ನೂರಾರು ಸಾವಿರಾರು ಭಕ್ತರು ಇಂದಿಗೂ ಕೂಡ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದಾರೆ ಇನ್ನು ಕೆಲವು ಸಾಧಕರು ಇವರ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ ಸಾಧನೆಯನ್ನು ಮಾಡಿಕೊಂಡಿದ್ದಾರೆ ಈಗಲೂ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಭವಿಷ್ಯತ್ಕಾಲದಲ್ಲಿಯೂ ಮಾಡಿಕೊಳ್ಳುವವರಿದ್ದಾರೆ. ಇಂತಹ ಪರಮ ಶ್ರೇಷ್ಠ ವಿಭೂತಿ ಪುರುಷರಾದ ಗುರುರಾಯರನ್ನು ಪರಿಚಯಿಸಲು ನಾನು ಸಂತೋಷ ಪಡುತ್ತೇನೆ. ಇಂತಹ ರಾಘವೇಂದ್ರ ಸ್ವಾಮಿಗಳು ಭಕ್ತರು ಪ್ರಾರ್ಥನೆಯನ್ನು ಮಾಡುವಾಗ ಕೆಲವೊಮ್ಮೆ ಎಡ ಭಾಗದಲ್ಲಿ ಕೆಲವೋಮ್ಮೇ ಬಲಭಾಗದಲ್ಲಿ ಹೂ ಪ್ರಸಾದವನ್ನು ಕೊಡುತ್ತಾರೆ ಇವುಗಳ ಅಭಿಪ್ರಾಯವನ್ನು ಇಲ್ಲಿ ನಿರೂಪಣೆ ಮಾಡಲಾಗಿದೆ. ರಾಘವೇಂದ್ರ ಸ್ವಾಮಿಗಳ ಅನುಗ್ರಹವು ತಮಗೆ ಅಪೇಕ್ಷಿತವಾದಲ್ಲಿ ನಿತ್ಯವು ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಮಾಡಿರಿ. ನಾಮ ಲೇಖನದ ಪುಸ್ತಕಗಳನ್ನು ತರಿಸಿಕೊಳ್ಳಲು ವಾಟ್ಸಾಪ್ ಮೂಲಕ ಸಂಪರ್ಕ ಮಾಡಿ 8861983526