У нас вы можете посмотреть бесплатно #ವೃತ್ತಿಯೋಜನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ವೃತ್ತಿ #ಯೋಜನೆ ಎಂದರೇನು? ಮಾಡುವುದು ಹೇಗೆ? ಕೋರ್ಸ್ ಮತ್ತು ವೃತ್ತಿ: ಯಾವ ಆಯ್ಕೆ ಮೊದಲು? ನಿಮ್ಮ ಉಜ್ವಲ ಭವಿಷ್ಯವನ್ನ ರೋಪಿಸಿಕೊಳ್ಳೋದಕ್ಕೆ ಈ ವಿಡಿಯೊ ವೀಕ್ಷಿಸಿ : ಸುಮಾರು ವರ್ಷಗಳಿಂದ #ಪ್ರಜಾವಾಣಿ ದಿನಪತ್ರಿಕೆಯ ಮೂಲಕ ವಿದ್ಯಾರ್ಥಿಗಳೊಡನೆ ನಡೆಸುತ್ತಿರುವ ಸಂವಾದ ಮತ್ತು ಪ್ರಶ್ನೋತ್ತರಗಳಿಂದ ವಿದ್ಯಾರ್ಥಿಗಳು ಭವಿಷ್ಯದ ವೃತ್ತಿ ಮತ್ತು ಕೋರ್ಸ್ ಆಯ್ಕೆಯಲ್ಲಿ ಎಡವುತ್ತಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಕೆಲವು ಪ್ರತಿಕ್ರಿಯೆಯನ್ನು, ಗಮನಿಸಿದರೆ ಈ ಸಂದೇಹಗಳು ಖಾತರಿಯಾಗುವಂತಿದೆ. ವಾಸ್ತವವಾಗಿ, ವೃತ್ತಿ ಮತ್ತು ಕೋರ್ಸ್ ಆಯ್ಕೆಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದರೆ ಇಂತಹ ಪ್ರಶ್ನೆಗಳು ಉದ್ಭವಿಸುವುದೇ ಇಲ್ಲ. ಏಕೆಂದ್ರೆ, ಪ್ರಸ್ತುತ ಬಹಳಷ್ಟು ವಿದ್ಯಾರ್ಥಿಗಳು ‘ಮೊದಲು ಕೋರ್ಸ್, ನಂತರ ವೃತ್ತಿ‘ ಎಂಬ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ, ಇನ್ನು ಮುಂದೆ ‘ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್ ಆಯ್ಕೆ‘ ಎಂದು ಬದಲಾಯಿಸಿಕೊಳ್ಳಬೇಕು. ಕೋರ್ಸ್ ಆಯ್ಕೆಗೆ ಮುನ್ನವೇ ಇಂಥ ವೃತ್ತಿಗೆ ಸೇರಬೇಕೆಂದು ಯೋಜನೆಯನ್ನ ರೂಪಿಸುವುದೇ, ‘ವೃತ್ತಿ ಯೋಜನೆ‘ ಈಗ ನೋಡಿ; #ಪಿಯುಸಿ ನಂತರದ ಶೈಕ್ಷಣಿಕ ಅವಧಿ 5-6 ವರ್ಷಗಳಷ್ಟೇ; ಆದರೆ, ವೃತ್ತಿಯೆಂದರೆ 40 ವರ್ಷಗಳ ದೀರ್ಘಾವಧಿ ಪಯಣ. ಆದ್ದರಿಂದ, ವಿದ್ಯಾರ್ಥಿಗಳು ಖಚಿತವಾದ ವೃತ್ತಿಯ ಆಯ್ಕೆಯ ನಂತರವೇ ಕೋರ್ಸ್ ಆಯ್ಕೆ ಮಾಡಬೇಕು. ಹಾಗಾದರೆ, ವೃತ್ತಿ ಯೋಜನೆ ಮಾಡೋದು ಹೇಗೆ? 1. ಮೊದಲಿಗೆ, ನಿಮ್ಮ ಆಸಕ್ತಿಗಳೇನು? ಅಭಿರುಚಿಯೇನು? ನಿಮ್ಮ ಸ್ವಾಭಾವಿಕ ಪ್ರತಿಭೆಗಳೇನು? ಇದನ್ನ ಅರಿಯೋದಕ್ಕೆ ಶಾಲಾ ಕಾಲೇಜುಗಳಲ್ಲಿ, ಆನ್‍ಲೈನ್‍ನಲ್ಲಿ ಅಥವಾ ಮಾರ್ಗದರ್ಶಕರಲ್ಲಿ #ಆಪ್ಟಿಟ್ಯೂಡ್ ಟೆಸ್ಟ್ ಮಾಡಿಸ್ಬೋದು. ಆಪ್ಟಿಟ್ಯೂಡ್ ಟೆಸ್ಟ್ ನಲ್ಲಿ ಮೌಖಿಕ ಮತ್ತು ಅಮೌಖಿಕ ತಾರ್ಕಿಕತೆ ಅಂದ್ರೆ, verbal and non-verbal reasoning, ಯಾಂತ್ರಿಕ ತಾರ್ಕಿಕತೆ-mechanical reasoning, ಅಮೂರ್ತ ತಾರ್ಕಿಕತೆ-abstract reasoning, ಭಾಷಾ ಸಾಮರ್ಥ್ಯ-linguistic competence, ಪರಿಮಾಣಾತ್ಮಕ ಸಾಮರ್ಥ್ಯ-quantitative aptitude, ಜ್ಞಾಪಕಶಕ್ತಿ-memory, ಸಾಮಾನ್ಯ ಜ್ಞಾನ-general knowledge, ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತೆ. ಇವೆಲ್ಲದರ ಆಧಾರದ ಮೇಲೆ ಯಾವ ವೃತ್ತಿ ನಿಮಗೆ ಸೂಕ್ತ ಅಂತ ತಿಳಿದುಕೊಳ್ಳಬಹುದು. ಉದಾಹರಣೆಗೆ, ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಪತ್ರಿಕೋಧ್ಯಮದ ವೃತ್ತಿ ಇಷ್ಟ ಇದ್ರೆ, ಉತ್ತಮ ಸಂವಹನ ಅಂದ್ರೆ ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಹಾಗೂ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿsಸ್ಕೋಬೇಕು. ಪೊಲೀಸ್ ವೃತ್ತಿಗೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಢತೆಯಿರಬೇಕು. ಶಿಕ್ಷಕರಾಗಲು, ತಾಳ್ಮೆ, ಸಹನೆ, ಸಂವಹನ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಕೌಶಲವಿರಬೇಕು. ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರಬಹುದು. ಈ ಆಸಕ್ತಿ, ಅಭಿರುಚಿ, ಸ್ವಾಭಾವಿಕ ಪ್ರತಿಭೆ ಇಲ್ಲದೆ ವೃತ್ತಿಯ ಆಯ್ಕೆ ಮಾಡಿದ್ರೇನಾಗುತ್ತೆ? ಸಾಮಾನ್ಯವಾಗಿ ನಾವು ಅನುಸರಿಸೋ ವೃತ್ತಿ ಜೀವನ ಪರ್ಯಂತ ಇರುತ್ತೆ. ಅಂದ್ರೆ, ಸುಮಾರು 40 ವರ್ಷದ ದೀರ್ಘಕಾಲದ ವೃತ್ತಿಯಲ್ಲಿ ಯಶಸ್ಸು ಬೇಕು ಅಂದ್ರೆ, ವೃತ್ತಿ ಸಂಬಂಧಿತ ಸ್ವಾಭಾವಿಕ ಪ್ರತಿಭೆ, ಅಭಿರುಚಿ, ಕೌಶಲಗಳಿರಬೇಕು ಅನ್ನೋದು ಔದ್ಯೋಗಿಕ ಕ್ಷೇತ್ರದ ಮನಃಶಾಸ್ತçಜ್ಞರ ಮತ್ತು ನಮ್ಮಂತಹ ಎಲ್ಲಾ #ಮಾರ್ಗದರ್ಶಕ ಒಮ್ಮತದ ಅಭಿಪ್ರಾಯ. ಇನ್ನೊಂದು ವಿಷಯ. ಮೊದಲು ವೃತ್ತಿಯ ಆಯ್ಕೆಯನ್ನು ಮಾಡುವ ಮುಂಚೆ ಶಿಕ್ಷಣ ಮುಗಿಯುವ ವೇಳೆಗೆ ಅಂದ್ರೆ ಪಿಯುಸಿ ನಂತರದ 5-೬ ವರ್ಷಗಳ ನಂತರವೂ ಆ ವೃತ್ತಿಯ ಕ್ಷೇತ್ರಕ್ಕೆ ಬೇಡಿಕೆಯಿರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ. 2. ಎರಡನೇದು ಈ ನಿರ್ಧಾರವನ್ನ ನಿಮಗೇ ತೆಗೆದುಕೊಳ್ಳೋಕೆ ಆದ್ರೆ ಒಳ್ಳೇದು. ಒಂದು ಸಮಯ ಆಗದೇ ಇದ್ರೇ ಅಥವಾ ಆಯ್ಕೆಯಲ್ಲಿ ಗೊಂದಲವಿದ್ರೆ, ನಿಮಗೆ ಮಾರ್ಗದರ್ಶನ ಬೇಕಾಗುತ್ತದೆ. ಆದ್ದರಿಂದ, ಮಾರ್ಗದರ್ಶಕರನ್ನು ಗುರುತಿಸಿ. ಈ ಮಾರ್ಗದರ್ಶಕರು ನಿಮ್ಮ ಕಾಲೇಜಿನ career #counsellor ಆಗ್ಬೋದು; ಅಥವಾ ನಮ್ಮಂತಹ ವೃತ್ತಿಪರ ಮಾರ್ಗದರ್ಶಕರಾಗ್ಬೋದು. 3. ಮೂರನೇ ಮತ್ತು ಪ್ರಮುಖ ಹಂತ ಅಂದ್ರೆ, ನಿಮ್ಮ ಜೀವನದ ಧ್ಯೇಯಗಳನ್ನ ನಿಶ್ಚಯಿಸಿ: ನಿಮ್ಮ ವೃತ್ತಿ ಮತು ಖಾಸಗಿ ಜೀವನದ ಧ್ಯೇಯಗಳೇನು? ಎಲ್ಲಿ ವೃತ್ತಿಯನ್ನು ನಿರ್ವಹಿಸಲು ಬಯಸ್ತೀರಿ? ಶಿಕ್ಷಣದ ನಂತರದ ಬದುಕಿನ ನಿಮ್ಮ ಕನಸುಗಳೇನು? ಬದುಕಿಗೆ ಅತಿ ಮುಖ್ಯವಾದ, ಈ ಪ್ರಶ್ನೆಗಳ ಬಗ್ಗೆ ಚಿಂತಿಸಿ, ಉತ್ತರಗಳನ್ನು ಕಂಡುಕೊಳ್ಳಿ. 4. ನಾಲ್ಕನೇದು ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ: ನಿಮ್ಮ ಜೀವನದ ಧ್ಯೇಯಗಳಂತೆ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಮಾಡಬೇಕೆ? ವಿದೇಶದಲ್ಲಿ ಉನ್ನತ ಶಿಕ್ಷಣದ ಅವಶ್ಯಕತೆಯಿದೆಯೇ? ಎಲ್ಲಿಯವರೆಗೆ ಓದಬೇಕು ಮತ್ತು ಹೆಚ್ಚುವರಿ ಭಾಷೆ, ಕೌಶಲಗಳ ಕೋರ್ಸ್ ಅವಶ್ಯಕತೆಗಳ ಬಗ್ಗೆ ನಿರ್ಧರಿಸಿ. 5. ಐದನೆದು ಸ್ಪರ್ಧಾತ್ಮಕ ಪರೀಕ್ಷೆಗಳು: ನಿಮ್ಮ ಕೋರ್ಸಿಗೆ ತಕ್ಕಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲುಗಳನ್ನು ಗುರುತಿಸಿ, ಅಗತ್ಯಾನುಸಾರ ಅಂದ್ರೆ ನಿಮ್ಮ ಸಾಮರ್ಥ್ಯ್ ಮತ್ತು ದೌರ್ಬಲ್ಯಗಳನ್ನು ಅರಿತು, ತಯಾರಾಗಿ. ಉದಾಹರಣೆಗೆ #ನೀಟ್, #ಸಿಇಟಿ, #ಕ್ಯಾಟ್, #ಜಿಮ್ಯಾಟ್, #ಜಿಆರ್‌ಇ, #ನಾಟ,ಬಿಟ್‍ಸಾಟ್ ಮುಂತಾದ ಎಲ್ಲಾ ಪರೀಕ್ಷೆಗಳು ಈಗ ಅತ್ಯಂತ ಸ್ಪರ್ಧಾತ್ಮಕವಾಗಿವೆ; ಸ್ವಂತ ತಯಾರಿಯಲ್ಲಿ ಸೂಕ್ತವಾದ ಕಾರ್ಯತಂತ್ರ, ಏಕಾಗ್ರತೆ ಮತ್ತು ಪರಿಶ್ರಮ ಇರ್ಲೇ ಬೇಕು. ಅಥವಾ ಕೋಚಿಂಗ್ ಬೇಕಾಗ್‍ಬಹುದು. 6. ಆರನೇದು ಕಾಲೇಜುಗಳ ಆಯ್ಕೆ ಹೇಗೆ? ಕಾಲೇಜಿನ ಸಂಪನ್ಮೂಲಗಳು, ಅಧ್ಯಾಪಕ ವರ್ಗ, ಪ್ಲೇಸ್‍ಮೆಂಟ್, ಗ್ರಂಥಾಲಯ, ಶುಲ್ಕಗಳು, ರ‍್ಯಾಂಕಿಂಗ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ. ಈ ರ‍್ಯಾಂಕಿಂಗ್ ಮಾಹಿತಿ ಅಂತರ್ಜಾಲದಲ್ಲಿ ಸಿಗುತ್ತೆ. ನಿಮ್ಮ ಆಯ್ಕೆಗಳ ಹಿಂದೆ ಮಾರ್ಗದರ್ಶಕರ ಬೆಂಬಲ ಇರಬೇಕು. ಸ್ವಲ್ಪ ಸಂಶಯವಿದ್ದರೂ, ಖುದ್ದಾಗಿ ಆ ಕಾಲೇಜಿಗೆ ಅಥವಾ ವಿಶ್ವವಿದ್ಯಾಲಯಕ್ಕೆ ಹೋಗಿ ಪರೀಕ್ಷಿಸಿ. 7. ಏಳನೇ ಹಂತದಲ್ಲಿ, ಈ ಎಲ್ಲಾ ವಿವರಗಳನ್ನ ಅಂದ್ರೆ, ನಿಮ್ಮ ವೃತ್ತಿಯ ಸಂಪೂರ್ಣ ಯೋಜನೆಯನ್ನ ಒಂದು ಡೈರಿಯಲ್ಲಿ ದಾಖಲಿಸಿ. ಅದನ್ನ ಆಗಿಂದಾಗ್ಗೆ ಪರಿಶೀಲಿಸುತ್ತಿರ್ಬೇಕು ಮತ್ತು ಪರಿಶ್ಕರಿಸುತ್ತಿರ್ಬೇಕು. ಅಂದ್ರೆ, ಈಗ ನೀವು ಒಂದು @career diary ನ maintain ಮಾಡ್ತಾ ಇರ್ಬೇಕು. 8. ಕೊನೆಯದಾಗಿ ಹೇಳ್ಬೇಕು ಅಂದ್ರೆ, ಬದುಕಿನ ನಿಮ್ಮ ಕನಸುಗಳು ಮಹತ್ವಾಕಾಂಶೆಯಾಗಿ, ವೃತ್ತಿ ಯೋಜನೆಯ ಮೂಲಕ ಸಾಧಿಸಬಹುದಾದ ಗುರಿಗಳಾಗ್ಲಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ: pradeep@promaxintl.com