У нас вы можете посмотреть бесплатно Jatra Mahotsava in Gadag Shivanand Math : ಶಿವಾನಂದ ಮಠದಲ್ಲಿ ನಡೆಯಿತು ಅದ್ಧೂರಿ ಜಾತ್ರೆ | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಉತ್ತರ ಕನ್ನಡದ ಪ್ರಮುಖ ಮಠಗಳಲ್ಲಿ ಒಂದಾದ ಶಿವಾನಂದ ಮಠದ ಜಾತ್ರೆ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿದೆ. ಕೊರೊನಾ ಕಾಲದ ಮೊಲದ ಜಾತ್ರೆ ಇದಾಗಿದ್ದು, ಈ ಅದ್ಧೂರಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ರು. ಭಕ್ತಿಭಾವದಲ್ಲಿ ತೇಲಿ, ಅಜ್ಜನ ಸ್ಮರಣೆ ಮಾಡಿದ್ರು. ಕೋವಿಡ್‌ನಿಂದಾಗಿ ಎರಡು ವರ್ಷಗಳ ಬಳಿಕ ನಡೆದ ಶಿವಾನಂದ ಮಠದ ಜಾತ್ರೆ, ಅಪಾರ ಭಕ್ತರ ಸಮ್ಮುಖದಲ್ಲಿ ಅಜ್ಜನ ತೇರು ಅದ್ಧೂರಿಯಾಗಿ ನಡೆದಿದೆ. ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಮುಖ್ಯ ಆಕರ್ಷಣೆ. ಅಡ್ಡ ಪಲ್ಲಕ್ಕಿಯಲ್ಲಿ ಈ ಬಾರಿ ಮಠದ ಹಿರಿಯ ಶ್ರೀಗಳಾದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಆಸೀನರಾದ್ರು. ಶ್ರೀಗಳಿಗೆ ಕಿರಿಯ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಸಾಥ್ ನೀಡಿದ್ರು.. ಈ ಬಾರಿಯದ್ದು 101ನೇ ವರ್ಷದ ಜಾತ್ರಾ ಮಹೋತ್ಸವ ಆಗಿದ್ದುಮ ಫೆಬ್ರವರಿ 26 ನೇ ತಾರೀಕಿನಿಂದ ಮೂರು ದಿನ ಸಧರ್ಮ ಪರಿಷತ್, ಮಾರ್ಚ್ 1 ನೇ ತಾರೀಕು ಮಹಾ ಶಿವರಾತ್ರಿ ನಡೆದ್ರೆ, 2 ನೇ ತಾರೀಕು ಅಡ್ಡಪಲ್ಲಕ್ಕಿ ಉತ್ಸವದ ಜೊತೆ ಅದ್ಧೂರಿ ರಥೋತ್ಸವ ನಡೆಯಿತು. ಸುತ್ತಲಿನ ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ಬಾಗಲಕೋಟ ಜಿಲ್ಲೆ ಸೇರಿದಂತೆ 70 ಗ್ರಾಮಗಳಿಂದ ಭಕ್ತಾಧಿಗಳು ಅಜ್ಜನ ರಥೋತ್ಸವವನ್ನು ಕಣ್ತುಂಬಿಕೊಂಡರು. ಹಿಂದೂ, ಮುಸ್ಲಿಂ ಬೇಧ ಇಲ್ಲದೇ ಸಾವಿರಾರು ಮಂದಿ ಜಾತ್ರೆಯಲ್ಲಿ ಭಾಗಿಯಾಗಿ ಸಂತಸ ಪಟ್ರು. ಕೊರೋನಾ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ತೀರಾ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದರಿಂದ ಭಾರೀ ಜನಸ್ತೋಮವೇ ಸೇರಿತ್ತು. ಭಕ್ತಿಯ ಉನ್ಮಾದಲ್ಲಿ ಮಿಂದೆದ್ದ ಭಕ್ತರು ಅಜ್ಜನ ಕೃಪೆಗೆ ಪಾತ್ರರಾದರು.ಜಾತಿ ಧರ್ಮ ಬೇಧವಿಲ್ಲದೇ ಜನ ಜಾತ್ರೆಯಲ್ಲಿ ಪಾಲು ಪಡೆದು ಸೌಹಾರ್ದ ಮೆರೆದರು. #Gadag #ShivanandMath #Jatre Our website: https://Vijaykarnataka.com Facebook: / vijaykarnataka Twitter: / vijaykarnataka