У нас вы можете посмотреть бесплатно ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ | ಕ್ರೀಡಾಪಟುಗಳಿಗೆ ಸನ್ಮಾನ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಮನಗರ ಸರ್ಕಾರಿ ಕಾನೂನು ಕಾಲೇಜು ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಾಮನಗರದಲ್ಲಿಂದು ಅಂತರ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ನಗರಸಭೆ ಆಯುಕ್ತ ಡಾ. ಜಯಣ್ಣ ಚಾಲನೆ ನೀಡಿದರು. ಈ ವೇಳೆ ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ ಎಸ್ ನಾಗಶೇಷಮ್ಮ, ವಿವಿಧ ಜಿಲ್ಲೆಯ 17 ಕಾನೂನು ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜಿಲ್ಲೆಯ ಹಿರಿಯ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸಿಂಧೂಶ್ರೀ ಅವರನ್ನು ಇದೇ ವೇಳೆ ಗೌರವಿಸಲಾಯಿತು. ಬಳಿಕ ಡಾ.ಜಯಣ್ಣ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈಯುತ್ತಿದ್ದು, ಪುರಷರಿಗೆ ಸಮಾನರಾಗಿದ್ದಾರೆ. ಕಬಡ್ಡಿಯಲ್ಲೂ ಅದೇ ರೀತಿ ರಾಜ್ಯ, ಅಂತರರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಸಲು ಇಂತಹ ಸ್ಪರ್ಧೆಗಳು ಅಗತ್ಯ ಎಂದರು. ದೂರದರ್ಶನದೊಂದಿಗೆ ವಿದ್ಯಾರ್ಥಿನಿ ಎಂ.ಯೋಗಿನಿ, ಅಂತರ್ ವಿಶ್ವವಿದ್ಯಾಲಯದ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ಸಂಗತಿ. ಪಂದ್ಯದಲ್ಲಿ ಸೋಲು ಗೆಲುವಿಗಿಂತ ಇಂತಹ ಕಾರ್ಯಕ್ರಮಗಳಿಂದ ಅಂತರ್ ಕಾಲೇಜುಗಳ ಬಾಂಧವ್ಯ ಹೆಚ್ಚುತ್ತದೆ ಎಂದು ಹೇಳಿದರು. ಮತ್ತೊಬ್ಬ ವಿದ್ಯಾರ್ಥಿನಿ ಹರ್ಷಿತ, ಕಬಡ್ಡಿ ಪಂದ್ಯಾವಳಿ ಆಯೋಜನೆಯಿಂದ ಕಬಡ್ಡಿ ಪ್ರೋತ್ಸಾಹಿಸುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಾಗೇಶೇಷಮ್ಮ, ವಿದ್ಯಾರ್ಥಿನಿಯರು ಕಬಡ್ಡಿ ಆಟಕ್ಕೆ ಆಸಕ್ತಿ ತೋರುತ್ತಿದ್ದು, ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಂದೆ ಬರುತ್ತಿರುವುದು ಖುಷಿಯ ಸಂಗತಿ. ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಸ್ಪರ್ಧಿಸಲು ಮುಂದಾಗುತ್ತಿದ್ದಾರೆ ಎಂದರು. #LiveDDChandanaNews #DDChandanaNews #DDChandana #DDKannada