У нас вы можете посмотреть бесплатно ರಾಮದೇವರ ಬೆಟ್ಟ ರಾಮನಗರ Ramadevara Betta Vulture Sanctuary или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಮ ದೇವರ ಬೆಟ್ಟ | ರಾಮಗಿರಿ ಬೆಟ್ಟ | ಶೋಲೆ ಬೆಟ್ಟ ಶ್ರೀ ರಾಮದೇವರ ಬೆಟ್ಟ: ಪ್ರಭು ಶ್ರೀ ರಾಮಚಂದ್ರನ ನೆಲೆಬೀಡಾದ ರಾಮದೇವರ ಬೆಟ್ಟವು ರಾಮನಗರದಿಂದ 4 ಕಿ.ಮೀ ದೂರದಲ್ಲಿದೆ. ರಾಮದೇವರ ಬೆಟ್ಟದ ಪ್ರಾರಂಭದಲ್ಲಿ ಆಂಜನೇಯದ ಉದ್ಬವ ಮೂತಿಯನ್ನು ಕಾಣಬಹುದು.ಏಕಶಿಲೆಯಲ್ಲಿ ರಾಮ, ಸೀತಾ, ಲಕ್ಷ್ಮಣ ಮತ್ತು ಆಂಜನೇಯನನ್ನು ಸುಂದರವಾಗಿ ಕೆತ್ತಲಾಗಿದೆ. ಶ್ರೀ ರಾಮಚಂದ್ರರ ಪಾದ ಸ್ಪರ್ಶದಿಂದ ಪುನೀತವಾದ ಕನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದಾದ ರಾಮನಗರ ಜಿಲ್ಲೆ ಹಾಗೂ ಇಲ್ಲಿರುವ ರಾಮದೇವರ ಬೆಟ್ಟವು ದಕ್ಕಿಣದ ಚಿತ್ರಕೂಟ ಎಂದೇ ಪ್ರಸಿದ್ದಿಯಾಗಿದೆ. ಪ್ರಖ್ಯಾತ ಹಿಂದಿಯ ಶೋಲೆ ಚಲನ ಚಿತ್ರದ ಚಿತ್ರೀಕರಣ ನಡೆದ ರಾಮಗಿರಿ ಬೆಟ್ಟವನ್ನು ಕನ್ನಡಿಗರು ರಾಮದೇವರ ಬೆಟ್ಟ ಹೊರ ರಾಜ್ಯದವರು ಶೋಲೆ ಬೆಟ್ಟ ಎಂದೇ ಕರೆಯುತ್ತಾರೆ. ಈ ಬೆಟ್ಟದ ಹಿನ್ನೆಲೆ ನಮ್ಮನ್ನು ರಾಮಾಯಣದ ಕಾಲಕ್ಕೆ ಮರಳಿಸುತ್ತದೆ. ಬೆಟ್ಟದ ಮೇಲೆ ಪಟ್ಟಾಭಿರಾಮನ ಪುರಾತನ ದೇವಾಲಯ ರಾಮೇಶ್ವರ ದೇವಾಲಯ ಹಾಗೂ ಆಂಜನೇಯನ ದೇವಾಲಯಗಳಿವೆ. ವರ್ಷ ಪೂರ್ತಿ ನೀರಿರುವ ರಾಮತೀರ್ಥದ ದೊಣೆ ಇದೆ. ಪಟ್ಟಾಭಿರಾಮ ದೇಗುಲದ ಮುಂಬಾಗದಲ್ಲಿ ಬ್ರಹದಾಕಾರದಲ್ಲಿ ನಿಂತಿರುವ ಬಂಗಿಯಲ್ಲಿ ಏಳು ಬಂಡೆಗಳಿವೆ. ಇವು ಸಪ್ತ ಋಷಿಗಳ ಸಂಕೇತವೆಂದು ಹೇಳಲಾಗುತ್ತದೆ. ವನವಾಸದ ಸಂದರ್ಭದಲ್ಲಿ ಶ್ರೀರಾಮನು ಸೀತಾ ಲಕ್ಷ್ಮಣರ ಜೊತೆಯಲ್ಲಿ ಒಂದುವರ್ಷಕ್ಕೂ ಹೆಚ್ಚುಕಾಲ ಈ ಬೆಟ್ಟದಲ್ಲಿ ತಂಗಿದ್ದನು ಎಂಬ ಪ್ರತೀತಿ ಇದೆ. ಪಟ್ಟಾಭಿರಾಮ ದೇಗುಲದ ಆವರಣದಲ್ಲಿ ಒಂದು ಕೊಳ(ದೊಣೆ) ಇದು. ವನವಾಸದ ಸಂದರ್ಭದಲ್ಲಿ ಸೀತಾ ಮಾತರಗೆ ಬಾಯಾರಿಕೆಯಾಗಿದ್ದರಿಂದ ಶ್ರೀರಾಮನು ಬಾಣ ಹೊಡೆದು ಪಾತಾಳಗಂಗೆಯನ್ನು ಹೊರತೆಗೆದನು ಎಂದು ಪುರಾಣದಲ್ಲಿ ಹೇಳಲಾಗಿದೆ. ಇದನ್ನೇ ರಾಮತೀರ್ಥ ಎನ್ನಲಾಗುತ್ತದೆ. ಇಲ್ಲಿಯ ವಿಸ್ಮಯವೆಂದರೆ ಈ ಪ್ರದೇಶದಲ್ಲಿ ಎಷ್ಠ ಹುಡುಕಿದರೂ ಒಂದು ಕಾಗೆಯೂ ಸುಳಿಯುವುದಿಲ್ಲ. ವನವಾಸದ ಸಂದರ್ಭದಲ್ಲಿ ಕಾಕಾಸುರನು ಸೀತಾಮಾತೆಯನ್ನು ಕೆಣಕುತ್ತಾನೆ. ಇದರಿಂದ ಕೋಪಗೊಂಡ ಶ್ರೀರಾಮನು ಕಾಕಾಸುರನ ಕಣ್ಣನ್ನು ಬಾಣದಿಂದ ಹೊಡೆದು ಕಿತ್ತು ಹಾಕುತ್ತಾನೆ. ಅಂದಿನಿಂದ ಈ ಸ್ಥಳದಲ್ಲಿ ಕಾಗೆಗಳು ಹಾರಾಡುವುದಿಲ್ಲ. ಈ ಬೆಟ್ಟದ ಮತ್ತೊಂದು ವಿಶೇಷವೇನೆಂದರೆ, ದೇಶದ ಏಕೈಕ ರಣಹದ್ದು ಸಂರಕ್ಷಣಾ ತಾಣವಾಗಿದೆ. ರಾಮಾಯಣದ ಕಾಲದ ಜಟಾಯು ಪಕ್ಷಿಯ ಆವಾಸ ಸ್ಥಾನವಾಗಿರುವುದರಿಂದ ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಕಾಣುತ್ತವೆ. ಈ ರಾಮದೇವರ ಬೆಟ್ಟದಲ್ಲಿರುವ ಪಟ್ಟಾಭಿರಾಮ ದೇವಾಲಯಕ್ಕೆ ಶ್ರಾವಣ ಮಾಸದಲ್ಲಿ ರಾಜ್ಯ ಹೊರರಾಜ್ಯಗಳ ಪ್ರವಾಸಿಗರು ಬೇಟಿ ನೀಡುತ್ತಾರೆ. ಶ್ರೀ ರಾಮಚಂದ್ರರು ನನ್ನ ಪರಿವಾರ ಸಮೇತರಾಗಿ ಇವತ್ತಿಗೂ ಈ ಬೆಟ್ಟದಲ್ಲಿ ನೆಲೆಸಿದ್ದಾರೆ ಎಂದು ಭಕ್ತಾದಿಗಳ ನಂಬಿಕೆಯಾಗಿದ್ದು, ಇಂದಿಗೂ ಈ ಬೆಟ್ಟವನ್ನು ಅತ್ಯಂತ ಪೂಜನೀಯವಾಗಿ ನೋಡುತ್ತಾರೆ. ಸಮುದ್ರ ಮಟ್ಟದಿಂದ 1000 ಅಡಿಗಳಿಗಿಂತ ಎತ್ತರದಲ್ಲಿರುವ ಈ ಬೆಟ್ಟ ಚಾರಣ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಈ ಸ್ಥಳ ವಾರಾಂತ್ಯದ ಪ್ರವಾಸಕ್ಕೆ ಪ್ರಶಸ್ತವಾದ ಸ್ಥಳವಾಗಿದೆ. ಇದು ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೆ, ಐತಿಹಾಸಿಕ ಮತ್ತು ಧಾಮಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ರಣಹದ್ದು ಅಭಯಾರಣ್ಯವು ಅಧಿಕೃತವಾಗಿ 2012 ರಲ್ಲಿ ಸ್ಥಾಪಿಸಲ್ಪಟ್ಟಿತು, ಆದರೆ ದೀರ್ಘ ದಶಕಗಳ ಕಾಲ, ಈಜಿಪ್ಟಿನ ಮತ್ತು ಬಿಳಿ-ಬೆಂಬಲಿತ ರಣಹದ್ದುಗಳು ಹಲವಾರು ದಶಕಗಳಿಂದ ರಾಮನಗರ ಬೆಟ್ಟಗಳಲ್ಲಿ ಸುತ್ತುವರೆದಿವೆ. ಭಾರತದಲ್ಲಿ ಕಂಡುಬರುವ ಒಂಬತ್ತರಲ್ಲಿ ರಾಮನಗರದಲ್ಲಿ ಕಂಡುಬರುವ ಮೂರು ಜಾತಿಗಳೆಂದರೆ. ವರ್ಷಗಳಲ್ಲಿ ರಣಹದ್ದು ಜನಸಂಖ್ಯೆಯ ಕುಸಿತದ ಬಗ್ಗೆ ಎಚ್ಚರಿಕೆಯಿಂದ – ಅಂದಾಜು 97% ನಷ್ಟು ಉದ್ದದ ಮತ್ತು ಈಜಿಪ್ಟಿನ ರಣಹದ್ದುಗಳ 99% ಕಣ್ಮರೆಯಾಗಿವೆ – ಪರಿಸರವಾದಿಗಳು ಮತ್ತು ಪಕ್ಷಿ ವೀಕ್ಷಕರು ಪ್ರದೇಶವನ್ನು ಅಭಯಾರಣ್ಯವೆಂದು ಘೋಷಿಸಲು ಪ್ರಚಾರ ಮಾಡಿದರು. 2012 ರಲ್ಲಿ ಸುಮಾರು 346.41 ಹೆಕ್ಟೇರ್ಗಳನ್ನು ರಣಹದ್ದುಗಳಿಗೆ ರಕ್ಷಿತ ಪ್ರದೇಶವಾಗಿ ಮೀಸಲಿರಿಸಲಾಯಿತು. ನಕ್ಷೆಯ ಈ ತೇಪೆಯೊಳಗೆ ಪ್ರಸ್ತಾವಿತ ಶೋಲೆ ಥೀಮ್ ಪಾರ್ಕ್ ಇದೆ. Ramadevara Betta Nestled amidst the picturesque landscape of Ramanagara, Karnataka, Ramadevara Betta stands as a prominent hill that holds not only natural beauty but also a rich historical and spiritual significance. This ancient hillock, also known as Ramagiri, is a popular destination for history enthusiasts, trekkers, and spiritual seekers alike. Most visited place in Ramanagara, Historical place in Ramanagar, Karnataka tourist places, Tourist place in Near Bangalore, Hill Station in Ramanagar