У нас вы можете посмотреть бесплатно Tiliyado ninnata tirupatiya venkata / ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಕಲ್ಲೂರು ಸುಬ್ಬಣ್ಣ ಆಚಾರ್ಯರ ಕೃತಿ ವ್ಯಾಸ ವಿಠ್ಠಲ ಅಂಕಿತ ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲಧ್ವನಿಗೆ ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣೆಗಾರನೆ|| ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ | ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ | ನೀರೊಳಗೆ ಮನೆ ಭಾರ ಬೆನ್ನಿಲಿ ಕೋರದಾಡೆಯ ನಾರಸಿಂಹನೆ | ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ | ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ|| ಸಕಲ ಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು | ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು | ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ | ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ | ರುಕುಮನನುಜೆಯ ರಮಣ ಬೌದ್ದನೆ ಲಕುಮಿರಮಣನೆ ಕಲ್ಕಿರೂಪಿಯೆ|| ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ | ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ | ಕಣ್ಣುಮುchcದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ | ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ | ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ|| -ಕಲ್ಲೂರು ಸುಬ್ಬಣ್ಣಾಚಾರ್ಯರು (ವ್ಯಾಸ ವಿಠ್ಠಲ)