У нас вы можете посмотреть бесплатно Ex Serviceman Shankar Lamani Teaching Music To Children In Guledgudda, Bagalkote или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Ex Serviceman Shankar Lamani Teaching Music To Children In Guledgudda, Bagalkote | ದೇಶದ ಗಡಿಯಲ್ಲಿ ಗನ್ ಹಿಡಿದ ಯೋಧ ಶಂಕರ್ ಕೈಯಲ್ಲೀಗ ಸಂಗೀತ ಗಾನಸುಧೆ ಅವರು ಓರ್ವ ಮಾಜಿ ಸೈನಿಕ. ಹಲವಾರು ವರ್ಷಗಳ ಕಾಲ ಗನ್ ಹಿಡಿದು ಗಡಿಯಲ್ಲಿ ಹೋರಾಡಿದ ವೀರಯೋಧ. ನಿವೃತ್ತಿ ನಂತರ ಈಗ ಗನ್ ಕೆಳಗಿಟ್ಟು ಕೈಯಲ್ಲಿ ಸಂಗೀತ ಸಾಧನಗಳನ್ನು ಹಿಡಿದಿದ್ದಾರೆ. ಎಂಟು ಬಗೆಯ ವಾದನಗಳಲ್ಲಿ ಸುಮಧುರ ಸಂಗೀತವನ್ನ ಅವರು ನುಡಿಸುತ್ತಿದ್ರೆ ಕೇಳೋಗರು ಸಂಗೀತ ಲೋಕಕ್ಕೆ ಜಾರುತ್ತಾರೆ... ತಬಲಾ ವಾದ್ಯ, ಕ್ಯಾಸಿಯೊ, ಡ್ರಮ್, ಗಿಟಾರ್.. ಹೀಗೆ ವಿವಿಧ ವಾದ್ಯ ನುಡಿಸುತ್ತಿರುವ ಮಾಜಿ ಸೈನಿಕ. ಮಾಜಿ ಯೋಧನ ಮಾರ್ಗದರ್ಶನದಲ್ಲಿ ಚಿಣ್ಣರಿಂದ ಸಂಗೀತ ವಾದನ.. ಸುಮಧುರ ಹಾಡುಗಳ ಸಂಭ್ರಮ... ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ. ಇಲ್ಲಿನ ಮಾಜಿ ಯೋಧ ಶಂಕರ್ ಲಮಾಣಿ ಸಿಆರ್‌ಪಿಎಪ್‌ನಲ್ಲಿ ಗನ್ ಹಿಡಿದು ದೇಶ ಸೇವೆ ಮಾಡಿದ ವೀರಯೋಧ. ಸೇನಾ ವೃತ್ತಿಯಲ್ಲೂ ಸಂಗೀತ ಸಾಧನ ಕೈ ಬಿಡದ ಇವರು, ಈಗ ಗನ್ ಹಿಡಿದ ಕೈಯಲ್ಲಿ ಪುಲ್ ಟೈಮ್ ಸುಮಧುರ ಸಂಗೀತ ನಿನಾದ ಹರಿಸುತ್ತಿದ್ದಾರೆ. ೨೩ ವರ್ಷಗಳ ಕಾಲ ಸಿಆರ್‌ಪಿಎಪ್‌ನಲ್ಲಿ ಸೇವೆ ಸಲ್ಲಿಸಿ ಹವಾಲ್ದಾರ್ ಆಗಿ ನಿವೃತ್ತರಾಗಿದ್ದಾರೆ. ಊರಿಗೆ ವಾಪಸ್ ಬಂದ ಶಂಕರ್ ಲಮಾಣಿ, ಈಗ ಸಂಗೀತ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಶಂಕರ್ ಲಮಾಣಿ, ಗದಗನ ಪುಟ್ಟರಾಜ ಗವಾಯಿಗಳ ಮಠ, ಗುಳೇದಗುಡ್ಡ ಪಂಚಾಕ್ಷರಿ ಸಂಗೀತ ವಿದ್ಯಾಲಯದಲ್ಲಿ ಸಂಗೀತಾಭ್ಯಾಸ ಮಾಡಿದ್ದರು. ನಂತರ 1994 ರಲ್ಲಿ 24ನೇ ವಯಸ್ಸಿನಲ್ಲಿ ಸಿಆರ್‌ಪಿಎಫ್ ಸೇರಿ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಆ ವೇಳೆ ಸಿಆರ್‌ಪಿ ಎಪ್ ಮ್ಯೂಜಿಕ್ ಬ್ಯಾಂಡ್ ವಿಂಗ್‌ನಲ್ಲಿ ಹತ್ತು ವರ್ಷಗಳ ಕಾಲ ಮ್ಯುಜಿಕ್ ತಂಡದಲ್ಲೂ ಸೇವೆ ಸಲ್ಲಿಸಿದ್ದಾರೆ. ಗನ್ ಹಿಡಿದ ಕೈಯಲ್ಲಿ ಈಗ ಶಂಕರ್ ಕ್ಯಾಷಿಯೊ, ಹಾರ್ಮೊನಿಯಮ್, ತಬಲಾ, ತಂಬೂರಿ, ಗಿಟಾರ್, ಡ್ರಮ್, ಕಾಂಗೊ, ಪ್ಯಾಡ್ ಸೇರಿದಂತೆ ಎಂಟು ವಾದ್ಯಗಳನ್ನ ಸುಮಧುರವಾಗಿ ನುಡಿಸುತ್ತಾರೆ. ಇಷ್ಟೇ ಅಲ್ಲ ಅನೇಕ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada: / tv9kannada ► Like us on Facebook: / tv9kannada ► Follow us on Twitter: / tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: / tv9_kannada_official ► Join us on Telegram: https://t.me/tv9kannadaofficial ► Follow us on Pinterest: / tv9karnataka #TV9Kannada #Bagalkote #ShankarLamani #Exserviceman #teaching #music #children #Guledgudda #clasicmusic #filmymusic #devotionalmusic #folkmusic Credit: #Regional|#GuruKusugal/Producer|Ravi /Videoeditor| #TV9D