У нас вы можете посмотреть бесплатно #ಇಂಗ್ಲಿಷ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ಪ್ರಜಾವಾಣಿ #ಶಿಕ್ಷಣ #ಅಂಕಣದಲ್ಲಿ ಆಗಾಗ್ಗೆ ಬರೋ ಪ್ರಶ್ನೆಗಳಲ್ಲಿ ಇಂಗ್ಲಿಷ್ ಕಲಿತು ನಿರರ್ಗಳವಾಗಿ ಮಾತ್ನಾಡೋದು ಹೇಗೆ ಅನ್ನೋದು ಸಹ ಒಂದು ಪ್ರಮುಖವಾದದ್ದು. ಅಂದ್ರೆ, ಇಂಗ್ಲಿಷ್ ಮಾತ್ನಾಡೋ ಸಮಸ್ಯೆ ಇರೋದು ಸಹಜ. ಮತ್ತು ಈ ಸಮಸ್ಯೆ ಹೆಚ್ಚಾಗಿ ಇರೋದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ. ಆದ್ರೆ, ನೀವೆಲ್ಲರೂ ಗಮನಿಸಿ. ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಭಾಷೆಯನ್ನ ಸುಲಭವಾಗಿ ಕಲಿಯಬಹುದು. ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ: 1. #ಆತ್ಮವಿಶ್ವಾಸ (#Self-confidence): ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಪ್ರಾರಂಭಿಸಿ. 2. #ಓದುವುದು (#Reading): ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ. 3. #ಮಾತನಾಡುವುದು (#Speaking): ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚವಿಲ್ಲದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ. 4. #ಬರೆಯುವುದು (#Writing): ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಾಕ್ಯರಚನೆಯಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿ, ಕಂಪ್ಯೂಟರ್‌ನಲ್ಲಿಯೇ ಸರಳ ವಾಕ್ಯಗಳನ್ನು ರಚಿಸಿ. ಕಾಲಕ್ರಮೇಣ ಕ್ಲಿಷ್ಟವಾದ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿ. ನೀವು ರಚಿಸಿದ ವಾಕ್ಯಗಳ ವ್ಯಾಕರಣದಲ್ಲಿನ ಲೋಪದೋಷಗಳನ್ನು ಆಪ್ಸ್ (ಮೈಕ್ರೊಸಾಫ್ಟ್ ವರ್ಡ್, ಗ್ರಾಮರ್ಲಿ ಇತ್ಯಾದಿ) ಮೂಲಕ ಸರಿಪಡಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಸ್ ಸೆಟಿಂಗ್ಸ್ ಅನ್ನು ಹೊಂದಿಸಿ. 5. #ವಿಡಿಯೊ, ಚಲನಚಿತ್ರಗಳ ವೀಕ್ಷಣೆ (#Watch #Movies, documentaries): ಉಪಶೀರ್ಷಿಕೆಗಳಿರುವ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ÷್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವಿಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ. 6. #ಮೊಬೈಲ್ ಅಪ್ಲಿಕೇಶನ್ಸ್ ಬಳಕೆ (#MobileApps): ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳನ್ನು (ಹೆಲೊ ಇಂಗ್ಲಿಷ್, ಡ್ಯುಒಲಿಂಗೊ, ಹೆಲೊ ಟಾಕ್ ಇತ್ಯಾದಿ) ಬಳಸಿ. ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ಅಗತ್ಯವಿದ್ದರೆ ಹೆಚ್ಚುವರಿ ಕೋರ್ಸ್ಗಳ ಮೂಲಕ ಪರಿಣತಿಯನ್ನು ಗಳಿಸಿ. ಸ್ಕೂಲ್/ಕಾಲೇಜುಗಳಲ್ಲಿ ಕಲಿಸದ ಇಂತಹ ಅನೇಕ ಜೀವನದ ಪಾಠಗಳನ್ನ, ವಿಷಯಗಳನ್ನ ತಿಳಿದುಕೊಳ್ಳೋಕೆ vpradeepkumar.com ಗೆ ಭೇಟಿ ಮಾಡಿ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ, ಶೇರ್ ಮಾಡಿ ಮತ್ತು ಲೈಕ್ ಮಾಡಿ. #youtubeupdate #youtubevideo #youtubeviews #LearnEnglish #SpeakEnglish #ReadEnglish #WriteEnglish Kannada Video #HelloEnglish #Duolingo #HelloTalk #MicroSoftWord #grammerly