У нас вы можете посмотреть бесплатно #ಪಿಎಚ್ಡಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪಿಎಚ್.ಡಿ ಮಾಡೋದು ಹೇಗೆ? ಯಾವ #ಕೌಶಲಗಳಿರಬೇಕು? ಅವಕಾಶಗಳೇನು? ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಯಾವುದೇ ವಿಷಯದಲ್ಲಿ ಹೆಚ್ಚಿನ #ತಜ್ಞತೆ ಬೇಕು ಅಂದ್ರೆ ಪಿಎಚ್‌ಡಿ ಅಥವಾ #ಡಾಕ್ಟರೇಟ್ ಮಾಡ್ಬೇಕು. ಆದ್ರೆ, ಡಾಕ್ಟರೇಟ್ ಮಾಡ್ಬೇಕು ಅಂದ್ರೆ, ನಿಮ್ಮಲ್ಲೊಂದು ವಿಶೇಷವಾದ #ಗುಣ ಇರಬೇಕು. ಜಗತ್ತಿನ ಮೂವರು ಶ್ರೇಷ್ಠ ಚಿಂತಕರಾದ #ಸರ್ #ಐಸಾಕ್ #ನ್ಯೂಟನ್, #ಚಾರ್ಲ್ಸ್ #ಡಾರ್ವಿನ್ ಮತ್ತು #ಆಲ್ಬರ್ಟ್ #ಐನ್‍ಸ್ಟೈನ್ ರವರಲ್ಲಿ ಒಂದು ವಿಶೇಷ ಗುಣವಿತ್ತು. #ಉದ್ದೇಶ, #ಪ್ರಸ್ತುತತೆ ಮತ್ತು #ವ್ಯಾಖ್ಯಾನದ #ಪ್ರಶ್ನೆಗಳು, ಅವರ ವಿಮರ್ಶಾತ್ಮಕ ಚಿಂತನೆ ಮತ್ತು #ಬುದ್ಧಿಶಕ್ತಿ ಗೆ ಅಪಾರವಾದ ಶಕ್ತಿಯನ್ನು ತುಂಬಿದ್ದವು. ವಿಷಯಗಳಲ್ಲಿ ಆಸಕ್ತಿ, ಕುತೂಹಲ ಮತ್ತು ವಿಶೇಷವಾಗಿ ಸ್ವಯಂ-ಪ್ರಶ್ನೆಗಾರಿಕೆ ಅತ್ಯವಶ್ಯ. ಸಕ್ರಿಯವಾದ ಪ್ರಶ್ನೆಗಾರಿಕೆಯಿಂದ ನಿಮ್ಮ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯಾಗಿ, ವಿಷಯದ ಬಗ್ಗೆ ಒಳನೋಟಗಳು ಸಿಗುತ್ತೆ. ಹಾಗಾಗಿ, ಪಿಎಚ್‌ಡಿ ಮಾಡೋಕೆ ಬೇಕಾದ ಮೊದಲ ಮತ್ತು ಪ್ರಮುಖ ಕೌಶಲವೆಂದ್ರೆ, #ಸ್ವಯಂ-ಪ್ರಶ್ನೆಗಾರಿಕೆ. ಈಗ ಪಿಎಚ್‌ಡಿ ಮಾಡೋದು ಹೇಗೆ ಅಂತ ತಿಳ್ಕೋಳಣ. • ಪಿಎಚ್‌ಡಿ ಕೋರ್ಸಿಗೆ ಅಗತ್ಯವಾದ ಸಂಶೋಧನೆಯ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ. • ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ನಂತರ ಪಿಎಚ್‌ಡಿ ಕೋರ್ಸ್ ಮಾಡಲು ಅರ್ಹತೆ ಸಿಗುತ್ತದೆ. ಆದರೆ, ಈಗ ಅನುಷ್ಠಾನಗೊಳ್ಳುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿಯ ನಂತರವೇ ಪಿಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ. • ಪಿಎಚ್‌ಡಿ ಕೋರ್ಸಿನಲ್ಲಿ ನೀವು ಮಾಡುವ ಸಂಶೋಧನೆ ಕುರಿತ ಸುದೀರ್ಘವಾದ #ಪ್ರಸ್ತಾವನೆ ಯನ್ನು ತಯಾರಿಸಬೇಕು. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಅನುಮತಿ ಸಿಗುತ್ತದೆ. • ಪ್ರತಿ ವಿಶ್ವವಿದ್ಯಾಲಯವು ಪ್ರತಿ ವರ್ಷ ತನ್ನ ಪಿಎಚ್‌ಡಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅವಕಾಶಗಳನ್ನು ಹೊಂದಿರುತ್ತದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು #ಪ್ರವೇಶ #ಪರೀಕ್ಷೆಗಳು, #ಸಂದರ್ಶನಗಳು ಮತ್ತು ಸಂಶೋಧನಾ ಪ್ರಸ್ತಾವನೆಯ #ಮೌಲ್ಯಮಾಪನ ಇತ್ಯಾದಿ ಪ್ರಕ್ರಿಯೆಗಳಿರುತ್ತದೆ. • ಪಿಎಚ್‌ಡಿ ಕೋರ್ಸಿಗೆ ಆಯ್ಕೆಯಾದ ನಂತರ ಸಂಶೋಧನೆಯನ್ನು ಪೂರ್ಣಗೊಳಿಸಿ #ಮಹಾಪ್ರಬಂಧವನ್ನು ಅಂದ್ರೆ #THESIS ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇದಲ್ಲದೆ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಬೇಕು. • ನೀವು ಸಲ್ಲಿಸಿದ ಮಹಾಪ್ರಬಂಧವನ್ನು ವಿಷಯ ತಜ್ಞರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. • ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಸ್ವೀಕಾರ ಮಾಡಿದ ನಂತರ ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ 3-5 ವರ್ಷ ಬೇಕಾಗಬಹುದು. ಪ್ರತಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳು, ಶುಲ್ಕಗಳು, ವಿದ್ಯಾರ್ಥಿ ವೇತನ, ಅನುದಾನ ಇತ್ಯಾದಿಗಳು ವಿಭಿನ್ನವಾಗಿರುತ್ತದೆ. ಹೆಚ್ಚಿನ ಮಾರ್ಗದರ್ಶನ ಬೇಕಿದ್ರೆ, ಬರೆಯಿರಿ: pradeep@promaxintl.com ಸ್ಕೂಲ್/ಕಾಲೇಜುಗಳಲ್ಲಿ ಕಲಿಸದ ಇಂತಹ ಅನೇಕ ಜೀವನದ ಪಾಠಗಳನ್ನ, ವಿಷಯಗಳನ್ನ ತಿಳಿದುಕೊಳ್ಳೋಕೆ www.vpradeepkumar.com ಗೆ ಭೇಟಿ ಮಾಡಿ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ, ಶೇರ್ ಮಾಡಿ ಮತ್ತು ಲೈಕ್ ಮಾಡಿ. #youtubeupdate #youtubevideo #youtubeviews