У нас вы можете посмотреть бесплатно #ಫಾರೆಸ್ಟ್ರಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದಿರತಕ್ಕಂತಹ #ಬಿಎಸ್ಸಿ #ಫಾರೆಸ್ಟ್ರಿ ಕೋರ್ಸ್ ಮುಖಾಂತರ ಆಕರ್ಷಕವಾದ ವೃತ್ತಿಯನ್ನ ರೂಪಿಸಿಕೊಳ್ಳೋ ಅವಕಾಶಗಳಿವೆ. ನಾಲ್ಕು ವರ್ಷದ ಬಿಎಸ್ಸಿ (ಫಾರೆಸ್ಟ್ರಿ) ಕೋರ್ಸನ್ನ ಕರ್ನಾಟಕದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡು ಕಾಲೇಜುಗಳಲ್ಲಿ ಮಾಡಬಹುದು. ಒಂದು, ಕೊಡಗಿನ ಪೊನ್ನಮ್‌ಪೇಟೆಯಲ್ಲಿದೆ; ಇನ್ನೊಂದು ಉತ್ತರಕನ್ನಡ ಜಿಲ್ಲೆಯ ಸಿರ್ಸಿ ನಗರದಲ್ಲಿದೆ. ಈ ಎರಡೂ ಕೋರ್ಸ್ಗಳಿಗೆ ನೀವು ಯುಜಿ #ಸಿಇಟಿ ಪ್ರವೇಶ ಪರೀಕ್ಷೆಯನ್ನ ಬರೀಬೇಕು ಮತ್ತು ಈ ಪರೀಕ್ಷೆಯ ರ‍್ಯಾಂಕ್ ಆಧಾರದ ಮೇಲೆ ಸೀಟ್ ಹಂಚಿಕೆಯಾಗುತ್ತೆ. ಹಾಗೂ, #ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯ ಅಂಕಗಳ ಮೂಲಕ ಆದ್ಯತೆಯಿದೆ. 50 ಪ್ರಶ್ನೆಗಳ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಧಾನ್ಯಗಳು, ಗಿಡ, ಎಲೆ, ಮರ, ಪ್ರಾಣಿ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು ಗ್ರಾಮೀಣ/ರೈತ ಕುಟುಂಬದವರಾಗಿದ್ದರೆ ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸಬಹುದು (ಬಹು ಆಯ್ಕೆ ಮಾದರಿ). ಆದರೂ, ತಯಾರಾಗಿ ಎಲ್ಲಾ 50 ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ ಉತ್ತಮ ರ‍್ಯಾಂಕಿಂಗ್ ಪಡೆಯಬಹುದು. ಪ್ರಶ್ನೆ್ಯನ್ನು ಉತ್ತರಿಸಲು 30 ಸೆಕಂಡ್ ಕಾಲಾವಕಾಶವಿರುತ್ತದೆ. ಪಿಯುಸಿ, ಸಿಇಟಿ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ರ‍್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಈ ಕೋರ್ಸ್ನಲ್ಲಿ ನೀವು ಕಲಿಯೋ ಕೆಲವು ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಷಯಗಳು ಹೀಗಿರುತ್ತೆ: #plantation techniques, old plantation #management, #wildlife #ecosystem #conservation, and preventing the destruction of #endangered ecosystems. Therefore, Students will get academic and practical expertise in forestry and associated subjects as part of this innovative programme. ಹಾಗಾಗಿ, ಜಾಗತಿಕ ತಾಪಮಾನದ ಏರಿಕೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಕಾಳಜಿ, ವನ್ಯಜೀವಿಗಳ ಮೂಲಭೂತ ಅಂಶಗಳು, #ಅರಣ್ಯ ಮತ್ತು #ವನ್ಯಜೀವಿಗಳ ಸಂರಕ್ಷಣೆ, #ಜಲವಿಜ್ಞಾನ, #ಮಣ್ಣು ಮತ್ತು ನೀರಿನ ಸಮಸ್ಯೆ, #ತೋಟಗಾರಿಕೆ ಇಂತಹ ವಿಷಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬಿಎಸ್ಸಿ ಫಾರೆಸ್ಟ್ರಿ ಕೋರ್ಸ್ ಜೀವನವನ್ನ ರೂಪಿಸಿಕೊಳ್ಳೋದಿಕ್ಕೆ ಅನುಕೂಲವಾಗುತ್ತೆ. ಈ ಕೋರ್ಸ್ ನಂತರ ಸರ್ಕಾರಿ ವಲಯದ ಅರಣ್ಯ ಇಲಾಖೆಯಲ್ಲಿ ಕೆಲಸ ಸಿಗುತ್ತೆ. ಹಾಗೂ, ಕೆಲವು ಪ್ರಮುಖ ಹುದ್ದೆಗಳಿಗೆ, ಉದಾಹರಣೆಗೆ, ರೇಂಜರ್ಸ್ ಹುದ್ದೆಗೆ, ಅಸಿಸ್ಟೆಂಟ್ #ಕನ್ಸರ್‌ವೇಟರ್ ಅಫ್ ಫಾರೆಸ್ಟ್ ಹುದ್ದೆಗೆ ಮತ್ತು ಡೆಪುಟಿ ರೇಂಜ್ ಫಾರೆಸ್ಟರ್ ಹುದ್ದೆಗಳಿಗೆ ಬಿಎಸ್ಸಿ ಫಾರೆಸ್ಟ್ರಿ ಪದವೀಧರರಿಗೆ ಸಾಕಷ್ಟು ಪ್ರಮಾಣದ ಮೀಸಲಾತಿ ಇದೆ. ಇದಲ್ಲದೆ, ಪದವಿಯ ನಂತರ ರೇಂಜ್ ಫಾರೆಸ್ಟ್ ಆಫೀಸರ್ ಮುಂತಾದ ಹುದ್ದೆಗಳಿಗೆ ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಮತ್ತು ಸಾಮಾನ್ಯವಾಗಿ ಇಲ್ಲೂ ಸಹ #ಮೀಸಲಾತಿ ಇರುತ್ತೆ. ಇನ್ನೊಂದು ವಿಷಯವನ್ನು ಗಮನಿಸಬೇಕು. ಸರ್ಕಾರಿ ವಲಯದಲ್ಲಷ್ಟೇ ಅಲ್ಲ, ಅನೇಕ ಖಾಸಗೀ ಕ್ಷೇತ್ರದಲ್ಲೂ ಸಹ ವೃತ್ತಿಯ ಅವಕಾಶಗಳಿವೆ. ಉದಾಹರಣೆಗೆ #ಕಾಫಿ ಮತ್ತು #ಟಿ ಎಸ್ಟೇಟ್ ಕಂಪನಿಗಳು, #ರಬ್ಬರ್, #ಸ್ಪೈಸೆಸ್ ಮುಂತಾದ ಅಗ್ರಿ ಬಿಸಿನೆಸ್ ಕಂಪನೀಸ್, #ಆಯುರ್ವೇದ ಮತ್ತು #ಆಹಾರ ಸಂಸ್ಕರಣೆ ಮಾಡತಕ್ಕಂತಹ ಕಂಪನೀಸ್, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಮತ್ತು ಈ ಕ್ಷೇತ್ರಕ್ಕೆ ಸಂಬAಧಿಸಿರೋ ಸಂಶೋಧನಾ ಸಂಸ್ಥೆಗಳಿವೆ. ಹಾಗೂ, ಹೆಚ್ಚಿನ ತಜ್ಞತೆ ಬೇಕಿದ್ದರೆ #ಎಂಎಸ್ಸಿ ಅಥವ #ಪಿಎಚ್.ಡಿ ಸಹಾ ಮಾಡಬಹುದು. ಅಥವಾ #ಯುಪಿಎಸ್‌ಸಿ ಪರೀಕ್ಷೆಯ ಮುಖಾಂತರ ಐಎಫ್‌ಎಸ್ ಅಂದ್ರೆ ಇಂಡಿಯನ್ ಫಾರೆಸ್ಟ್ ಸರ್ವೀಸಸ್ ಸಹಾ ಸೇರಿ, ಈ ಕ್ಷೇತ್ರದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನ ಬೇಕಿದ್ರೆ, ಬರೆಯಿರಿ: pradeep@promaxintl.com ಸ್ಕೂಲ್/ಕಾಲೇಜುಗಳಲ್ಲಿ ಕಲಿಸದ ಇಂತಹ ಅನೇಕ ಜೀವನದ ಪಾಠಗಳನ್ನ, ವಿಷಯಗಳನ್ನ ತಿಳಿದುಕೊಳ್ಳೋಕೆ www.vpradeepkumar.com ಗೆ ಭೇಟಿ ಮಾಡಿ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ, ಶೇರ್ ಮಾಡಿ ಮತ್ತು ಲೈಕ್ ಮಾಡಿ.