У нас вы можете посмотреть бесплатно olide yatakamma lakumi vasudevage/ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ / gurugopala vittala ankita или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ದಾಸಪ್ಪ ದಾಸರ ರಚನೆ ಗುರು ಗೋಪಾಲ ವಿಠ್ಠಲ ಅಂಕಿತ 🙏 ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ || ಪ || ಹಲವಂಗದವನ ಹವಣೆ ತಿಳಿದೂ ತಿಳಿದು ತಿಳಿಯದ್ಹಾಂಗೆ || ಅ ಪ || ಕಮಲಗಂಧಿ ಕೋಮಲಾಂಗಿ| ಸುಂದರಾಬ್ಜ ವದನೆ ನೀನು| ರಮಣ ಮತ್ಸ್ಯ ಕಠಿಣಕಾಯ| ಸೂಕರಾಸ್ಯನು| ರಮಣೀಯ ಸ್ವರೂಪಿ ನೀನು ಅಮಿತ ಘೋರ ರೂಪನವನು| ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || 1 || ಜಾಣೆ ರತ್ನಾಕರನ ಮಗಳು| ನೀನು ಶುದ್ಧ ಭೃಗುಜನವನು| ಆನಂದಾಬ್ಜ ಸದನೆ ನೀನು ವನವಾಸಿ ಅವನು| ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಕಾಮಿ ಅವನು| ಜ್ಞಾನ ಚಿತ್ರವಸನೆ ನೀನು| ಹೀನ ಚೈಲದವನಿಗೆ || 2 || ಲಲಿತೆ ಚಾರುಶೀಲೆ ನೀನು ಕಲಕಿ ಕಲಹ ಪ್ರಿಯನು ಅವನು| ಕುಲದ ಕುರುಹು ಇಲ್ಲ ಇನ್ನು ನೆಲೆಯು ಗಂಡಿಲ್ಲ| ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು| ಜಲದಿ ಆಲದೆಲೆಯ ಮೇಲೆ ಮಲಗಿ ಬೆರಳ ಸವಿವವನಿಗೆ || 3 || ಅವನ ವಾರ್ತೆ ಕೇಳಿದವರು ಒಲ್ಲರೊ ಸಂಸಾರವನ್ನು| ಅವನ ಮೂರ್ತಿ ನೋಡಿ ಮನೆಯ ಧನವ ಬಿಡುವರೋ| ಅವನ ಪುರಕೆ ಪೋದ ಜನರು ಒಮ್ಮಿಗನ್ನು ಹಿಂತಿರುಗರು| ಅವನು ತಾನೆ ತನಯರ ತನ್ನವಯವದಿಂದ ಪಡೆದವಗೆ || 4 || ಸ್ವರತ ಅನಪೇಕ್ಷ ಕಾಮಿ| ನಿದ್ರಾಹೀನ ಅನಶ ನೀನು| ಸ್ಪರುಷರೂಪ ಶಬ್ದವಾಚ್ಯ ಅಮಿತ ಭೋಕ್ತನು| ಗುರು ಗೋಪಾಲ ವಿಠಲನು ನಿರುತ ತನ್ನ ವಕ್ಷದೊಳು| ಅರಮನೆಯ ಮಾಡಿಟ್ಟು ಮರುಳು ಮಾಡಿದ ಮಾಯಾವಿಗೆ || 5 ||